ಈಜು ಸ್ಪರ್ಧೆಯಲ್ಲಿ ಮುಂದುವರಿದ ಮಂಗಳೂರಿಗರ ಚಿನ್ನದ ಬೇಟೆ

| Published : Jan 23 2025, 12:45 AM IST

ಈಜು ಸ್ಪರ್ಧೆಯಲ್ಲಿ ಮುಂದುವರಿದ ಮಂಗಳೂರಿಗರ ಚಿನ್ನದ ಬೇಟೆ
Share this Article
  • FB
  • TW
  • Linkdin
  • Email

ಸಾರಾಂಶ

ಅತ್ತಾವರದ ಮರೇನಾ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಬ್ಯಾಡ್ಮಿಂಟನ್‌ ಪುರುಷರ ಪಂದ್ಯದಲ್ಲಿ ಗ್ಲಾನಿಷ್‌ ಆಶ್ಲೆ ಪಿಂಟೋ ಅವರು ಶೋಧನ್‌ ನಕ್ಷತ್ರಿ ವಿರುದ್ಧ 2-0 ಅಂತರದಿಂದ ಗೆದ್ದಿದ್ದಾರೆ. ಮಹಿಳಾ ವಿಭಾಗದ ಸಿಂಗಲ್ಸ್‌ನಲ್ಲಿ ತ್ರಿವಿಯಾ ವೇಗಸ್‌ ಅವರು ಅನನ್ಯಾ ಸುರೇಶ್‌ ವಿರುದ್ಧ 2-0 ಅಂತರದಿಂದ ಗೆಲುವು ಪಡೆದಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಮಂಗಳೂರಿನಲ್ಲಿ ನಡೆಯುತ್ತಿರುವ ಕರ್ನಾಟಕ ಕ್ರೀಡಾಕೂಟದ ಐದನೇ ದಿನ ಬುಧವಾರ ನಗರದ ಎಮ್ಮೆಕೆರೆ ಅಂತಾರಾಷ್ಟ್ರೀಯ ಈಜು ಕೊಳದಲ್ಲಿ ನಡೆದ ಈಜು ಸ್ಪರ್ಧೆಯಲ್ಲಿ ಎರಡನೇ ದಿನವೂ ಮಂಗಳೂರಿಗರ ಚಿನ್ನದ ಬೇಟೆ ಮುಂದುವರಿದಿದೆ.

ಪುರುಷದ ವಿಭಾಗದ ಈಜು ಸ್ಪರ್ಧೆಯಲ್ಲಿ ಮಂಗಳವಾರ ನಾಲ್ಕು ಚಿನ್ನ ಗೆದ್ದ ಮಂಗಳೂರಿನ ರಾಷ್ಟ್ರೀಯ ಈಜುಪಟು ಚಿಂತನ್‌ ಎಸ್‌.ಶೆಟ್ಟಿ ಅವರು ಬುಧವಾರ ಮತ್ತೆ ಚಿನ್ನ ಗೆದ್ದಿದ್ದು, ಒಟ್ಟು ಈಜು ಸ್ಪರ್ಧೆಯಲ್ಲಿ 35 ಅಂಕಗಳೊಂದಿಗೆ 5 ಚಿನ್ನದ ಪದಕ ಬಗಲಿಗೇರಿಸಿದ್ದಾರೆ. ಮಹಿಳಾ ವಿಭಾಗದಲ್ಲಿ ಎಸ್‌.ಆರ್‌.ರಚನಾ ರಾವ್‌ ಅವರು 33 ಅಂಕಗಳೊಂದಿಗೆ ನಾಲ್ಕು ಚಿನ್ನ ಗೆದ್ದಿದ್ದಾರೆ. ಇವರಿಬ್ಬರೂ ವೈಯಕ್ತಿಕ ಚಾಂಪ್ಯನ್ ಆಗಿ ಹೊರಹೊಮ್ಮಿದ್ದಾರೆ.

ಈಜು ಸ್ಪರ್ಧೆ ಫಲಿತಾಂಶ:

