ಸಾರಾಂಶ
ಕನ್ನಡಪ್ರಭ ವಾರ್ತೆ ಕೋಲಾರ ರೈತರ ಸಮಸ್ಯೆಗಳು ಇನ್ನೂ ಜೀವಂತವಾಗಿವೆ. ಈ ಸಮಯದಲ್ಲಿ ಸರ್ಕಾರವು ರೈತರ ಸಮಸ್ಯೆಯನ್ನು ಪರಿಹಾರ ಮಾಡಬೇಕಿದೆ. ನಾವು ಜನಪರ ಹೋರಾಟಕ್ಕೆ ಸಿದ್ಧರಿದ್ದೇವೆ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಹೇಳಿದರು. ಶ್ರೀನಿವಾಸಪುರ ಎಪಿಎಂಸಿ ಕೃಷಿ ಮಾರುಕಟ್ಟೆಯ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ಮಾವು ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ, ಮುಖ್ಯವಾಗಿ ರಾಜ್ಯದಲ್ಲಿ ಬೆಳೆಯುವ ಮಾವು ಶೇ.೬೦ರಷ್ಟು ಬೆಳೆ ಶ್ರೀನಿವಾಸಪುರ ತಾಲೂಕಿನಲ್ಲಿ ಬೆಳೆಯುತ್ತಾರೆ. ಕಳೆದ ವರ್ಷ ಕೆಜಿಗೆ ೪೦ ರು.ಗಳು, ೨೨ ರು.ಗಳು ಇದ್ದ ಮಾವಿನ ಬೆಲೆ ಇಂದು ಕೇವಲ ೩ ರು.ಗೆ ಇಳಿದಿರುವುದು ಆತಂಕಕಾರಿ ಎಂದರು.
ರೈತರ ರಕ್ಷಣೆಗೆ ಒತ್ತಾಯರಾಜ್ಯ ಸರ್ಕಾರ ಬೆಂಬಲ ಮಾವಿಗೆ ಬೆಲೆ ನೀಡುವಂತೆ ಒತ್ತಡ ಹೇರಲಾಗುವುದು. ಕೇಂದ್ರ ಸರ್ಕಾರಕ್ಕೂ ಸಹ ಮಾವಿನ ಬೆಲೆಯ ಬಗ್ಗೆ ಮಾಹಿತಿ ನೀಡಲಾಗುವುದು. ಕೇವಲ ಒಂದು ವಾರದಲ್ಲಿ ಮಾವು ಹಂಗಾಮ ಮುಗಿಯುವುದರಿಂದ ತಕ್ಷಣ ರಾಜ್ಯ ಸರ್ಕಾರ ರೈತರಿಗೆ ಬೆಂಬಲ ಬೆಲೆ ಘೋಷಿಸಲೇಬೇಕು. ಅವರ ರಕ್ಷಣೆಗೆ ಸರ್ಕಾರ, ಜನಪ್ರತಿನಿಧಿಗಳು ಮುಂದಾಗಬೇಕು ಎಂದರು.
ನಮ್ಮ ರಾಜ್ಯದಲ್ಲಿ ಪಲ್ಪ್ ಫ್ಯಾಕ್ಟರಿಗಳು ಕಡಿಮೆ ಇರುವ ಕಾರಣ ನಮ್ಮ ಮಾವು ಬೆಳೆಗಾರರು ನೆರೆಯ ಆಂಧ್ರಕ್ಕೆ ಖಾಸಗಿ ಪಲ್ಪ್ ಫ್ಯಾಕ್ಟರಿಗೆ ಮಾವು ಮಾರಾಟ ಮಾಡುತ್ತಿದ್ದರು. ಈ ಬಾರಿ ಅಲ್ಲಿನ ಸರ್ಕಾರ ನಮ್ಮ ರಾಜ್ಯದಿಂದ ಬರುವ ಮಾವನ್ನು ತಡೆಹಿಡಿದಿದ್ದು, ಆಂಧ್ರದಿಂದಲೇ ನಮ್ಮ ರಾಜ್ಯಕ್ಕೆ ಮಾವಿನಕಾಯಿಗಳು ಪಲ್ಪ್ ಫ್ಯಾಕ್ಪರಿಗೆ ಬರುತ್ತಿವೆ. ಅದನ್ನ ರಾಜ್ಯ ಸರ್ಕಾರ ತಕ್ಷಣ ತಡೆಗಟ್ಟಬೇಕು ಎಂದರು. ಮಾವಿಗೆ ನಷ್ಟ ಪರಿಹಾರ ನೀಡಿಸರ್ಕಾರ ತಕ್ಷಣ ೧ ಎಕರೆ ೧೫೦೦೦ ರು.ಗಳ ಬೆಂಬಲ ಬೆಲೆ ಕೊಡಬೇಕು. ಪ್ರತಿ ವರ್ಷವು ಇಂತಹ ರೈತರಿಗೆ ತೊಂದರೆ ಆಗದಂತೆ ಸರ್ಕಾರಗಳು ಶ್ವಾಶತ ಪರಿಹಾರ ನೀಡಬೇಕು. ಜಿಎಸ್‌ಟಿ ಶೇ.