ಸಾರಾಂಶ
ಕನ್ನಡಪ್ರಭ ವಾರ್ತೆ ಉಳ್ಳಾಲ
ಸ್ನಾತಕೋತ್ತರ ಕಾರ್ಯಕ್ರಮಗಳಿಗೆ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳ ಪ್ರವೇಶಕ್ಕೆ ಅನುಕೂಲವಾಗುವಂತೆ ಹಾಗೂ ಹೆಚ್ಚಿನ ವಿದ್ಯಾ ಆಕಾಂಕ್ಷಿಗಳಿಗೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಕಾಲಕ್ಕೆ ತಕ್ಕಂತೆ ತಿದ್ದುಪಡಿ ಅಗ್ಯವಾಗಿದೆ. ಅದರಂತೆ ಮಂಗಳೂರು ವಿವಿಯ ವಿಜ್ಞಾನ ಮತ್ತು ತಂತ್ರಜ್ಞಾನ ನಿಕಾಯ ಸಭೆಯಲ್ಲಿ ಅನುಮೋದನೆ ಪಡೆದಿರುವ ತಿದ್ದುಪಡಿಯನ್ನು ಶೈಕ್ಷಣಿಕ ಮಂಡಳಿ ಸಭೆಯಲ್ಲಿ ಅನುಮೋದಿಸುವುದಾಗಿ ಮಂಗಳೂರು ವಿ.ವಿ. ಕುಲಪತಿ ಪ್ರೊ.ಪಿ.ಎಲ್.ಧರ್ಮ ತಿಳಿಸಿದ್ದಾರೆ.ಮಂಗಳಗಂಗೋತ್ರಿಯಲ್ಲಿ ಶುಕ್ರವಾರ ನಡೆದ ಮಂಗಳೂರು ವಿಶ್ವವಿದ್ಯಾನಿಲಯದ ಶೈಕ್ಷಣಿಕ ಮಂಡಳಿಯ 2025-26ನೆ ಸಾಲಿನ ಪ್ರಥಮ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ವಿಜ್ಞಾನ ಮತ್ತು ತಂತ್ರಜ್ಞಾನ, ಕಲಾ ಮತ್ತು ವಾಣಿಜ್ಯ ಸ್ನಾತಕೋತ್ತರ ತರಗತಿಗಳಿಗೆ ಪ್ರವೇಶಾತಿ ಉತ್ತೇಜಿಸುವ ಉದ್ದೇಶದಿಂದ ಪಠ್ಯಕ್ರಮಗಳ ಪರಿಷ್ಕಣೆಗೆ ಅನುಮೋದನೆ ನೀಡಲಾಯಿತು.ಅದರಂತೆ ಮೂರು ನಿಕಾಯಗಳ ಒಟ್ಟು 24 ವಿಷಯಗಳಿಗೆ ಸಂಬಂಧಿಸಿ ಪಠ್ಯಕ್ರಮ ಪರಿಷ್ಕರಣೆಗೊಳಿಸಲಾಗಿದೆ ಎಂದು ಪ್ರೊ. ಧರ್ಮ ಸಭೆಗೆ ತಿಳಿಸಿದರು.ರಾಜ್ಯ ಶಿಕ್ಷಣ ನೀತಿ ಆಯೋಗದ ಮಾರ್ಗಸೂಚಿಯನ್ವಯ ವಿಜ್ಞಾನ ಮತ್ತು ತಂತ್ರಜ್ಞಾನ, ನಿಕಾಯ, ಕಲಾ ನಿಕಾಯ, ವಾಣಿಜ್ಯ ನಿಕಾಯಗಳ ವ್ಯಾಪ್ತಿಗೊಳಪಡುವ ಪದವಿ ಕಾರ್ಯಕ್ರಮಗಳ ಪಠ್ಯಕ್ರಮಗಳಿಗೆ ಅನುಮೋದನೆ ನೀಡಲಾಯಿತು.