ಹಳೇಬೀಡು: ಇಲ್ಲಿನ ಪೊಲೀಸ್‌ ಠಾಣೆಗೆ ನೂತನ ಉಪನಿರೀಕ್ಷರಕರಾಗಿ (ಎಸ್ಸೈ) ಮಂಜುನಾಥ್. ಆರ್‌ ಅವರು ಅಧಿಕಾರ ವಹಿಸಿಕೊಂಡಿದ್ದಾರೆ.

ಈ ಹಿಂದೆ ಚಾಮರಾಜನಗರ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅವರು ವರ್ಗಾವಣೆಗೊಂಡು ಹಳೇಬೀಡಿನ ಆರಕ್ಷಕ ಠಾಣೆಯಲ್ಲಿ ಅಧಿಕಾರ ವಹಿಸಿಕೊಂಡು ಮಧ್ಯಮದೊಂದಿಗೆ ಮಾತನಾಡುತ್ತ, ಹಳೇಬೀಡು ವಿಶ್ವ ಪಾರಂಪರಿಕ ಪಟ್ಟಿಗೆ ಸೇರಿದಂತಹ ವಿಶೇಷ ಸ್ಥಳ ಹಾಗೂ ದಿನನಿತ್ಯ ದೇಶ ಮತ್ತು ವಿದೇಶದಿಂದ ಪ್ರವಾಸಿಗರು ಬರುವ ಸ್ಥಳವಾಗಿದೆ. ಇಲ್ಲಿ ಕರ್ತವ್ಯ ನಿರ್ವಹಿಸಲು ಆಸ್ತಕನಾಗಿದ್ದೇನೆ. ಹೊಯ್ಸಳರ ನಾಡಿನಲ್ಲಿ ಯಾವುದೇ ರೀತಿಯ ಘರ್ಷಣೆ, ಮತಿಯ ಗಲಭೆಗಳಿಗೆ ಅವಕಾಶ ನೀಡದೆ ಶಾಂತಿಯುತವಾಗಿ ಸೌಹಾರ್ದತೆಯನ್ನು ಬೆಳೆಸುವ ನಿಟ್ಟಿನಲ್ಲಿ ಕರ್ತವ್ಯ ನಿರ್ವಹಿಸುವುದಾಗಿ ಹೇಳಿದರು.

ಬೇಲೂರು-ಹಳೇಬೀಡಿನ ಪ್ರಮುಖ ರಸ್ತೆ ಟ್ರಾಫಿಕ್ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ರಸ್ತೆ ಬದಿಗಳಲ್ಲಿರುವ ಅನಧಿಕೃತ ಶೆಡ್ಡುಗಳು, ವ್ಯಾಪಾರ ನಡೆಸದಿರುವ ಅನುಪಯುಕ್ತ ಅಂಗಡಿಗಳ ತೆರವು ಸೇರಿದಂತೆ ಇನ್ನಿತರ ತೊಂದರೆಗಳಿಂದ ಜನರಿಗೆ ಮುಕ್ತಿಯನ್ನು ನೀಡಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಿಕೊಡಲು ಮೊದಲ ಆದ್ಯತೆಯನ್ನು ನೀಡಲಾಗುವುದು ಎಂದು ತಿಳಿಸಿದರು.