೧೨ ಇದ್ದು, ಸರ್ಕಾರವು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಜಿಎಸ್‌ಟಿ ರದ್ದು ಮಾಡಲು ಮನವಿ ಮಾಡಬೇಕು ನಾವು ಸಹ ಕೇಂದ್ರ ಸರ್ಕಾರಕ್ಕೆ ಜಿಎಸ್‌ಟಿ ರದ್ದು ಮಾಡಿಸಲು ಸಂಬಂಧಪಟ್ಟ ಇಲಾಖೆಗೆ ಮನವಿ ಮಾಡಲು ಸಿದ್ದರಿದ್ದೇವೆ ಎಂದರು. ಮಾಜಿ ಎಲ್ಸಿ ವೈ.ಎ.ನಾರಾಯಣಸ್ವಾಮಿ ಮಾತನಾಡಿ, ತಾಲೂಕಿಗೆ ಎತ್ತಿನಹೊಳೆ ನೀರಾದರು ಕೊಡಿ , ಇಲ್ಲವಾದರೆ ಮಾವಿಗೆ ಬೆಂಬಲ ಬೆಲೆಯಾದರೂ ಕೊಡಿ ಎಂದು ಕೇಳಲಿಕ್ಕೆ ಬಂದಿದ್ದೇವೆ. ಯಾವುದೇ ಶಾಶ್ವತ ನೀರಾವರಿ ಇಲ್ಲ. ದಿನೇ ದಿನೇ ಮರಗಳು ಒಣಗುತ್ತಿದೆ. ಮಾವಿನ ಬೆಳೆ ಎರಡು ವರ್ಷಕೊಮ್ಮೆ ಬೆಳೆ ಬರುತ್ತದೆ. ಒಂದು ವರ್ಷ ಬೆಳೆ ಬರಲಿಲ್ಲ ಎಂದರೆ ಮೂರು ವರ್ಷ ಒದ್ದಾಡಬೇಕಾಗುತ್ತದೆ. ಇಂತಹ ಸಮಯದಲ್ಲಿ ಸರ್ಕಾರವು ರೈತರ ಬಗ್ಗೆ ಕಾಳಜಿ ವಹಿಸದೆ ನಿರ್ಲಕ್ಷ್ಯ ವಹಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಡಿವಿಎಸ್ ಮುಂದೆ ರೈತರ ಅಳಲುಡಿ.ವಿ.ಸದಾನಂದಗೌಡರು ರೈತರ ಮಾವಿನ ತೋಟಗಳಿಗೆ ಭೇಟಿ ನೀಡಿದ ಸಮಯದಲ್ಲಿ, ರೈತರು ಮಾವಿನ ಬೆಲೆ ಪಾತಳಕ್ಕೆ ಇಳಿದಿದೆ. ತಾವು ಮಾವು ಬೆಳೆಯನ್ನೇ ನಂಬಿ ಕುಟುಂಬವನ್ನು ನಿರ್ವಹಿಸುತ್ತಿದ್ದೇವೆ. ಅಲ್ಲದೆ ಮಾವು ಬೆಳೆಯನ್ನೇ ನಂಬಿ ಮದುವೆ, ಮಕ್ಕಳಿಗೆ ವಿದ್ಯಾಭ್ಯಾಸ ಇತರೆ ಕಾರ್ಯಕ್ರಮಗಳನ್ನು ರೂಪಿಸಿಕೊಳ್ಳುತ್ತಿದ್ದೇವೆ. ಈಗ ನಮ್ಮ ಕುಟುಂಬವು ಬೀದಿಗೆ ಬೀಳುವ ಪರಿಸ್ಥಿತಿ ಉಂಟಾಗಿದೆ ಎಂದು ತಮ್ಮ ಆಳಲನ್ನು ತೋಡಿಕೊಂಡರು.
ಈ ಸಂದರ್ಭದಲ್ಲಿ ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಕೆ.ಎನ್.ವೇಣುಗೋಪಾಲ್, ಮಾವು ಮಂಡಲಿ ಮಾಜಿ ಅಧ್ಯಕ್ಷ ಮಲ್ಲನಾಯಕನಹಳ್ಳಿ ವಾಸುದೇವ್, ಬಂಗಾರುಪೇಟೆ ಮಾಜಿ ಎಂಎಲ್‌ಎ ಬಿ.ಪಿ.ವೆಂಕಟಮುನಿಯಪ್ಪ, ಬಿಜೆಪಿ ಮಂಡಲ ಅಧ್ಯಕ್ಷ ರೋಣೂರು ಆರ್.ಎನ್.ಚಂದ್ರಶೇಖರ್, ಮುಖಂಡರು ಹಾಜರಿದ್ದರು.