ಕುಂದೂರು ಗ್ರಾಪಂ ಅಧ್ಯಕ್ಷರಾಗಿ ಮಂಜುಳಾ ಮಲ್ಲಿಕಾರ್ಜುನ್ ಆಯ್ಕೆ

| Published : Oct 23 2024, 12:38 AM IST

ಸಾರಾಂಶ

ಹೊನ್ನಾಳಿ ತಾಲೂಕಿನ ಕುಂದೂರು ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಅವರ ಸಹೋದರ ಪತ್ನಿ ಮಂಜುಳಾ ಎಂ.ಪಿ. ಮಲ್ಲಿಕಾರ್ಜುನ್ ಅವಿರೋಧ ಆಯ್ಕೆಯಾಗಿದ್ದಾರೆ.

ಹೊನ್ನಾಳಿ: ತಾಲೂಕಿನ ಕುಂದೂರು ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಅವರ ಸಹೋದರ ಪತ್ನಿ ಮಂಜುಳಾ ಎಂ.ಪಿ. ಮಲ್ಲಿಕಾರ್ಜುನ್ ಅವಿರೋಧ ಆಯ್ಕೆಯಾಗಿದ್ದಾರೆ.

ಅಧ್ಯಕ್ಷರಾಗಿದ್ದ ರತ್ನಮ್ಮ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಮಂಗಳವಾರ ಚುನಾವಣೆ ನಡೆಯಿತು. ಮಂಜುಳಾ ಮಲ್ಲಿಕಾರ್ಜುನ್ ಅವರೊಬ್ಬರೇ ಉಮೇದುವಾರಿಕೆ ಸಲ್ಲಿಸಿದ್ದರು. ಇದರಿಂದಾಗಿ ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಹಾಗೂ ಚುನಾವಣಾಧಿಕಾರಿ ಎಂ.ನಾಗೇಂದ್ರಪ್ಪ ಅವರು ಮಂಜುಳಾ ಅವರ ಅವಿರೋಧ ಆಯ್ಕೆ ಪ್ರಕಟಿಸಿದರು.

ಈ ಸಂದರ್ಭದಲ್ಲಿ ಉಪಾಧ್ಯಕ್ಷ ರಹಮತ್ ಉಲ್ಲಾಖಾನ್, ಗ್ರಾಪಂ ಮಾಜಿ ಅಧ್ಯಕ್ಷೆ ರತ್ನಮ್ಮ, ಸದಸ್ಯರಾದ ಪ್ರಸನ್ನಕುಮಾರ್, ಉದಯಕುಮಾರ್, ಸುರೇಶ್, ಆಂಜನೇಯ, ಧನಂಜಯ್, ಲತಾ ಹಾಲೇಶ್, ರೇಖಾ ರೇವಣಸಿದ್ದಪ್ಪ ಉಪಸ್ಥಿತರಿದ್ದರು. ನಾಲ್ವರು ಸದಸ್ಯರು ಗೈರಾಗಿದ್ದರು.

ಪಿಡಿಒ ವಿಜಯಕುಮಾರ್, ಕಾರ್ಯದರ್ಶಿ ವಿರೇಂದ್ರ, ಮುಖಂಡ ಎಂ.ಪಿ. ಮಲ್ಲಿಕಾರ್ಜುನ್, ಎಂ.ಪಿ. ಹಾಲೇಶಪ್ಪ, ಸಿದ್ದೇಶಪ್ಪ, ಪರಮೇಶಪ್ಪ, ಗುರುರಾಜ ಪಾಟೀಲ್, ಜಯಪ್ಪ ಗೌಡ, ವರಗಿರಿ, ತಿಪ್ಪೇಶಪ್ಪ ಹಾಗೂ ಗ್ರಾಪಂ ಸಿಬ್ಬಂದಿ ಹಾಜರಿದ್ದರು.

- - - -22ಎಚ್.ಎಲ್.ಐ2:

ಹೊನ್ನಾಳಿ ತಾಲೂಕು ಕುಂದೂರು ಗ್ರಾಪಂ ಅಧ್ಯಕ್ಷರಾಗಿ ಮಂಜುಳಾ ಎಂ.ಪಿ. ಮಲ್ಲಿಕಾರ್ಜುನ್ ಅವಿರೋಧ ಆಯ್ಕೆಯಾಗಿದ್ದು, ಗ್ರಾಪಂ ಸದಸ್ಯರು, ಅಧಿಕಾರಿಗಳು, ಸಿಬ್ಬಂದಿ ಹಾಗೂ ಗ್ರಾಮಸ್ಥರು ಅಭಿನಂದಿಸಿದರು.