ಸಾರಾಂಶ
ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಡಾ. ಟಿಎಂಎ ಪೈ ಸಭಾಂಗಣದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನ ಆಯೋಜಿಸಲಾಯಿತು. ಈ ವರ್ಷ ‘ಎಲ್ಲಾ ಮಹಿಳೆಯರು ಮತ್ತು ಹುಡುಗಿಯರಿಗಾಗಿ: ಹಕ್ಕುಗಳು. ಸಮಾನತೆ. ಸಬಲೀಕರಣ’ ಧ್ಯೇಯದಡಿ ಈ ದಿನ ಆಚರಿಸಲಾಯಿತು.
ಕನ್ನಡಪ್ರಭ ವಾರ್ತೆ ಮಣಿಪಾಲ
ಇಲ್ಲಿನ ಕಸ್ತೂರ್ಬಾ ಆಸ್ಪತ್ರೆಯ ಡಾ. ಟಿಎಂಎ ಪೈ ಸಭಾಂಗಣದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನ ಆಯೋಜಿಸಲಾಯಿತು. ಈ ವರ್ಷ ‘ಎಲ್ಲಾ ಮಹಿಳೆಯರು ಮತ್ತು ಹುಡುಗಿಯರಿಗಾಗಿ: ಹಕ್ಕುಗಳು. ಸಮಾನತೆ. ಸಬಲೀಕರಣ’ ಧ್ಯೇಯದಡಿ ಈ ದಿನ ಆಚರಿಸಲಾಯಿತು.ಈ ಆಚರಣೆಯ ಮುಖ್ಯ ಕಾರ್ಯಕ್ರಮ ‘ಟಕ್ ಶಾಪ್ ಪ್ರದರ್ಶನ ಮತ್ತು ಮಾರಾಟ’. ಇದರಲ್ಲಿ ಕಸ್ತೂರ್ಬಾ ಆಸ್ಪತ್ರೆಯ ಮಹಿಳಾ ಉದ್ಯೋಗಿಗಳು ತಯಾರಿಸಿದ ಗೃಹ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಏರ್ಪಾಡಿಸಲಾಗಿತ್ತು.
ಮನೆಯಲ್ಲಿ ತಯಾರಿಸಿದ ಆಹಾರ ಪದಾರ್ಥಗಳು, ಕಲೆ ಮತ್ತು ಕರಕುಶಲ ವಸ್ತುಗಳು, ತಾಜಾ ತರಕಾರಿಗಳು, ಮೋಜಿನ ಆಟಗಳು, ಫ್ಯಾಷನ್ ಆಭರಣಗಳು ಮತ್ತು ಬ್ಯೂಟಿ ಪಾರ್ಲರ್ ಇತ್ಯಾದಿಗಳ ಈ ಪ್ರದರ್ಶನವು ಮಹಿಳೆಯರ ಉದ್ಯಮಶೀಲತಾ ಮನೋಭಾವ ಮತ್ತು ಸ್ವಾವಲಂಬನೆಗೆ ಸಾಕ್ಷಿಯಾಗಿದ್ದು, ಆತ್ಮನಿರ್ಭರ್ ಪರಿಕಲ್ಪನೆಯನ್ನು ಸಾಕಾರಗೊಳಿಸಿತು.ಮುಖ್ಯ ಅತಿಥಿಗಳಾಗಿ ಸಂಸ್ಥೆಯ ಅಧಿಕಾರಿಗಳ ಪತ್ನಿಯರಾದ ವಿದ್ಯಾ ಆನಂದ್, ಪ್ರಸನ್ನ ಪದ್ಮರಾಜ್, ಸುಜಾತಾ ಅವಿನಾಶ್ ಶೆಟ್ಟಿ, ಡಾ. ಶಶಿಕಲಾ ಮತ್ತು ಪ್ರೀತಿ ಶೆಟ್ಟಿ ಉಪಸ್ಥಿತರಿದ್ದರು, ಡಾ. ಆನಂದ್ ವೇಣುಗೋಪಾಲ್, ಡಾ. ಅವಿನಾಶ್ ಶೆಟ್ಟಿ ಮತ್ತು ಡಾ. ಶಿರನ್ ಶೆಟ್ಟಿ ಅವರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕ್ರೇಮರ್ ಸ್ಟಲ್ಲೋನ್ ಸ್ವಾಗತಿಸಿದರು, ಸತೀಶ್ ಕುಮಾರ್ ಧನ್ಯವಾದಗಳನ್ನು ಅರ್ಪಿಸಿದರು, ಕೃಷ್ಣಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.