ಸಾರಾಂಶ
ಬಿಜೆಪಿ ಬೆಂಬಲಿತ ಅಭ್ಯರ್ಥಿ ಮಂಜುಳಾ ಕೋಳಿವಾಡ ಒಬ್ಬರೇ ಉಮೇದುವಾರಿಕೆ ಸಲ್ಲಿಸಿದ್ದರಿಂದ ಚುನಾವಣಾ ಅಧಿಕಾರಿ ನೂತನ ಅಧ್ಯಕ್ಷರ ಅವಿರೋಧ ಆಯ್ಕೆಯನ್ನು ಘೋಷಿಸಿದರು.
ಸವಣೂರು: ತಾಲೂಕಿನ ಮಂತ್ರೋಡಿ ಗ್ರಾಪಂ ಕಚೇರಿಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಗುರುವಾರ ಚುನಾವಣೆ ನಡೆಸಲಾಯಿತು. ಬಾಪುಗೌಡ ಕೊಪ್ಪದ ಅವರ ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಮಹಿಳಾ ಅಭ್ಯರ್ಥಿ ಮಂಜುಳಾ ಕೋಳಿವಾಡ ಅವಿರೋಧವಾಗಿ ಆಯ್ಕೆಯಾದರು.
12 ಜನ ಸದಸ್ಯರಿರುವ ಗ್ರಾಪಂನಲ್ಲಿ ಓರ್ವ ಸದಸ್ಯೆ ನಿಧನ ಹೊಂದಿದ್ದು, ಉಳಿದ 11 ಸದಸ್ಯರಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಮಂಜುಳಾ ಕೋಳಿವಾಡ ಒಬ್ಬರೇ ಉಮೇದುವಾರಿಕೆ ಸಲ್ಲಿಸಿದ್ದರಿಂದ ಚುನಾವಣಾ ಅಧಿಕಾರಿ ನೂತನ ಅಧ್ಯಕ್ಷರ ಅವಿರೋಧ ಆಯ್ಕೆಯನ್ನು ಘೋಷಿಸಿದರು.ನೂತನವಾಗಿ ಆಯ್ಕೆಗೊಂಡ ಅಧ್ಯಕ್ಷೆ ಮಂಜುಳಾ ಕೋಳಿವಾಡ ಅವರನ್ನು ಬಿಜೆಪಿ ಸವಣೂರು ಮಂಡಳದ ನೂತನ ಅಧ್ಯಕ್ಷ ಶಿವಪುತ್ರಪ್ಪ ಕಲಕೋಟಿ ಅಭಿನಂದಿಸಿದರು.ಈ ಸಂದರ್ಭದಲ್ಲಿ ಗ್ರಾಪಂ ಉಪಾಧ್ಯಕ್ಷ ಸುರೇಶ ಹೊನ್ನಿಕೊಪ್ಪ, ಸದಸ್ಯರಾದ ಮಲ್ಲೇಶಪ್ಪ ಭಂಡಾರಿ, ಸುರೇಶಗೌಡ ಅಯ್ಯನಗೌಡ್ರ, ಈಶ್ವರಪ್ಪ ಬಿಜಾಪೂರ, ದ್ಯಾಮವ್ವ ಹರಿಜನ, ಕಾಳವ್ವ ಬಡಿಗೇರ, ನೀಲಮ್ಮ ಗುರನಳ್ಳಿ, ಬಾಪುಗೌಡ ಕೊಪ್ಪದ, ಮುಖಂಡರಾದ ಪಿಎಲ್ಡಿ ಬ್ಯಾಂಕಿನ ನಿರ್ದೇಶಕ ರಮೇಶ ಅರಗೋಳ, ಬಸನಗೌಡ ಕೊಪ್ಪದ, ಫಕ್ಕೀರಗೌಡ ಪಾಟೀಲ, ಪಕ್ಕಣ್ಣ ಶಿಗ್ಗಾಂವಿ, ಹನುಮಂತಪ್ಪ ಕೋಳಿವಾಡ, ಗಾಳೆಪ್ಪ ದೊಡ್ಡಪೂಜಾರ, ಹನುಮಂತಪ್ಪ ನೆಲ್ಲೂರ, ನಾಗಪ್ಪ ವಾಲ್ಮೀಕಿ, ನೀಲಪ್ಪ ಕೋಳಿವಾಡ, ಮಲ್ಲಿಕಾರ್ಜುನ, ಅಶೋಕ ಎಲಿಗಾರ, ನಿರಂಜಿ ಇತರರು ಇದ್ದರು.ಕೆ.ವಿ. ಪಾಲಿಟೆಕ್ನಿಕ್ಗೆ ಶೇ.100 ಫಲಿತಾಂಶರಾಣಿಬೆನ್ನೂರು: ಕಳೆದ ಮೇ ತಿಂಗಳಲ್ಲಿ ಜರುಗಿದ ಡಿಪ್ಲೊಮಾ ಪರೀಕ್ಷೆಯಲ್ಲಿ ನಗರದ ಕೆ.ವಿ. ಪಾಲಿಟೆಕ್ನಿಕ್ಗೆ ಶೇ. 100ರಷ್ಟು ಫಲಿತಾಂಶ ಲಭಿಸಿದೆ. ಒಟ್ಟು 58 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಎಲ್ಲರೂ ಉತ್ತೀರ್ಣರಾಗಿದ್ದಾರೆ.ಅಗ್ರ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳು: ಕಂಪ್ಯೂಟರ್ ಸೈನ್ಸ್ ವಿಭಾಗ: ಕಾರ್ತಿಕುಮಾರ್ಎಲ್. ಕೆ.(ಶೇ. 97.75) ಗಾಯತ್ರಿ ಬಿ.ಕೆ.(ಶೇ. 97.75), ಮೇಘನಾ ಎಸ್.ಎನ್.(ಶೇ. 96.75), ಅಪೂರ್ವ ವಿ.ಎಚ್.(ಶೇ. 96.25) ಜಯಶ್ರೀ ಎಸ್.ಎನ್.(ಶೇ.96)
ಮೆಕ್ಯಾನಿಕಲ್ ವಿಭಾಗ: ಮನು ನವಾತಿ(ಶೇ. 91), ಪುನೀತ್ ಎ.ಎಂ.(ಶೇ. 90.75)ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ವಿಭಾಗ: ಪ್ರದೀಪ್ ಸಿ.ಎಸ್.(ಶೇ. 93.75), ಎಂ. ಕಾರ್ತಿಕ್(ಶೇ. 88.75), ನವೀನ್ಕುಮಾರ್ಎಸ್.ಎಲ್.(ಶೇ. 88.75).