ಭೂಮಿ ತಂಪಾದರೆ ಮನುಕುಲಕ್ಕೆ ಉಳಿವು:ನ್ಯಾ. ಗೀತಾಮಣಿ

| Published : Apr 25 2024, 01:08 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಮುಧೋಳ: ಸಕಾಲಕ್ಕೆ ಮಳೆಯಾಗಿ ಭೂಮಿ ತಂಪಾದರೆ, ಗಿಡ-ಮರಗಳಿಗೆ, ಪ್ರಾಣಿ-ಪಕ್ಷಿಗಳಿಗೆ ಹಾಗೂ ಮನು ಕುಲಕ್ಕೆಅನುಕೂಲಕರವಾಗುತ್ತದೆ ಎಂದು ಮುಧೋಳ ನ್ಯಾಯಾಲಯದ ಪ್ರಧಾನ ಹಿರಿಯ ದಿವಾಣಿ ನ್ಯಾಯಾಧೀಶೆ ಗೀತಾಮಣಿ ಹೇಳಿದರು.

ಕನ್ನಡಪ್ರಭ ವಾರ್ತೆ ಮುಧೋಳ:

ಸಕಾಲಕ್ಕೆ ಮಳೆಯಾಗಿ ಭೂಮಿ ತಂಪಾದರೆ, ಗಿಡ-ಮರಗಳಿಗೆ, ಪ್ರಾಣಿ-ಪಕ್ಷಿಗಳಿಗೆ ಹಾಗೂ ಮನು ಕುಲಕ್ಕೆಅನುಕೂಲಕರವಾಗುತ್ತದೆ ಎಂದು ಮುಧೋಳ ನ್ಯಾಯಾಲಯದ ಪ್ರಧಾನ ಹಿರಿಯ ದಿವಾಣಿ ನ್ಯಾಯಾಧೀಶೆ ಗೀತಾಮಣಿ ಹೇಳಿದರು.ವಲಯ ಅರಣ್ಯಾಧಿಕಾರಿಗಳ ಕಚೇರಿ ಆವರಣದಲ್ಲಿ ವಿಶ್ವ ಭೂಮಿ ದಿನಾಚರಣೆ ನಿಮಿತ್ತ ಸಸಿಗೆ ನೀರುಣಿಸಿ ಮಾತನಾಡಿ, ಏ.22 ವಿಶ್ವದಾದ್ಯಾಂತ ಪರಿಸರ ಮತ್ತು ಭೂ ದಿನಾಚರಣೆ ಆಚರಿಸಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಗಿಡಮರಗಳ ಸಂಖ್ಯೆ ಕಡಿಮೆಯಾಗಿರುವುದರಿಂದ ಸಾರ್ವಜನಿಕರಿಗೆ ಆಕ್ಸಿಜನ್ ಕೊರತೆ ಉಂಟಾಗುತ್ತದೆ. ಇದರಿಂದ ಆರೋಗ್ಯದಲ್ಲಿ ಏರುಪೇರಾಗುತ್ತದೆ. ಹೆಚ್ಚು ಗಿಡಮರಗಳನ್ನು ಬೆಳೆಸುವುದರಿಂದ ಸಕಾಲಕ್ಕೆ ಮಳೆಯಾಗಿ ಪರಿಸರ ಅಭಿವೃದ್ಧಿಗೊಳ್ಳುವುದಲ್ಲದೇ ಸರಿಯಾದ ಆಕ್ಸಿಜನ್ ದೊರೆತು ಜನ ಆರೋಗ್ಯವಂತರಾಗಿರುತ್ತಾರೆ. ಆದ್ದರಿಂದ ಸಾರ್ವಜನಿಕರು ಭೂಮಿ ಸಂರಕ್ಷಣೆ ಜೊತೆಗೆ ಗಿಡ-ಮರ ಬೆಳೆಸುವ ಹವ್ಯಾಸ ಬೆಳೆಸಿ ಕೊಳ್ಳಬೇಕೆಂದು ತಿಳಿಸಿದರು.ಈ ಸಂದರ್ಭದಲ್ಲಿ ಹೆಚ್ಚುವರಿ ಹಿರಿಯ ನ್ಯಾಯಾಧೀಶ ವಿವೇಕ ಗ್ರಾಮೋಪಾಧ್ಯ, ತಾಲೂಕಾ ಕಾನೂನು ಸೇವಾ ಸಮಿತಿಯ ಕಾರ್ಯದರ್ಶಿ ಸಿದ್ದನಗೌಡ ಪಾಟೀಲ .ಟಿ, ಪ್ರಧಾನ ದಿವಾಣಿ ಹೆಚ್ಚುವರಿ ನ್ಯಾಯಾಧೀಶ ಸರಸ್ವತಿ ಹೋಟಕರ, ವಕೀಲರ ಸಂಘದ ಅಧ್ಯಕ್ಷ ವ್ಹಿ.ಡಿ.ಕತ್ತಿ, ವಲಯ ಅರಣ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.