ಈಜು ಸ್ಪರ್ಧೆ ಪುರುಷರ 800 ಮೀ. ಪ್ರೀಸ್ಟೈಲ್‌ ವಿಭಾಗದಲ್ಲಿ ಅಕ್ವೆಟಿಕ್‌ ಸೆಂಟರ್‌ನ ಧ್ರುವ ಬಿ. ಪ್ರಥಮ ಚಿನ್ನ, ವಿಜಯನಗರ ಅಕ್ವೆಟಿಕ್‌ ಸೆಂಟರ್‌ನ ದೊನೀಸ್‌ ಎನ್‌. ದ್ವಿತೀಯ ಬೆಳ್ಳಿ, ಗ್ಲೋಬಲ್‌ ಸ್ವಿಮ್ಮಿಂಗ್‌ ಸೆಂಟರ್‌ನ ಸಚಿನ್‌ ವಿಶ್ವನಾಥ್‌ ತೃತೀಯ ಕಂಚು ಪಡೆದರು. ಪುರುಷರ 100ಮಿ. ಬಟರ್‌ಪ್ಲೈ ವಿಭಾಗದಲ್ಲಿ ಲಕ್ಷ್ಯ ಅಕಾಡೆಮಿಯ ಚಿಂತನ್‌ ಎಸ್‌. ಶೆಟ್ಟಿ ಪ್ರಥಮ, ಮಂಗಳೂರಿನ ಅಲೈಸ್ಟೆರ್‌ಸಾಮುವೆಲ್‌ ರೇಗೊ 2ನೇ ಸ್ಥಾನ, ಪುತ್ತೂರು ಅಕ್ವೆಟಿಕ್‌ ಸೆಂಟರ್‌ನ ಅನ್ವಿತ್‌ ರೈ 3ನೇ ಸ್ಥಾನ ಪಡೆದರು. ಪುರುಷರ 200 ಮೀ. ಬ್ಯಾಕ್‌ಸ್ಟ್ಟ್ರೊಕ್‌ ವಿಭಾಗದಲ್ಲಿ ಗ್ಲೋಬಲ್‌ ಸ್ವಿಮ್ಮಿಂಗ್‌ ಸೆಂಟರ್‌ನ ದ್ಯಾನ್‌ ಎಂ. ಪ್ರಥಮ, ಪುತ್ತೂರು ಅಕ್ವೆಟಿಕ್‌ ಸೆಂಟರ್‌ನ ದಿಗಂತ್‌ ವಿ.ಎಸ್‌. 2ನೇ ಸ್ಥಾನ, ಮಂಗಳೂರು ಸ್ವಿಮ್ಮಿಂಗ್‌ ಕ್ಲಬ್‌ನ ಹಬ್ದುಲ್‌ ಹಕೀಮ್‌ 3ನೇ ಸ್ಥಾನ ಪಡೆದಿದ್ದಾರೆ.ಮಹಿಳೆಯರ 800 ಮೀ. ಪ್ರೀಸ್ಟೈಲ್‌ ವಿಭಾಗದಲ್ಲಿ ಮಂಗಳೂರಿನ ನಮೃತಾ ಶೆಟ್ಟಿ ಚಾಂಪಿಯನ್‌ ಆಗಿ ಮೂಡಿಬಂದಿದ್ದಾರೆ.

ಮಹಿಳೆಯರ 200 ಮೀ. ಬ್ಯಾಕ್‌ಸ್ಟ್ಟ್ರೊಕ್‌ ವಿಭಾಗದಲ್ಲಿ ಗ್ಲೋಬಲ್‌ ಸ್ವಿಮ್ಮಿಂಗ್‌ ಸೆಂಟರ್‌ನ ತನ್ಮಯ್‌ ಪ್ರಥಮ, ಪುತ್ತೂರು ಅಕ್ವೆಟಿಕ್‌ ಸೆಂಟರ್‌ನ ಪಿ.ಸಿ. ಪಿಂಟೊ 2ನೇ ಸ್ಥಾನ, ಮಂಗಳೂರಿನ ನಮೃತಾ ಶೆಟ್ಟಿ 3ನೇ ಸ್ಥಾನ ಪಡೆದಿದ್ದಾರೆ. ಪುರುಷರ 200 ಮೀ. ಬ್ರೆಸ್ಟ್‌ಸ್ಟ್ಟ್ರೊಕ್‌ ವಿಭಾಗದಲ್ಲಿ ಬಸವನಗುಡಿ ಅಕ್ವೆಟಿಕ್‌ ಸೆಂಟರ್‌ನ ಸೂರ್ಯ ಜೋಯಪ್ಪ ಪ್ರಥಮ, ಪುತ್ತೂರು ಅಕ್ವೆಟಿಕ್‌ ಸೆಂಟರ್‌ನ ವಿ.ದೀಪಕ್‌ ರೈ 2ನೇ ಸ್ಥಾನ, ಮಂಡ್ಯದ ಪಾರ್ಥ ಪಿ. ಶೆಟ್ಟಿ 3ನೇ ಸ್ಥಾನ ಪಡೆದಿದ್ದಾರೆ. ಮಹಿಳೆಯರ 200 ಮೀ. ಬ್ರೆಸ್ಟ್‌ಸ್ಟ್ಟ್ರೊಕ್‌ ವಿಭಾಗದಲ್ಲಿ ಪುತ್ತೂರು ಅಕ್ವೆಟಿಕ್‌ ಸೆಂಟರ್‌ನ ಪ್ರತೀಕ್ಷಾ ಪ್ರಥಮ, ಮಂಗಳೂರಿನ ರೈನಾ ಧೃತಿ 2ನೇ ಸ್ಥಾನ ಪಡೆದಿದ್ದಾರೆ.ಮಹಿಳೆಯರ 400 ಮೀ. ಪ್ರೀಸ್ಟೈಲ್‌ ರಿಲೇ ವಿಭಾಗದಲ್ಲಿ ಮಂಗಳೂರು ಬಿ ತಂಡ ಚಾಂಪಿಯನ್‌ ಆಗಿದೆ. ಪುರುಷರ 400 ಮೀ. ಮಿಡ್ಲೈ ವಿಭಾಗದಲ್ಲಿ ಮಂಗಳೂರು ಎ ತಂಡ ಪ್ರಥಮ, ಮಂಗಳೂರು ಬಿ ತಂಡ 2ನೇ ಸ್ಥಾನ ಗಳಿಸಿದೆ.ಬ್ಯಾಡ್ಮಿಂಟನ್‌ ಫಲಿತಾಂಶ:

