ಸಾರಾಂಶ
ಆಯುರ್ವೇದ ಸಿದ್ಧ ಯುನಾನಿ ಮತ್ತು ಹೋಮಿಯೋಪತಿ ಔಷಧಗಳಲ್ಲಿ ಫಾರ್ಮಾಕೋವಿಜಿಲೆನ್ಸ್ ಮಾಹಿತಿ ಕಾರ್ಯಕ್ರಮ ಮುನಿಯಾಲ್ ಆಯುರ್ವೇದ ಕಾಲೇಜಿನಲ್ಲಿ ನಡೆಯಿತು.
ಕನ್ನಡಪ್ರಭ ವಾರ್ತೆ ಮಣಿಪಾಲಭಾರತ ಸರ್ಕಾರದ ಆಯುಷ್ ಸಚಿವಾಲಯದ ಪ್ರಾಯೋಜಿತ ಫಾದರ್ ಮುಲ್ಲರ್ ಹೋಮಿಯೋಪತಿ ವೈದ್ಯಕೀಯ ಕಾಲೇಜು ದೇರಳಕಟ್ಟೆಯ ಪೆರೆಫೆರಲ್ ಫಾರ್ಮಾಕೋವಿಜಿಲೆನ್ಸ್ ಸೆಂಟರ್‌ನ ಸಹಯೋಗದೊಂದಿಗೆ ಆಯುರ್ವೇದ ಸಿದ್ಧ ಯುನಾನಿ ಮತ್ತು ಹೋಮಿಯೋಪತಿ ಔಷಧಗಳಲ್ಲಿ ಫಾರ್ಮಾಕೋವಿಜಿಲೆನ್ಸ್ ಮಾಹಿತಿ ಕಾರ್ಯಕ್ರಮವನ್ನು ಇಲ್ಲಿನ ಮುನಿಯಾಲ್ ಆಯುರ್ವೇದ ಕಾಲೇಜಿನಲ್ಲಿ ಇತ್ತೀಚೆಗೆ ನಡೆಸಲಾಯಿತು.
ಜೆಎಸ್ಎಸ್ ಆಯುರ್ವೆದ ಕಾಲೇಜು ಮೈಸೂರಿನ ಪ್ರೊ. ಡಾ.ಜಗದೀಶ್ ಮಿಟ್ಟಿ ಮತ್ತು ಫಾದರ್ ಮುಲ್ಲರ್ ಹೋಮಿಯೋಪತಿ ವೈದ್ಯಕೀಯ ಕಾಲೇಜು ಜೂನಿಯರ್ ರಿಸರ್ಚ್ ಫೆಲೋ ಡಾ.ಫಾತಿಮಾ ಸೌಧತ್ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು.ಕಾರ್ಯಕ್ರಮವನ್ನು ಸಂಸ್ಥೆಯ ಪ್ರಾಂಶುಪಾಲ ಡಾ.ಸತ್ಯನಾರಾಯಣ ಬಿ., ಸಂಪನ್ಮಾಲ ವ್ಯಕ್ತಿಗಳಾದ ಡಾ.ಜಗದೀಶ್ ಮಿಟ್ಟಿ ಮತ್ತು ಡಾ.ಫಾತಿಮಾ ಸೌಧತ್ ಹಾಗೂ ಸಂಸ್ಥೆಯ ಫಾರ್ಮಾಕೋವಿಜಿಲೆನ್ಸ್ ಸೆಂಟರ್‌ನ ಸಂಯೋಜಕ ಡಾ. ದಿನೇಶ್, ಆಸ್ಪತ್ರೆಯ ಮೇಲ್ವಿಚಾರಕ ಡಾ.ಪ್ರಮೋದ್ ಶೇಟ್ ದೀಪೋಜ್ವಲನ ಮಾಡುವ ಮೂಲಕ ಸಾಂಕೇತಿಕವಾಗಿ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಆಯುರ್ವೇದ ಔಷಧದಲ್ಲಿ ಫಾರ್ಮಾಕೋವಿಜಿಲೆನ್ಸ್ ಪ್ರಾಮುಖ್ಯತೆ ಮತ್ತು ದಾರಿ ತಪ್ಪಿಸುವ ಆಯುರ್ವೇದ ಔಷಧ ಜಾಹೀರಾತುಗಳ ಕುರಿತು ಮಾಹಿತಿ ನೀಡಲಾಯಿತು.ಡಾ.ಪ್ರಮೋದ್ ಶೇಟ್ ಸ್ವಾಗತಿಸಿದರು. ಡಾ. ರಶ್ಮಿ ಕಲ್ಕೂರ ವಂದಿಸಿದರು. ದ್ರವ್ಯಗುಣ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ.ಅರ್ಚನಾ ಕಲ್ಲೂರಾಯ ಕಾರ್ಯಕ್ರಮ ನಿರೂಪಣೆ ಮಾಡಿದರು. ಪ್ರಸೂತಿ ತಂತ್ರ ಮತ್ತು ಸ್ತ್ರೀರೋಗ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಅನುಪಮಾ ದೇವಸ್ಯ ಸಂಪನ್ಮೂಲ ವ್ಯಕ್ತಿಗಳನ್ನು ಪರಿಚಯಿಸಿದರು. ಸಮಾರಂಭದಲ್ಲಿ ದ್ವಿತೀಯ ವರ್ಷದ ಬಿಎಎಂಎಸ್ ವಿದ್ಯಾರ್ಥಿಗಳು, ಇಂಟರ್ನಿಗಳು, ಸ್ನಾತಕೋತ್ತರ ವಿದ್ಯಾರ್ಥಿಗಳು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.