ಸಾರಾಂಶ
ಕನ್ನಡಪ್ರಭ ವಾರ್ತೆ ಮಣಿಪಾಲಮಾಹೆ ಮತ್ತು ಅಮೆರಿಕದ ಉತಾಹ್ ವಿವಿಗಳ ನಡುವಿನ ವರ್ಲ್ಡ್ ಫೆಡರೇಶನ್ ಆಫ್ ಹಿಮೋಫಿಲಿಯಾ ಟ್ವಿನ್ನಿಂಗ್ ಪಾಲುದಾರಿಕೆಯಡಿಯಲ್ಲಿ ‘ಬ್ರೈಡಿಂಗ್ ದಿ ಗ್ಯಾಪ್: ಫ್ರಂ ಡಯಾಗ್ನೋಸಿಸ್ ಟು ಲೈಫ್ ಲಾಂಗ್ ಕೇರ್ ಇನ್ ಬ್ಲೀಡಿಂಗ್ ಡಿಸಾರ್ಡರ್ಸ್’ ಎಂಬ ಒಂದು ದಿನದ ನಿರಂತರ ವೈದ್ಯಕೀಯ ಶಿಕ್ಷಣ (ಸಿಎಂಇ) ಕಾರ್ಯಕ್ರಮ ಆಯೋಜಿಸಲಾಗಿತ್ತು.ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿ, ಕಸ್ತೂರ್ಬಾ ಆಸ್ಪತ್ರೆಯು ಸಮಗ್ರ ರಕ್ತಶಾಸ್ತ್ರೀಯ ವೈದ್ಯಕೀಯ ಸೇವೆಗಳನ್ನು ಒದಗಿಸಲು ಬದ್ಧವಾಗಿದೆ. ಇದಕ್ಕೆ ಅಂತಾರಾಷ್ಟ್ರೀಯ ಮಟ್ಟದ ನಿರಂತರ ವೃತ್ತಿಪರ ತರಬೇತಿಯ ಅಗತ್ಯವಿರುವುದರಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದರು.ಮಾಹೆಯ ಸಹಕುಲಸಚಿವ ಡಾ. ಶ್ರೀಜಿತ್ ಜಿ. ಮತ್ತು ಉತಾಹ್ ಕೇಂದ್ರದ ಸಹಾಯಕ ವೈದ್ಯಕೀಯ ನಿರ್ದೇಶಕ ಡಾ. ಶಶಿಧರ್ ಗೊಟೆಟಿ ಅವರು ಸಮಗ್ರವಾಗಿ ಆರೈಕೆಯ ವಿಧಾನಗಳನ್ನು ಬಲಪಡಿಸುವುದು, ಮಹಿಳೆಯರು ಮತ್ತು ಬಾಲಕಿಯರ ರಕ್ತಸ್ರಾವ ಅಸ್ವಸ್ಥತೆಗಳಿಗೆ ಅಗತ್ಯ ಚಿಕಿತ್ಸಾಲಯವನ್ನು ಆರಂಭಿಸುವುದು, ಜಂಟಿ ಸಂಶೋಧನೆ ಹಾಗೂ ಜ್ಞಾನ ವಿನಿಮಯವನ್ನು ಬೆಳೆಸುವುದು ಈ ಉಭಯ ವಿವಿಗಳ ಟ್ವಿನ್ನಿಂಗ್ ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ಹೇಳಿದರು.ಕಸ್ತೂರ್ಬಾ ಆಸ್ಪತ್ರೆಯ ಹಿಮೋಫಿಲಿಯಾ ಚಿಕಿತ್ಸಾ ಕೇಂದ್ರದ ಸಂಯೋಜಕಿ ಡಾ. ಅರ್ಚನಾ ಎಂ.ವಿ. ಸ್ವಾಗತಿಸಿದರು. ರಕ್ತಸ್ರಾವ ಮತ್ತು ಹೆಪ್ಪುಗಟ್ಟುವಿಕೆಯ ಅಸ್ವಸ್ಥತೆಗಳ ಕುರಿತು ಪದವಿ ವಿದ್ಯಾರ್ಥಿಗಳಿಗೆ ಡಾ. ಪವಿತ್ರಾ ಡಿ.ಎಸ್. ಅವರು ಸಂವಾದಾತ್ಮಕ ರಸಪ್ರಶ್ನೆಯನ್ನು ನಡೆಸಿದರು. ಹಿಮೋಫಿಲಿಯಾ ಸೊಸೈಟಿಯ ಮಣಿಪಾಲ ಅಧ್ಯಾಯದ ಅಧ್ಯಕ್ಷೆ ಡಾ. ಸುಲೋಚನಾ ಬಿ. ವಂದಿಸಿದರು. ಡಾ. ಮಾತಂಗಿ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.
;Resize=(128,128))
;Resize=(128,128))