ನಾಳೆಯಿಂದಲೇ ಮಂಗ್ಳೂರಿಗೆ ದಿನಕ್ಕೊಮ್ಮೆ ನೀರು ಪೂರೈಕೆ, ಎಲ್ಲೆಲ್ಲಿ, ಯಾವಾಗ?

| Published : May 04 2024, 12:34 AM IST

ನಾಳೆಯಿಂದಲೇ ಮಂಗ್ಳೂರಿಗೆ ದಿನಕ್ಕೊಮ್ಮೆ ನೀರು ಪೂರೈಕೆ, ಎಲ್ಲೆಲ್ಲಿ, ಯಾವಾಗ?
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲಾ ವಿಪತ್ತು ಪ್ರಾಧಿಕಾರದ ಸಭೆ ನಡೆಸಲಾಗಿದ್ದು, ಅದರಲ್ಲಿ ಬೇಸಗೆ ಮುಕ್ತಾಯ ವರೆಗೆ ಕುಡಿಯುವ ನೀರಿನ ಕೊರತೆ ತಲೆದೋರದಂತೆ ಎಚ್ಚರಿಕೆ ವಹಿಸುವಂತೆ ಎಲ್ಲ ಅಧಿಕಾರಿಗಳಿಗೆ ಸೂಚಿಸಲಾಗಿದೆ.

ಕನ್ನಡಪ್ರಭ ವಾರ್ತೆ ಮಂಗಳೂರು

ತುಂಬೆ ಡ್ಯಾಂನಲ್ಲಿ ನೇತ್ರಾವತಿ ನದಿಯ ಒಳಹರಿವು ಕಡಿಮೆಯಾಗುತ್ತಿದ್ದು, ನೀರಿನ ಸಂಗ್ರಹ ಮಟ್ಟ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಮೇ 5 ರಿಂದ ಮಂಗಳೂರು ನಗರದಲ್ಲಿ ಕುಡಿಯುವ ನೀರಿನ ರೇಷನಿಂಗ್‌ ನಡೆಸಲು ಮಹಾನಗರ ಪಾಲಿಕೆ ನಿರ್ಧರಿಸಿದೆ. ಅದರಂತೆ ನಗರ ಪ್ರದೇಶದಲ್ಲಿ ದಿನ ಬಿಟ್ಟು ದಿನ ನೀರು ಪೂರೈಕೆಯಾಗಲಿದೆ.

ಜಿಲ್ಲಾಧಿಕಾರಿ ಮುಲ್ಲೈಮುಗಿಲನ್‌ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ಮಂಗಳೂರು ಪಾಲಿಕೆಯಲ್ಲಿ ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಮಹತ್ವದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.

ಅದರಂತೆ ಲಭ್ಯವಿರುವ ನೀರನ್ನು ಮಂಗಳೂರು ನಗರ ಪ್ರದೇಶಕ್ಕೆ (ಮಂಗಳೂರು ದಕ್ಷಿಣ) ಮತ್ತು ಸುರತ್ಕಲ್‌ ಪ್ರದೇಶಕ್ಕೆ (ಮಂಗಳೂರು ಉತ್ತರ) ಪರ್ಯಾಯ ದಿನಗಳಲ್ಲಿ ಕುಡಿಯುವ ನೀರು ಸರಬರಾಜುಗೊಳಿಸಲು ಕ್ರಮ ಕೈಗೊಳ್ಳಲಾಗಿದೆ. ಎಲ್ಲೆಲ್ಲಿ, ಯಾವಾಗ ನೀರು ಪೂರೈಕೆ?

ಮೇ 5 ರಂದು (ಬೆಸ ದಿನಗಳು)

ಬೆಂದೂರು ರೇಚಕ ಸ್ಥಾವರ-

ಕೋರ್ಟ್‌ ವಾರ್ಡ್‌, ರಥಬೀದಿ, ಬಾವುಟಗುಡ್ಡೆ ಟ್ಯಾಂಕ್‌, ಆಕಾಶವಾಣಿ ಟ್ಯಾಂಕ್‌, ಪದವು ಟ್ಯಾಂಕ್‌, ಗೋರಿಗುಡ್ಡೆ, ಸೂಟರ್‌ಪೇಟೆ, ಶಿವಭಾಗ್‌, ಬೆಂದೂರ್‌, ಕದ್ರಿ, ವಾಸ್‌ಲೇನ್‌, ಬೆಂದೂರ್‌ ಲೋ ಲೆವೆಲ್‌ ಪ್ರದೇಶಗಳಾದ ಕಾರ್‌ಸ್ಟ್ರೀಟ್‌, ಕುದ್ರೋಳಿ ಫಿಶ್ಶಿಂಗ್‌ ಹಾರ್ಬರ್‌, ಕೊಡಿಯಾಲಬೈಲ್‌