ಅತ್ತಾವರದ ಮರೇನಾ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಬ್ಯಾಡ್ಮಿಂಟನ್‌ ಪುರುಷರ ಪಂದ್ಯದಲ್ಲಿ ಗ್ಲಾನಿಷ್‌ ಆಶ್ಲೆ ಪಿಂಟೋ ಅವರು ಶೋಧನ್‌ ನಕ್ಷತ್ರಿ ವಿರುದ್ಧ 2-0 ಅಂತರದಿಂದ ಗೆದ್ದಿದ್ದಾರೆ. ಮಹಿಳಾ ವಿಭಾಗದ ಸಿಂಗಲ್ಸ್‌ನಲ್ಲಿ ತ್ರಿವಿಯಾ ವೇಗಸ್‌ ಅವರು ಅನನ್ಯಾ ಸುರೇಶ್‌ ವಿರುದ್ಧ 2-0 ಅಂತರದಿಂದ ಗೆಲುವು ಪಡೆದಿದ್ದಾರೆ. ಬಾಸ್ಕೆಟ್‌ಬಾಲ್‌ ಫಲಿತಾಂಶ:

ಮಣ್ಣಗುಡ್ಡೆಯ ಯು.ಎಸ್‌.ಮಲ್ಯ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಬಾಸ್ಕೆಟ್‌ಬಾಲ್‌ ಸ್ಪರ್ಧೆಯ ಪುರುಷರ ವಿಭಾಗ ಸೂಪರ್‌ ಲೀಗ್‌ನಲ್ಲಿ ಬ್ಯಾಂಕ್ ಆಫ್‌ ಬರೋಡಾ ತಂಡ ಅತಿಥೇಯ ದಕ್ಷಿಣ ಕನ್ನಡ ತಂಡವನ್ನು 63-45 ಅಂಕಗಳಿಂದ ಸೋಲಿಸಿ ಫೈನರ್‌ ಪ್ರವೇಶಿಸಿದೆ. ಮಹಿಳೆಯರಲ್ಲಿ ಮೌಂಟ್ಸ್‌ ಮಹಿಳಾ ತಂಡವು ಡೈಸ್‌ ಮೈಸೂರು ತಂಡದ ವಿರುದ್ಧ 43-45 ಅಂಕಗಳಿಂದ ಜಯಗಳಿಸಿದೆ. ಖೋಖೋ ಫಲಿತಾಂಶ: ಇಲ್ಲಿನ ನೆಹರೂ ಮೈದಾನದಲ್ಲಿ ನಡೆದ ಖೋಖೋ ಪಂದ್ಯದ ಪುರುಷರ ವಿಭಾಗದಲ್ಲಿ ಬೆಳಗಾವಿ ಹಾಗೂ ಬಾಗಲಕೋಟೆ ತಂಡ ಫೈನಲ್‌ ಪ್ರವೇಶಿಸಿದೆ. ಮಹಿಳಾ ವಿಭಾಗದಲ್ಲಿ ಬೆಳಗಾವಿ ಮತ್ತು ಮೈಸೂರು ತಂಡಗಳು ಪೈನಲ್‌ಗೆ ಲಗ್ಗೆ ಇಟ್ಟಿದೆ.ಸೆಮಿಫೈನಲ್‌ ಪುರುಷರ ವಿಭಾಗದಲ್ಲಿ ಬೆಳಗಾವಿ-ಧಾರವಾಡ ಹಾಗೂ ಬಾಗಲಕೋಟೆ-ರಾಯಚೂರು ನಡುವೆ ಸ್ಪರ್ಧೆಗಳು ನಡೆದಿವೆ. ಮಹಿಳಾ ವಿಭಾಗದಲ್ಲಿ ಮೈಸೂರು-ಬೆಂಗಳೂರು ಹಾಗೂ ಬೆಳಗಾವಿ ರಾಯಚೂರು ನಡುವೆ ಸ್ಪರ್ಧೆಗಳು ನಡೆದಿವೆ.

ಇಂದು ಫೈನಲ್ ಪಂದ್ಯಗಳು

ಕರ್ನಾಟಕ ಕ್ರೀಡಾಕೂಟದ ಫೈನಲ್‌ ಪಂದ್ಯಗಳು ಜ. 23ರಂದು ನಡೆಯಲಿವೆ. ಬಾಸ್ಕೆಟ್‌ಬಾಲ್‌, ಹ್ಯಾಂಡ್‌ಬಾಲ್‌, ಖೋಖೋ, ವಾಲಿಬಾಲ್‌ ಪಂದ್ಯಗಳು ನಡೆಯಲಿದೆ.