ಸಾರಾಂಶ
ಹಿಂದಿನ ಅಧ್ಯಕ್ಷೆ ಎಸ್.ಚೇತನಾ, ಉಪಾಧ್ಯಕ್ಷ ಯಶ್ವಂತ್‌ಗೌಡರ ರಾಜೀನಾಮೆಯಿಂದ ತೆರವಾದ ಸ್ಥಾನಗಳಿಗೆ ಚುನಾವಣೆ ನಡೆದು ಮಂಜುಳಾ ಚಂದ್ರಚಾರಿ, ಕುಮಾರಸ್ವಾಮಿ ಹೊರತುಪಡಿಸಿ ಉಳಿದ ಯಾವೊಬ್ಬ ಸದಸ್ಯರು ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಅಧ್ಯಕ್ಷ - ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಚುನಾವಣಾಧಿಕಾರಿ ಎಇಇ ಜಯರಾಮು ಘೋಷಿಸಿದರು.
ಕನ್ನಡಪ್ರಭ ವಾರ್ತೆ ಪಾಂಡವಪುರ
ತಾಲೂಕಿನ ಹಿರೇಮರಳಿ ಗ್ರಾಪಂ ನೂತನ ಅಧ್ಯಕ್ಷರಾಗಿ ಬೇವಿನಕುಪ್ಪೆ ಮಂಜುಳಾ ಚಂದ್ರಚಾರಿ, ಉಪಾಧ್ಯಕ್ಷರಾಗಿ ಬನಘಟ್ಟ ಕುಮಾರಸ್ವಾಮಿ ಅವಿರೋಧವಾಗಿ ಆಯ್ಕೆಯಾದರು.ಹಿಂದಿನ ಅಧ್ಯಕ್ಷೆ ಎಸ್.ಚೇತನಾ, ಉಪಾಧ್ಯಕ್ಷ ಯಶ್ವಂತ್‌ಗೌಡರ ರಾಜೀನಾಮೆಯಿಂದ ತೆರವಾದ ಸ್ಥಾನಗಳಿಗೆ ಚುನಾವಣೆ ನಡೆದು ಮಂಜುಳಾ ಚಂದ್ರಚಾರಿ, ಕುಮಾರಸ್ವಾಮಿ ಹೊರತುಪಡಿಸಿ ಉಳಿದ ಯಾವೊಬ್ಬ ಸದಸ್ಯರು ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಅಧ್ಯಕ್ಷ - ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಚುನಾವಣಾಧಿಕಾರಿ ಎಇಇ ಜಯರಾಮು ಘೋಷಿಸಿದರು.
ಅಧ್ಯಕ್ಷೆ ಮಂಜುಳಾ ಮಾತನಾಡಿ, ಗ್ರಾಪಂನ ನೂತನ ಅಧ್ಯಕ್ಷೆಯನ್ನಾಗಿ ಆಯ್ಕೆ ಮಾಡಿರುವುದಕ್ಕೆ ಅಭಿನಂಧನೆಗಳನ್ನು ಸಲ್ಲಿಸುತ್ತೇನೆ. ಮುಂದಿನ ದಿನಗಳಲ್ಲಿ ಎಲ್ಲರ ಜತೆಗೆ ಗ್ರಾಪಂ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದರು.ಈ ವೇಳೆ ಗ್ರಾಪಂ ಸದಸ್ಯರಾದ ಯಶ್ವಂತ್‌ಗೌಡ, ರತ್ನಮ್ಮ, ಶ್ವೇತಾ, ಟಿ.ಎಂ.ಸವಿತ, ಎಚ್.ಎಚ್.ನವೀನ, ರಮೇಶ್‌ಶೆಟ್ಟಿ, ಬಿ.ಜೆ.ವಿಜಯಕುಮಾರ್, ಮಂಜಳಾ, ಕುಮಾರಸ್ವಾಮಿ, ಬಿ.ಸಿ.ಸುನೀಲ್, ಕೃಷ್ಣೇಗೌಡ, ಚೇತನ, ಭಾಗ್ಯ, ಮುಖಂಡರಾದ ಎಪಿಎಂಸಿ ಮಾಜಿ ಅಧ್ಯಕ್ಷ ಎಚ್.ಎಸ್.ವಿ.ಸ್ವಾಮೀಗೌಡ, ಗ್ರಾಪಂ ಮಾಜಿ ಅಧ್ಯಕ್ಷ ಸುನೀಲ್‌ಕುಮಾರ್, ಶ್ರೀನಿವಾಸ್. ಹರೀಶ್, ರಾಜೇಶ್, ಯ.ನವೀನ್, ಪಿಡಿಒ ನಿರಂಜನ್, ಕಾರ್ಯದರ್ಶಿ ಸತೀಶ್, ಮರೀಗೌಡ, ಸೇರಿದಂತೆ ಗ್ರಾಮಸ್ಥರು, ಯಜಮಾನರು, ಯುವಕರು ಹಾಜರಿದ್ದರು.