ಪಡೀಲು ರೇಚಕ ಸ್ಥಾವರ-

ಮಂಗಳಾದೇವಿ, ಅತ್ತಾವರ, ಬಾಬುಗುಡ್ಡೆ, ವೆಲೆನ್ಸಿಯಾ, ಜಪ್ಪಿನಮೊಗರು, ಬಿಕರ್ನಕಟ್ಟೆಟ್ಯಾಂಕ್‌, ಉಲ್ಲಾಸ್‌ ನಗರ, ಬಜಾಲ್‌, ತಿರುವೈಲು, ವಾಮಂಜೂರು

ಶಕ್ತಿ ನಗರ ಟ್ಯಾಂಕ್‌-

ಕುಂಜತ್ತಬೈಲ್‌, ಮುಗ್ರೋಡಿ, ಶಕ್ತಿನಗರ, ಸಂಜಯ ನಗರ, ಪ್ರೀತಿ ನಗರ, ಮಂಜಡ್ಕ, ರಾಜೀವನಗರ, ಬೋಂದೆಲ್‌, ಗಾಂಧೀನಗರ, ಶಾಂತಿನಗರ, ಕಾವೂರು

ತುಂಬೆ, ಪಣಂಬೂರು ಡೈರೆಕ್ಟ್ ಲೈನ್‌-

ಕಂಕನಾಡಿ, ನಾಗುರಿ, ಪಂಪ್‌ವೆಲ್‌, ಬಲ್ಲೂರುಗುಡ್ಡೆ, ಪಡೀಲ್‌ಮೇ 6 ರಂದು (ಸಮ ದಿನಗಳು):

ಪಣಂಬೂರು ರೇಚಕ ಸ್ಥಾವರ

ಸುರತ್ಕಲ್‌, ಎನ್‌ಐಟಿಕೆ, ಮುಕ್ಕ, ಹೊಸಬೆಟ್ಟು, ಕುಳಾಯಿ, ಜನತಾ ಕಾಲನಿ, ಬೈಕಂಪಾಡಿ, ಪಣಂಬೂರು, ಮೀನಕಳಿಯ

ಪಡೀಲ್‌ ರೇಚಕ ಸ್ಥಾವರ.

ಬಜಾಲ್‌, ಜಲ್ಲಿಗುಡ್ಡೆ, ಮುಗೇರು, ಎಕ್ಕೂರು, ಸದಾಶಿವ ನಗರ, ಅಳಪೆ, ಮೇಘ ನಗರ, ಮಂಜಳಿಕೆ, ಕಂಕನಾಡಿ ರೈಲ್ವೆ ನಿಲ್ದಾಣ ಪ್ರದೇಶ. ಕುಡುಪು, ಪಾಂಡೇಶ್ವರ, ಸ್ಟೇಟ್‌ಬ್ಯಾಂಕ್‌, ಗೂಡ್‌ಶೆಡ್‌, ದಕ್ಕೆ, ಕಣ್ಣೂರು, ನಿಡ್ಡೇಲ್‌, ಶಿವನಗರ, ಕೊಡಕ್ಕಲ್‌, ನೂಜಿ, ಸರಿಪಳ್ಳ, ಉಲ್ಲಾಸ್‌ನಗರ, ವೀರನಗರ.ಶಕ್ತಿನಗರ ಟ್ಯಾಂಕ್‌-

ಕಂಡೆಟ್ಟು, ಕುಲಶೇಖರ, ಮರೋಳಿ, ಕಕ್ಕೆಬೆಟ್ಟು, ಸಿಲ್ವರ್‌ ಗೇಟ್‌, ಕೊಂಗೂರು ಮಠ, ಪ್ರಶಾಂತ್‌ ನಗರ

ತುಂಬೆ-ಪಣಂಬೂರು ಡೈರೆಕ್ಟ್ ಲೈನ್‌-

ಮೂಡಾ ಪಂಪ್‌ಹೌಸ್‌, ಕೊಟ್ಟಾರ ಚೌಕಿ ಪಂಪ್‌ಹೌಸ್‌, ಕೂಳೂರು ಪಂಪ್‌ಹೌಸ್‌, ಕಾಪಿಕಾಡ್‌, ದಡ್ಡಲಕಾಡು ಪ್ರದೇಶ, ಬಂಗ್ರಕೂಳೂರು.ಬಾಕ್ಸ್‌---ನೀರಿನ ಸಮಸ್ಯೆಗೆ ಸಹಾಯವಾಣಿ

ಪಡೀಲ್‌ ರೇಚಕ ಸ್ಥಾವರ: 0824-2230840.

ಬೆಂದೂರ್‌ ರೇಚಕ ಸ್ಥಾವರ: 0824-2220303/2220362.

ಪಣಂಬೂರು ರೇಚಕ ಸ್ಥಾವರ: 0824-2220364.

ಮನಪಾ ವಾಟ್ಸಾಪ್‌ ಸಂಖ್ಯೆ: 9449007722.

ಮನಪಾ ಕಂಟ್ರೋಲ್‌ ರೂಂ: 0824-2220319/2220306.

