ಸಾರಾಂಶ
ಕನ್ನಡಪ್ರಭ ವಾರ್ತೆ ಮಣಿಪಾಲ ಇಲ್ಲಿನ ಮಹಿಳಾ ಸಮಾಜ ಮಣಿಪಾಲ ಇದರ 63 ನೇ ಸ್ಥಾಪಕರ ದಿನಾಚರಣೆಯು ರೋಟರಿ ಹಾಲ್ ಮಣಿಪಾಲ ಇತ್ತೀಚಿಗೆ ಸಂಭ್ರಮದಿಂದ ನಡೆಯಿತು. ಮುಖ್ಯ ಅತಿಥಿಯಾಗಿ ಮಣಿಪಾಲ ಮಾಹೆಯ ಪ್ರಮುಖರಾದ ವಸಂತಿ ರಾಮದಾಸ್ ಪೈ ಅವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು.ಮಹಿಳಾ ಸಮಾಜದ ಸ್ಥಾಪಕ ದಿ. ಶಾರದಾ ಪೈ, ಡಾ. ಪದ್ಮ ರಾವ್ ಅವರ ಭಾವಚಿತ್ರಗಳಿಗೆ ಅತಿಥಿಗಳು ಪುಷ್ಪ ನಮನ ಸಲ್ಲಿಸಿದರು. ಮುಖ್ಯ ಅತಿಥಿ, ಹಿರಿಯ ವೈದ್ಯೆ ಡಾ. ರಾಜಶ್ರೀ ಎಸ್. ಕಿಣಿ ಅವರು, ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳೆಯರಾದ ನಾರಾಯಣಿ ನಾಯಕ್, ಸಪ್ನಾ ಸಾಲಿನ್ಸ್, ಏಕ್ತಾ ಜೈನ್, ಪ್ಲಾವಿಯಾ ಮೆಂಡೋನ್ಸಾ ಅವರನ್ನು ಗೌರವಿಸಿದರು. ಮಹಿಳೆಯರು ದೈನಂದಿನ ಮನೆಯ ಕೆಲಸ, ಉದ್ಯೋಗ, ವ್ಯವಹಾರಗಳ ಜೊತೆ ತಮ್ಮ ಆರೋಗ್ಯದ ಹೆಚ್ಚಿನ ಗಮನ ಹರಿಸಬೇಕು ಎಂದು ಅವರು ಕರೆ ನೀಡಿದರು. ವೇದಿಕೆಯಲ್ಲಿ ಮಹಿಳಾ ಸಮಾಜದ ಅಧ್ಯಕ್ಷೆ ಶೃತಿ ಶೆಣೈ, ಉಪಾಧ್ಯಕ್ಷೆ ವೈಜಯಂತಿ ಕಾಮತ್, ಕಾರ್ಯದರ್ಶಿ ವಿಜಯಲಕ್ಷ್ಮೀ, ಸಹ ಕಾರ್ಯದರ್ಶಿ ಏಕ್ತಾ ಜೈನ್, ಖಂಜಾಚಿ ಶಾಲಿನಿ ಜಿ. ನಾಯಕ್, ರೇಷ್ಮಾ ತೋಟ ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ನಂತರ ಸಂಸ್ಥೆಯ ಸದಸ್ಯೆಯರಿಂದ ಮನೋರಂಜನಾ ಕಾರ್ಯಕ್ರಮ ಜರಗಿತು.