ವಿಶ್ವ ಹಾಸ್ಪೈಸ್ ಮತ್ತು ಉಪಶಾಮಕ ಆರೈಕೆ ದಿನದ ಅಂಗವಾಗಿ ಮಾಹೆ ಹಾಗೂ ಮಣಿಪಾಲ ಹಾಸ್ಪೈಸ್ ಆ್ಯಂಡ್ ರೆಸ್ಟೆಟ್ ಸೆಂಟರ್ (ಎಂಎಚ್‌ಆರ್‌ಸಿ) ವತಿಯಿಂದ ಅ.10ರಂದು 68 ಕಿಮಿ ‘ರನ್ ಆ್ಯಂಡ್ ರೈಡ್ ಫಾರ್ ಡಿಗ್ನಿಟಿ’ ಎಂಬ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಮಾಹೆಯ ಸಹಕುಲಾಧಿಪತಿ ಡಾ. ಎಚ್.ಎಸ್. ಬಲ್ಲಾಳ್ ಹೇಳಿದರು.
ಮಣಿಪಾಲ: ವಿಶ್ವ ಹಾಸ್ಪೈಸ್ ಮತ್ತು ಉಪಶಾಮಕ ಆರೈಕೆ ದಿನದ ಅಂಗವಾಗಿ ಮಾಹೆ ಹಾಗೂ ಮಣಿಪಾಲ ಹಾಸ್ಪೈಸ್ ಆ್ಯಂಡ್ ರೆಸ್ಟೆಟ್ ಸೆಂಟರ್ (ಎಂಎಚ್‌ಆರ್‌ಸಿ) ವತಿಯಿಂದ ಅ.10ರಂದು 68 ಕಿಮಿ ‘ರನ್ ಆ್ಯಂಡ್ ರೈಡ್ ಫಾರ್ ಡಿಗ್ನಿಟಿ’ ಎಂಬ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಮಾಹೆಯ ಸಹಕುಲಾಧಿಪತಿ ಡಾ. ಎಚ್.ಎಸ್. ಬಲ್ಲಾಳ್ ಹೇಳಿದರು.ಸುದ್ದಿಗೋಷ್ಠಿಯಲ್ಲಿ ವಿವರಗಳನ್ನು ನೀಡಿದ ಅವರು, 2026ರ ಘೋಷವಾಕ್ಯ ‘ನೋವು ನಿರ್ವಹಣೆ: ಉಪಶಾಮಕ ಆರೈಕೆಯ ಅತ್ಯಗತ್ಯ ಭಾಗ’ ಎಂಬುದಾಗಿದೆ. ರೋಗಿಗಳ ದೈಹಿಕ ನೋವನ್ನು ಕಡಿಮೆ ಮಾಡುವುದರ ಜತೆಗೆ ಅವರ ಮಾನಸಿಕ, ಸಾಮಾಜಿಕ ಹಾಗೂ ಭಾವನಾತ್ಮಕ ಅಗತ್ಯಗಳಿಗೆ ಸ್ಪಂದಿಸುವುದು ಉಪಶಾಮಕ ಆರೈಕೆಯ ಪ್ರಮುಖ ಉದ್ದೇಶವಾಗಿದೆ ಎಂದರು.ಅ.10ರಂದು ‘ರನ್ ಆ್ಯಂಡ್ ರೈಡ್ ಫಾರ್ ಡಿಗ್ನಿಟಿ’ ಕಾರ್ಯಕ್ರಮ ನಡೆಯಲಿದೆ. ಕರಾವಳಿ ಕರ್ನಾಟಕದ ವಿವಿಧ ಕ್ಲಬ್‌ಗಳ ಓಟಗಾರರು ಹಾಗೂ ಸೈಕ್ಲಿಸ್ಟ್‌ಗಳು ಬೆಳಗ್ಗೆ 5.15ಕ್ಕೆ ಮಂಗಳೂರಿನ ಲಾಲ್‌ಬಾಗ್‌ನ ಕಾರ್ಪೊರೇಷನ್ ವೃತ್ತದಿಂದ ಹೊರಟು ಸುಮಾರು 68 ಕಿ.ಮೀ. ಕ್ರಮಿಸಿ ಮಣಿಪಾಲದ ಎಂಎಚ್‌ಆರ್‌ಸಿಗೆ ತಲುಪಲಿದ್ದಾರೆ, ಈ ಮೂಲಕ ಉಪಶಾಮಕ ಆರೈಕೆಯ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಿದ್ದಾರೆ ಎಂದವರು ಹೇಳಿದರು.ಸುದ್ದಿಗೋಷ್ಠಿಯಲ್ಲಿ ಮಾಹೆ ಕುಲಪತಿ ಡಾ. ಶರತ್ ಕೆ. ರಾವ್, ಸಹಕುಲಪತಿ ಮೇಜರ್ ಜನರಲ್ (ಡಾ.) ಮ್ಯಾನ್ಸ್ ಜೇಕಬ್, ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ, ಡಾ. ನವೀನ್ ಸಾಲಿನ್ಸ್ ಮೊದಲಾದವರು ಉಪಸ್ಥಿತರಿದ್ದರು.ಎಂಎಚ್‌ಆರ್‌ಸಿಯಲ್ಲಿ 694 ರೋಗಿಗಳಿಗೆ ಆರೈಕೆ: ಜೀವನದ ಕೊನೆಯ ದಿನಗಳಲ್ಲಿ, ಗುಣಮುಖವಾಗದ ಕಾಯಿಲೆಗಳಿಂದ ಬಳಲುತ್ತಿರುವ, ದೀರ್ಘಕಾಲದ ಆರೈಕೆಯ ಅಗತ್ಯವಿರುವ ಹಿರಿಯ ಜೀವಗಳಿಗಾಗಿಯೇ ಮಾಹೆಯಿಂದ, 2025ರ ಏಪ್ರಿಲ್‌ನಲ್ಲಿ ಆರಂಭಗೊಂಡ ಎಂಎಚ್‌ಆರ್‌ಸಿಯು ಇಂದು 10 ಹಾಸಿಗೆಗಳಿಂದ 40 ಹಾಸಿಗೆಗಳಿಗೆ ವಿಸ್ತರಣೆಯಾಗಿದೆ. ಮೊದಲ ವರ್ಷದಲ್ಲಿ 694 ರೋಗಿಗಳಿಗೆ ಉಚಿತ ಆರೈಕೆ ನೀಡಲಾಗಿದ್ದು, 1,300ಕ್ಕೂ ಅಧಿಕ ಕುಟುಂಬದ ಆರೈಕೆದಾರರಿಗೆ ಬೆಂಬಲ ಒದಗಿಸಲಾಗಿದೆ. 2026ರಲ್ಲಿ 65 ಹಾಗೂ 2027ರಲ್ಲಿ 100 ಹಾಸಿಗೆಗಳಿಗೆ ಕೇಂದ್ರವನ್ನು ವಿಸ್ತರಿಸುವ ಯೋಜನೆ ಇದೆ ಎಂದು ಕೇಂದ್ರದ ನಿರ್ದೇಶಕಿ ಡಾ. ಸೀಮಾ ಆರ್. ರಾವ್ ತಿಳಿಸಿದರು.