ನಗರದ ಸಂಡೆ ಬಜಾರ್ ಸೇರಿದಂತೆ ವಿವಿಧೆಡೆ ನಗರಪಾಲಿಕೆಯು ಬೀದಿಬದಿ ವ್ಯಾಪಾರಿಗಳ ಕಾನೂನಿನ ವಿರುದ್ಧವಾಗಿ ಮಹಾನಗರ ಪಾಲಿಕೆ ಕಾರ್ಯಾಚರಣೆಯಿಂದ ಸಂತ್ರಸ್ತರಾಗಿರುವ ಬೀದಿಬದಿ ವ್ಯಾಪಾರಿಗಳು ಶುಕ್ರವಾರ ಸಾಮೂಹಿಕವಾಗಿ ಜಿಲ್ಲಾಧಿಕಾರಿಗಳ ಭೇಟಿ ಮಾಡಿದರು.ನಮ್ಮ ಜೀವನಕ್ಕಾಗಿ ಬೀದಿಬದಿ ವ್ಯಾಪಾರ ಮಾತ್ರ ನಮಗಿರುವ ದಾರಿ, ನಮ್ಮ ಮಕ್ಕಳ ಭವಿಷ್ಯಕ್ಕೆ ಆಸರೆ ಆಗಿರುವ ಬೀದಿ ವ್ಯಾಪಾರವನ್ನು ನಂಬಿ ಬದುಕುತ್ತಿದ್ದೇವೆ. ನಮ್ಮ ಬದುಕುವ ಹಕ್ಕನ್ನು ರಕ್ಷಣೆ ಮಾಡಿ ಪರ್ಯಾಯ ವ್ಯವಸ್ಥೆ ಮಾಡಿಕೊಡುವಂತೆ ಜಿಲ್ಲಾಧಿಕಾರಿಗಳಲ್ಲಿ ಅಲವತ್ತುಕೊಂಡರು.

ಮಂಗಳೂರು: ನಗರದ ಸಂಡೆ ಬಜಾರ್ ಸೇರಿದಂತೆ ವಿವಿಧೆಡೆ ನಗರಪಾಲಿಕೆಯು ಬೀದಿಬದಿ ವ್ಯಾಪಾರಿಗಳ ಕಾನೂನಿನ ವಿರುದ್ಧವಾಗಿ ಮಹಾನಗರ ಪಾಲಿಕೆ ಕಾರ್ಯಾಚರಣೆಯಿಂದ ಸಂತ್ರಸ್ತರಾಗಿರುವ ಬೀದಿಬದಿ ವ್ಯಾಪಾರಿಗಳು ಶುಕ್ರವಾರ ಸಾಮೂಹಿಕವಾಗಿ ಜಿಲ್ಲಾಧಿಕಾರಿಗಳ ಭೇಟಿ ಮಾಡಿದರು.ನಮ್ಮ ಜೀವನಕ್ಕಾಗಿ ಬೀದಿಬದಿ ವ್ಯಾಪಾರ ಮಾತ್ರ ನಮಗಿರುವ ದಾರಿ, ನಮ್ಮ ಮಕ್ಕಳ ಭವಿಷ್ಯಕ್ಕೆ ಆಸರೆ ಆಗಿರುವ ಬೀದಿ ವ್ಯಾಪಾರವನ್ನು ನಂಬಿ ಬದುಕುತ್ತಿದ್ದೇವೆ. ನಮ್ಮ ಬದುಕುವ ಹಕ್ಕನ್ನು ರಕ್ಷಣೆ ಮಾಡಿ ಪರ್ಯಾಯ ವ್ಯವಸ್ಥೆ ಮಾಡಿಕೊಡುವಂತೆ ಜಿಲ್ಲಾಧಿಕಾರಿಗಳಲ್ಲಿ ಅಲವತ್ತುಕೊಂಡರು.ಬೀದಿವ್ಯಾಪಾರಿಗಳ ಅಹವಾಲು ಸ್ವೀಕರಿಸಿದ ಜಿಲ್ಲಾಧಿಕಾರಿಗಳು ಸಕಾರಾತ್ಮಕವಾಗಿ ಸ್ಪಂದಿಸುವ ಭರವಸೆ ನೀಡಿದರಲ್ಲದೆ, ಪರ್ಯಾಯ ವ್ಯವಸ್ಥೆಗಾಗಿ ಸೂಕ್ತವಾದ ಮೂರು ಕಡೆಗಳಲ್ಲಿ ಆದ್ಯತಾ ಜಾಗವನ್ನು ಬೀದಿಬದಿ ವ್ಯಾಪಾರಸ್ಥರ ಸಂಘದ ಪ್ರತಿನಿಧಿಗಳು ಸೂಚಿಸಿದಲ್ಲಿ ಪರಿಶೀಲನೆ ನಡೆಸುತ್ತೇನೆ ಎಂದು ಭರವಸೆ ನೀಡಿದರು.ಈ ಸಂದರ್ಭದಲ್ಲಿ ಸಂಘದ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್, ದ.ಕ. ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಸಂಘದ ಗೌರವಾಧ್ಯಕ್ಷ ಬಿ.ಕೆ. ಇಮ್ತಿಯಾಜ್, ಪ್ರಮುಖರಾದ ಮುಜಾಫರ್ ಅಹ್ಮದ್, ಸಂತೋಷ್ ಆರ್.ಎಸ್., ಹಂಝ ಮೊಹಮ್ಮದ್, ಸಿಕಂದರ್ ಬೇಗ್, ಎಂ. ಎನ್. ಶಿವಪ್ಪ, ವಿಜಯ್ ಜೈನ್, ಗುಡ್ಡಪ್ಪ, ಶಿವಾನಂದ, ಫಕೀರ ನಾಯ್ಕ್, ನಾಗರಾಜ, ಹನುಮಂತ ನಾಯ್ಕ್, ಚಂದ್ರಶೇಖರ ರಾವ್, ಚಂದ್ರಹಾಸ್ ಪಡೀಲ್, ಅಶ್ರಫ್, ಪ್ರದೀಪ್, ಸೆಲ್ವರಾಜ್, ರಿಯಾಜ್ ಮದಕ, ಲಕ್ಕಮ್ಮ, ಗದಿಗಪ್ಪ ಮತ್ತಿತರರಿದ್ದರು.