ಮಂಗಳೂರಿನಲ್ಲಿ ನೀರು ಪೂರೈಕೆ ರೇಷನಿಂಗ್‌: ಡಿಸಿ ಮುಲ್ಲೈ ಮುಗಿಲನ್‌ಮಂಗಳೂರು: ಮಳೆಗಾಲ ಆರಂಭ ವರೆಗೆ ಕುಡಿಯುವ ನೀರಿನ ಬವಣೆ ತಪ್ಪಿಸಲು ಮುಂಜಾಗ್ರತಾ ಕ್ರಮವಾಗಿ ಮಂಗಳೂರು ಮಹಾನಗರಕ್ಕೆ ಮೇ 5 ರಿಂದಲೇ ನೀರು ಪೂರೈಕೆಯಲ್ಲಿ ರೇಷನಿಂಗ್‌ ಆರಂಭಿಸುವಂತೆ ಪಾಲಿಕೆ ಆಡಳಿತಕ್ಕೆ ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ಹೇಳಿದ್ದಾರೆ.ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾ ವಿಪತ್ತು ಪ್ರಾಧಿಕಾರದ ಸಭೆ ನಡೆಸಲಾಗಿದ್ದು, ಅದರಲ್ಲಿ ಬೇಸಗೆ ಮುಕ್ತಾಯ ವರೆಗೆ ಕುಡಿಯುವ ನೀರಿನ ಕೊರತೆ ತಲೆದೋರದಂತೆ ಎಚ್ಚರಿಕೆ ವಹಿಸುವಂತೆ ಎಲ್ಲ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಪಾಲಿಕೆ ವ್ಯಾಪ್ತಿಯಲ್ಲಿ ದಿನಬಿಟ್ಟು ದಿನ ನೀರು ಪೂರೈಕೆಗೆ ಕ್ರಮ ವಹಿಸಲಾಗುವುದು. ಅವಶ್ಯವಾದರೆ ಬಿಳಿಯೂರು, ಎಎಂಆರ್‌, ಹರೇಕಳ ಡ್ಯಾಂನಿಂದ ಹೆಚ್ಚುವರಿ ನೀರನ್ನು ತುಂಬೆ ಡ್ಯಾಂಗೆ ಬಿಡುವಂತೆ ಸೂಚಿಸಲಾಗಿದೆ. ಕೈಗಾರಿಕಾ ಪ್ರದೇಶಗಳಲ್ಲಿರುವ ಕುಟುಂಬಗಳಿಗೆ ಕುಡಿಯಲು ಮೂರು ದಿನಕ್ಕೊಮ್ಮೆ ನೀರು ಪೂರೈಸುವಂತೆ ಸೂಚಿಸಲಾಗಿದೆ ಎಂದರು.ದ.ಕ.ಜಿಲ್ಲೆಯ ಗ್ರಾಮೀಣ ಪ್ರದೇಶಗಳಾದ ವಿಟ್ಲ, ಕೋಟೆಕಾರು, ಉಳ್ಳಾಲ, ಸೋಮೇಶ್ವರಗಳಲ್ಲಿ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಒಟ್ಟು 18 ಟ್ಯಾಂಕರ್‌ಗಳಲ್ಲಿ ನೀರು ಪೂರೈಸಲಾಗುತ್ತಿದೆ ಎಂದರು.ಮಳೆಗಾಲವನ್ನು ಎದುರಿಸಲು ಮುಂಜಾಗ್ರತಾ ವ್ಯವಸ್ಥೆಯನ್ನು ವಿಕೇಂದ್ರೀಕರಣಗೊಳಿಸಲಾಗಿದೆ. ಪ್ರತಿ ಗ್ರಾಮ ಪಂಚಾಯ್ತಿ ಹಾಗೂ ನಗರ ಪ್ರದೇಶಗಳಲ್ಲಿ ವಾರ್ಡ್‌ಗಳು ಪ್ರಾಕೃತಿಕ ವಿಕೋಪ ತಂಡಗಳನ್ನು ಹೊಂದುವಂತೆ ಸೂಚಿಸಲಾಗಿದೆ. ಮೆಸ್ಕಾಂ, ರಾಷ್ಟ್ರೀಯ ಹೆದ್ದಾರಿ, ಮೀನುಗಾರಿಕೆ, ಕೋಸ್ಟ್‌ಗಾರ್ಡ್‌, ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆಗಳಿಗೆ ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ತಿಳಿಸಲಾಗಿದೆ. ಎಲ್ಲ ವ್ಯವಸ್ಥೆಗಳನ್ನು ಆ್ಯಪ್‌ ಮೂಲಕ ನಿರ್ವಹಿಸಲಾಗುವುದು. ಮಂಗಳೂರು ಪಾಲಿಕೆ ವ್ಯಾಪ್ತಿಯಲ್ಲಿ ನೆರೆ ಪೀಡಿತ ಪ್ರದೇಶಗಳ ಮ್ಯಾಪ್‌ ಸಿದ್ಧಪಡಿಸುವಂತೆ ಸೂಚಿಸಲಾಗಿದ್ದು, ರಾಜಾ ಕಾಲುವೆ ಹೂಳೆತ್ತಲು ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ ಎಂದರು.---------------