ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜ್ಯಕೇಶನ್ (ಮಾಹೆ) ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ (ಡಿಎಸ್‌ಟಿ)ಯ ಸಹಯೋಗದಲ್ಲಿ ಸ್ಥಾಪಿಸಲಾದ ಡಿಎಸ್‌ಟಿ - ಮಾಹೆ ಹಬ್‌ ವಿಭಾಗವನ್ನು ಇಲಾಖೆಯ ತಂತ್ರಜ್ಞಾನ, ಪರಿವರ್ತನೆ, ಸಂಶೋಧನೆ (ಟಿಟಿಐ) ವಿಭಾಗದ ಮುಖ್ಯಸ್ಥ ಪ್ರವೀಣ್ ರಾಯ್ ಉದ್ಘಾಟಿಸಿದರು.

ಮಣಿಪಾಲ: ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜ್ಯಕೇಶನ್ (ಮಾಹೆ) ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ (ಡಿಎಸ್‌ಟಿ)ಯ ಸಹಯೋಗದಲ್ಲಿ ಸ್ಥಾಪಿಸಲಾದ ಡಿಎಸ್‌ಟಿ - ಮಾಹೆ ಹಬ್‌ ವಿಭಾಗವನ್ನು ಇಲಾಖೆಯ ತಂತ್ರಜ್ಞಾನ, ಪರಿವರ್ತನೆ, ಸಂಶೋಧನೆ (ಟಿಟಿಐ) ವಿಭಾಗದ ಮುಖ್ಯಸ್ಥ ಪ್ರವೀಣ್ ರಾಯ್ ಉದ್ಘಾಟಿಸಿದರು. ಈ ರೀತಿಯ ವಿವಿಯಿಂದ ಸ್ವಯಂ ಅನುದಾನಿತ ಪ್ರಥಮ ಕೇಂದ್ರ ಇದಾಗಿದೆ.ನಂತರ ಮಾತನಾಡಿದ ಡಾ. ಪ್ರವೀಣ್ ರಾಯ್, ತನ್ನ ವೈಜ್ಞಾನಿಕ ಪ್ರಗತಿಯ ಲಾಭವನ್ನು ಸಮಾಜಕ್ಕೆ ನೀಡುತ್ತಿರುವ ಮಾಹೆಯ ಸಾಧನೆಯನ್ನು ಶ್ಲಾಘಿಸಿದರು. ಭಾರತದ ವೈಜ್ಞಾನಿಕ ವ್ಯವಸ್ಥೆಯನ್ನು ಬಲಪಡಿಸುವಲ್ಲಿ ಪ್ರಯೋಗಾಲಯದಿಂದ ಸಮಾಜಕ್ಕೆ ನೀಡುವ ಸಂಶೋಧನೆಗಳು ನಿರ್ಣಾಯಕ ಪಾತ್ರ ವಹಿಸುತ್ತವೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಇಂತಹ ಸಂಶೋಧನಾ ಕೇಂದ್ರಗಳನ್ನು ಬೆಂಬಲಿಸುತ್ತದೆ ಎಂದರು.

ಮಾಹೆಯ ಸಹಕುಲಪತಿ ಡಾ. ಎಚ್. ಎಸ್‌. ಬಲ್ಲಾಳ್ ಅವರು, ಸಹಯೋಗ, ಸಂಘಟಿತ ಸಂಶೋಧನೆ ಮತ್ತು ನಾವೀನ್ಯತೆಯಲ್ಲಿ ಮಾಹೆಯು ಸದಾ ಪ್ರಮುಖ ಪಾತ್ರ ವಹಿಸುತ್ತದೆ. ಶೈಕ್ಷಣಿಕ, ಕೈಗಾರಿಕೆ ಮತ್ತು ಸರ್ಕಾರಿ ಪಾಲುದಾರಿಕೆಗಳನ್ನು ಬಲಪಡಿಸುವ ಸಂಸ್ಥೆಯ ಬದ್ಧತೆ, ಪರಿಣಾಮಕಾರಿ ವೈಜ್ಞಾನಿಕ ಪ್ರಗತಿಗಾಗಿ ಮತ್ತು ಸಾಮಾಜಿಕ ಪ್ರಯೋಜನಕ್ಕಾಗಿ ಡಿಎಸ್‌ಟಿ ಮಾಹೆ ಹಬ್ ಕೆಲಸ ಮಾಡುತ್ತದೆ ಎಂದರು.

ಉಪಕುಲಪತಿ ಲೆ.ಜ. ಡಾ. ಎಂ. ಡಿ. ವೆಂಕಟೇಶ್ ಅವರು ಈ ಡಿಎಸ್‌ಟಿ ಮಾಹೆ ಹಬ್‌ ಪರಿಣಾಮಕಾರಿ ಸಂಶೋಧನೆ ಮತ್ತು ಸಂಶೋಧನಾ ಕ್ಷೇತ್ರದ ನೇತೃತ್ವವನ್ನು ಬೆಳೆಸುವಲ್ಲಿ ಹೆಚ್ಚಿನ ಕೆಲಸ ಮಾಡಲಿದೆ ಎಂದರು.

ಈ ಹಬ್‌ನ ಹಿರಿಯ ಸಲಹೆಗಾರ ಡಾ. ಲಾಜರ್ ಮ್ಯಾಥ್ಯೂ ಮಾಹೆ ಹಬ್‌ನ ಲಾಂಛನವನ್ನು ಅನಾವರಣಗೊಳಿಸಿದರು ಪ್ರಧಾನ ಸಂಯೋಜಕರಾದ ಡಾ. ಜಿ. ಅರುಣ್ ಮಯ್ಯ ಸ್ವಾಗತಿಸಿದರು.ಈ ಡಿಎಸ್‌ಟಿ ಮಾಹೆ ಹಬ್‌ ಐಐಟಿ ಧಾರವಾಡ, ಐಐಟಿ ಪಾಲಕ್ಕಾಡ್, ಎನ್‌ಐಟಿಕೆ ಸುರತ್ಕಲ್, ಕಣ್ಣೂರು ವಿಶ್ವವಿದ್ಯಾಲಯ, ಮಹಾತ್ಮ ಗಾಂಧಿ ವಿಶ್ವವಿದ್ಯಾಲಯ, ಬಿಐಟಿಎಸ್ ಗೋವಾ ಮತ್ತು ಬಿಪಿಎಲ್, ಫಿಲಿಪ್ಸ್, ಇನ್‌ಬಾಡಿ ಮತ್ತು ಸ್ಪಾರ್ಷ್ ಟೆಕ್ನಾಲಜೀಸ್ ಸೇರಿದಂತೆ ಪ್ರಮುಖ ಉದ್ಯಮಗಳೊಂದಿಗೆ ಪಾಲುದಾರಿಕೆಗಳ ಮೂಲಕ ಗೋವಾದಿಂದ ತಿರುವನಂತಪುರದವರೆಗಿನ ಸಂಪೂರ್ಣ ಪಶ್ಚಿಮ ಕರಾವಳಿಯ ನವೀನ ಕಾರಿಡಾರ್‌ಗೆ ಸೇವೆ ಸಲ್ಲಿಸುವ ಗುರಿ ಹೊಂದಿದೆ ಎಂದು ಮಾಹೆ ತಿಳಿಸಿದೆ.