ಮಂಜುನಾಥ್‌ ಕೊಲೆ: ಸ್ಥಳಕ್ಕೆ ಐಜಿಪಿ ಭೇಟಿ

ಹುಳಿಯಾರು: ಸಮೀಪದ ಕೆಂಕೆರೆ ಗ್ರಾಮದಲ್ಲಿ ಭಾನುವಾರ ರಾತ್ರಿ ಅಪರಿಚಿತ ದುಷ್ಕರ್ಮಿಗಳಿಂದ ಕೊಲೆಯಾದ ಶಾಮಿಯಾನದ ಮಂಜುನಾಥ್‌ ಅವರ ಮನೆಗೆ ಕೇಂದ್ರ ವಲಯ ಐಜಿಪಿ ಲಾಬು ರಾಮ್ ಭೇಟಿ ನೀಡಿ ಕುಟುಂಬಸ್ಥರು ಹಾಗೂ ಸ್ಥಳೀಯ ಪೊಲೀಸರೊಂದಿಗೆ ಮಾತುಕತೆ ನಡೆಸಿದರು. ಮಂಗಳವಾರ ಇಲ್ಲಿಗೆ ಆಗಮಿಸಿದ ಅವರಿಗೆ ತುಮಕೂರು ಎಸ್ ಪಿ ಅಶೋಕ್ ಕೆ.ವಿ, ಎ.ಎಸ್.ಪಿ ಗೋಪಾಲ್ ಸಿ, ಡಿ.ವೈ.ಎಸ್.ಪಿ ಯಶ್ ಕುಮಾರ್ ಶರ್ಮ, ಚಿ.ನಾ.ಹಳ್ಳಿ ವೃತ್ತ ನಿರೀಕ್ಷಕ ಜನಾರ್ದನ್, ಹುಳಿಯಾರು ಪಿ.ಎಸ್.ಐ ಜಗದೀಶ್ ಸಾಥ್‌ ನೀಡಿ ಘಟನೆ ಕುರಿತು ವಿವರಿಸಿದರು. ಇದಕ್ಕೂ ಮೊದಲು ಮಾಜಿ ಸಚಿವ ಮಾಧುಸ್ವಾಮಿ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.