ಮಾವು- ಹಲಸು ಮೇಳ: ಶೇ.5-10 ರಿಯಾಯಿತಿ

| Published : May 22 2024, 01:22 AM IST

ಸಾರಾಂಶ

ಹಾಪ್‌ಕಾಮ್ಸ್‌ನಿಂದ ಮಾವು ಹಾಗು ಹಲಸಿನ ಮೇಳಕ್ಕೆ ಮಂಗಳವಾರ ಚಾನನೆ ನೀಡಲಾಯಿತು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಹಾಪ್‌ಕಾಮ್ಸ್‌ನಿಂದ ಮೇ ತಿಂಗಳಾಂತ್ಯದವರೆಗೆ ಮಾವು-ಹಲಸು ಮೇಳ ನಡೆಯಲಿದ್ದು, ಮಂಗಳವಾರ ನಗರದ ಹಡ್ಸನ್‌ ವೃತ್ತದಲ್ಲಿರುವ ಹಾಪ್‌ಕಾಮ್ಸ್‌ ಮಳಿಗೆಯಲ್ಲಿ ಮೇಳಕ್ಕೆ ಚಾಲನೆ ನೀಡಲಾಯಿತು.

ಹಾಪ್‌ಕಾಮ್ಸ್‌ ಅಧ್ಯಕ್ಷ ಎನ್‌.ಗೋಪಾಲಕೃಷ್ಣ ಮಾವು-ಹಲಸು ಮೇಳ ಉದ್ಘಾಟಿಸಿ ಮಾತನಾಡಿ, ತೋಟಗಾರಿಕೆ ಬೆಳೆಗಳಿಗೆ ಮಾರುಕಟ್ಟೆಯನ್ನು ಕಲ್ಪಿಸಲು ಹಾಗೂ ಮಧ್ಯವರ್ತಿಗಳ ಹಾವಳಿ ತಪ್ಪಿಸಲು ಹಾಪ್‌ಕಾಮ್ಸ್‌ ಕಾರ್ಯನಿರ್ವಹಿಸುತ್ತಿದೆ. ಮಾವು ಮತ್ತು ಹಲಸನ್ನು ರೈತರಿಂದ ನೇರ ಖರೀದಿ ಮಾಡಿ, ಗ್ರಾಹಕರಿಗೆ ರಾಸಾಯನಿಕ ಮುಕ್ತ ಹಣ್ಣುಗಳನ್ನು ಕೊಡುವ ಕೆಲಸವನ್ನು ಸಂಸ್ಥೆ ಮಾಡುತ್ತಿದೆ. ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಬೈಡ್‌ ರಹಿತ ಮಾವಿನ ಹಣ್ಣನ್ನು ರಿಯಾಯಿತಿ ದರದಲ್ಲಿ ಖರೀದಿಸಬಹುದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ತೋಟಗಾರಿಕೆ ಇಲಾಖೆ ಹೆಚ್ಚುವರಿ ನಿರ್ದೇಶಕರಾದ ಪರಶಿವಮೂರ್ತಿ, ಕೆ.ಬಿ.ದುಂಡಿ, ಪಿ.ಎಂ.ಸೊಬರದ ಉಪಸ್ಥಿತರಿದ್ದರು.

3-5 ಕೇಜಿ ಪ್ಯಾಕಿಂಗ್ ಮಾರಾಟ

ಹಾಪ್‌ಕಾಮ್ಸ್‌ ಮಳಿಗೆಗಳಲ್ಲಿ ಮೇ 31ರವರೆಗೆ ಗ್ರಾಹಕರು ಶೇ.5ರಿಂದ 10 ರಿಯಾಯಿತಿ ದರದಲ್ಲಿ ಹಣ್ಣುಗಳನ್ನು ಖರೀದಿಸಬಹುದು. ಗ್ರಾಹಕರ ಅನುಕೂಲಕ್ಕೆ ತಕ್ಕಂತೆ 3 ಮತ್ತು 5 ಕೇಜಿಗಳ ಪ್ಯಾಕಿಂಗ್‌ನಲ್ಲಿ ಮಾರಾಟ ವ್ಯವಸ್ಥೆ ಮಾಡಲಾಗಿದೆ. ಜೊತೆಗೆ ಹಾಪ್‌ಕಾಮ್ಸ್‌ನಿಂದ ಸಂಚಾರಿ ಮಾರಾಟ ವ್ಯವಸ್ಥೆಯೂ ಇದೆ.

ಮೇಳದಲ್ಲಿ ಬಾದಾಮಿ, ರಸಪೂರಿ, ಸೇಂದೂರ, ಮಲಗೋವಾ, ಮಲ್ಲಿಕಾ, ಬಂಗನಪಲ್ಲಿ (ಬೇನಿಷಾ), ದಶೇರಿ, ಕಾಲಪಾಡು, ಕೇಸರ್‌, ನೀಲಂ, ತೋತಾಪುರಿ, ಇಮಾಂಪಸಂದ ಮಾವಿನ ಹಣ್ಣುಗಳು ಮತ್ತು ಚಂದ್ರ ಹಲಸು ಸೇರಿದಂತೆ ಇತರೆ ತಳಿಯ ಹಲಸಿನ ಹಣ್ಣುಗಳು ಲಭ್ಯವಿದೆ. ಈ ಬಾರಿ 500 ಟನ್‌ ಮಾವು ಮತ್ತು 100 ಟನ್‌ ಹಲಸು ಮಾರಾಟ ಗುರಿಯನ್ನು ಹೊಂದಲಾಗಿದೆ ಎಂದು ಹಾಪ್‌ಕಾಮ್ಸ್‌ ವ್ಯವಸ್ಥಾಪಕ ನಿರ್ದೇಶಕ ಮಿರ್ಜಿ ಉಮಾಶಂಕರ್‌ ತಿಳಿಸಿದರು.ರಿಯಾಯಿತಿ ದರದಲ್ಲಿ ಮಾರಾಟಮಾವು ತಳಿಗಳುಮಾರಾಟ ದರರಿಯಾಯ್ತಿಮೇಳದ ದರತೋತಾಪುರಿ₹60₹6₹54ಬಾದಾಮಿ₹155₹15₹140ಅಲ್ಫಾನ್ಸ್‌(3 ಕೇಜಿ ಬಾಕ್ಸ್‌)₹530₹50₹480ರಸಪೂರಿ₹114₹6₹108ಸೇಂದೂರ₹78₹8₹70ಬಂಗನಪಲ್ಲಿ₹110₹11₹99ಮಲ್ಲಿಕಾ₹155₹15₹140ದಶೇರಿ₹155₹15₹140ಹಲಸಿನ ಹಣ್ಣು₹35₹3₹32ಮಲಗೋವ₹240₹15₹225ಕಾಲಪಾಡು₹170₹8₹162ಇಮಾಂಪಸಂದ್₹270₹14₹256