ಪದವಿ ತರಗತಿಗಳ ವಿದ್ಯಾರ್ಥಿಗಳಿಗೆ 2023-24ನೆ ಸಾಲಿನಿಂದ ಪ್ರಮಾಣ ಪತ್ರಗಳ ನೀಡುವಿಕೆಯಲ್ಲಿ ವಿಳಂಬವಾಗಿತ್ತು.ಈಗಾಗಲೇ ಪದವಿ ತರಗತಿಗಳಿಗೆ ಸಂಬಂಧಿಸಿ 13570 ಅಂಕಪಟ್ಟಿ ಆಯಾ ಕಾಲೇಜು ಗಳಿಗೆ ಕಳುಹಿಸಲಾಗಿದ್ದು, ಸುಮಾರು 5000 ವಿದ್ಯಾರ್ಥಿಗಳ ಅಂಕಪಟ್ಟಿ ಕೆಲ ತಾಂತ್ರಿಕ ದೋಷದ ಕಾರಣ ಬಾಕಿಯಾಗಿವೆ. ಪಿಜಿ ವಿಭಾಗದಲ್ಲಿ 1637 ಮಂದಿಗೆ ಅಂಕಪಟ್ಟಿ ಒದಗಿಸಲಾಗಿದೆ ಎಂದು ಕುಲಪತಿ ಪ್ರೊ. ಪಿ.ಎಲ್. ಧರ್ಮ ಹೇಳಿದರು.2025-26ನೆ ಸಾಲಿನ ಪದವಿ ಹಾಗೂ ಸ್ನಾತಕೋತ್ತರ ಪದವಿ ತರತಿಗಳನ್ನು ಆಗಸ್ಟ್ 2ನೆ ವಾರದೊಳಗೆ ಆರಂಭಿಸಲು ಚಿಂತಿಸಲಾಗಿದೆ. ರಾಜ್ಯ ಸರ್ಕಾರದಿಂದ ಏಕರೂಪದ ವೇಳಾಪಟ್ಟಿ ಹಾಗೂ ಪಠ್ಯಕ್ರಮ ಅನುಸರಣೆಯ ಸೂಚನೆಯನ್ನೂ ಎದುರು ನೋಡಲಾಗುತ್ತಿದೆ. ಪ್ರಸಕ್ತ ಸಾಲಿನ ಪದವಿ ಹಾಗೂ ಸ್ನಾತ ಕೋತ್ತರ ಪದವಿ ತರಗತಿಗಳ ಪರೀಕ್ಷೆಗಳು ಜುಲೈನಲ್ಲಿ ಪೂರ್ಣಗೊಳ್ಳಲಿವೆ. ಪದವಿ ತರಗತಿಗಳ 6ನೆ ಸೆಮಿಸ್ಟರ್‌ನ ಫಲಿತಾಂಶ ಶೀಘ್ರದಲ್ಲಿ ಘೋಷಿಸಲು ಪ್ರಯತ್ನಗಳು ನಡೆಯುತ್ತಿವೆ ಎಂದರು.ಕುಲಸಚಿವ (ಪರೀಕ್ಷಾಂಗ) ದೇವೇಂದ್ರಪ್ಪ, (ಹಣಕಾಸು) ಸಂಗಪ್ಪ ಉಪಸ್ಥಿತರಿದ್ದರು.ಪರಿಷ್ಕೃತ ಪಠ್ಯಕ್ರಮಗಳ ವಿವರ: ಕಲಾ ನಿಕಾಯದಲ್ಲಿ ಸ್ನಾತಕೋತ್ತರ ಕನ್ನಡ ಕಾರ್ಯಕ್ರಮದ ನಾಲ್ಕನೆ ಸೆಮಿಸ್ಟರ್‌ನ ಹೊಸ ಕೋರ್ಸ್, ಮಹಿಳಾ ಅಧ್ಯಯನ ಕೇಂದ್ರದ ವತಿಯಂದ ನಡೆಸಲಾಗುವ ಮುಕ್ತ ಆಯ್ಕೆ ಕೋರ್ಸ್, ವಿಜ್ಞಾನ ಮತ್ತು ತಂತ್ರಜ್ಞಾನ ನಿಕಾಯದಲ್ಲಿ ಪಿಜಿ ಡಿಪ್ಲೊಮಾ ಇನ್ ಮೆಟೇರಿಯಲ್ ಸಯನ್ಸ್ ಕಾರ್ಯಕ್ರಮ, ಸ್ನಾತಕೋತ್ತರ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ಕಾರ್ಯಕ್ರಮ, ಡಿಪ್ಲೊಮಾ ಇನ್ ಫೈರ ಆ್ಯಂಡ್ ಇಂಡಸ್ಟ್ರಿಯಲ್ ಸೇಫ್ಟಿ ಕಾರ್ಯಕ್ರಮ, ರಸಾಯನಶಾಸ್ತ್ರ ಪಿಚಎಚ್ ಕಾರ್ಯಕ್ರಮದ ಕೋರ್ಸ್ ವರ್ಕ್, ಸ್ನಾತಕೋತ್ತರ ಪ್ರಾಣಿಶಾಸ್ತ್ರ ಕಾರ್ಯಕ್ರಮ, ಸ್ನಾತಗೋತ್ತರ ಮನಃಶಾಸ್ತ್ರ ಕಾರ್ಯಕ್ರಮ, ಸ್ನಾತಕೋತ್ತರ ಜೀವರಸಾಯನಶಾಸ್ತ್ರ ಕಾರ್ಯಕ್ರಮ, ಸ್ನಾತಕೋತ್ತ ಜೈವಿಕ ತಂತ್ರಜ್ಞಾನ ಕಾರ್ಯಕ್ರಮ, ಸ್ನಾತಕೋತ್ತರ ಸಸ್ತಶಾಸ್ತ್ರ ಕಾರ್ಯಕ್ರಮ, ಸ್ನಾತಕೋತ್ತರ ಫುಡ್ ಆ್ಯಂಡ್ ನ್ಯೂಟ್ರಿಶಿಯನ್ ಕಾರ್ಯಕ್ರಮ, ಸ್ನಾತಕೋತ್ತರ ಜಿಯೋ- ಇನ್ಸಾರ್ಮೆಟಿಕ್ಸ್ ಕಾರ್ಯಕ್ರಮ, ಸ್ನಾತಕೋತ್ತರ ಸಾಗರ ಭೂ ವಿಜ್ಞಾನ ಕಾರ್ಯಕ್ರಮ, ಸ್ನಾತಕೋತ್ತರ ಸೂಕ್ಷ್ಮಾಣು ಜೀವ ವಿಜ್ಞಾನ ಕಾರ್ಯಕ್ರಮ.ಬಿ.ಎಸ್.ಎಲ್.ಪಿ. ಪದವಿ ಕಾರ್ಯಕ್ರಮ, ಸ್ನಾತಕೋತ್ತರ ಕಂಪಯೂಟರ್ ಸಾಯನ್ಸ್ ಮತ್ತು ಕಂಪ್ಯೂಟರ್ ಅಪ್ಲಿಕೇಶನ್ ಕಾರ್ಯಕ್ರಮ, ಸ್ನಾತಕೋತ್ತರ ಇಲೆಕ್ಟ್ರಾನಿಕ್ಸ್ ಮತ್ತು ಸೈಬರ್ ಸೆಕ್ಯುರಿಟಿ ಕಾರ್ಯಕ್ರಮ, ಸ್ನಾತಕೋತ್ತರ ಕೈಗಾರಿಕಾ ರಸಾಯನಶಾಸ್ತ್ರ ಕಾರ್ಯಕ್ರಮ, ಸ್ನಾತಕೋತ್ತರ ವ್ಯವಹಾರ ಆಡಳಿತ (ಟೂರಿಸಂ ಆ್ಯಂಡ್ ಟ್ರಾವೆಲ್ ಮ್ಯಾನೇಜ್‌ಮೆಂಟ್) ಕಾರ್ಯಕ್ರಮ.
ಸ್ನಾತಕೋತ್ತರ ವಾಣಿಜ್ಯ ಕಾರ್ಯಕ್ರಮದ ಪ್ರಥಮ ಮತ್ತು ದ್ವಿತೀಯ ಸೆಮಿಸ್ಟರ್, ಸ್ನಾತಕೋತ್ತರ ವಾಣಿಜ್ಯ (ಎಚ್.ಆರ್.ಡಿ) ಕಾರ್ಯಕ್ರಮದ ಪ್ರಥಮ ಮತ್ತು ದ್ವಿತೀಯ ಸೆಮಿಸ್ಟರ್, ಸ್ನಾತಕೋತ್ತರ ವ್ಯವಹಾರ ಆಡಳಿತ ಕಾರ್ಯಕ್ರಮ ತೃತಿಯ ಮತ್ತು ಚತುರ್ಥ ಸೆಮಿಸ್ಟರ್ ಹೊಸ ಸಾಫ್ಟ್ ಕೋರ್ ಕೋರ್ಸ್‌ಗಳ ಪಠ್ಯ ಕ್ರಮಗಳನ್ನು ಪರಿಷ್ಕರಣೆಗೊಳಿಸಲಾಗಿದೆ.)
;Resize=(128,128))
;Resize=(128,128))
;Resize=(128,128))