ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಪಟ್ಟಣದ ಹೌಸಿಂಗ್ ಬೋರ್ಡ್ ಕಾಲೋನಿಯ ಬುದ್ಧ- ಬಸವ- ಅಂಬೇಡ್ಕರ್ ಯೋಗ ಕೇಂದ್ರದಲ್ಲಿ ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರ ನಿಧನಕ್ಕೆ ಸಂತಾಪ ಸೂಚಕ ಸಭೆ ನಡೆಸಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.ತಾಲೂಕಿನ ಮುರುಕನಹಳ್ಳಿ ಸರ್ಕಾರಿ ಶಾಲೆ ಶಿಕ್ಷಕಿ ಯಮುನಾ ಮಾತನಾಡಿ, ಆರ್ಥಿಕ ತಜ್ಞರಾದ ಡಾ. ಮನಮೋಹನ್ ಸಿಂಗ್ ರವರು ಭಾರತದ ಹೆಮ್ಮೆಯ ದೇಶಭಕ್ತರು. ಇಡೀ ವಿಶ್ವವೇ ಆರ್ಥಿಕವಾಗಿ ದಿವಾಳಿಯಾಗುತ್ತಿದ್ದರೂ ಭಾರತವನ್ನು ಆರ್ಥಿಕವಾಗಿ ಭದ್ರವಾಗಿರುವಂತೆ ಮಾಡಿದ ಕೀರ್ತಿ ಮಾಜಿ ಪ್ರಧಾನಿಗಳಿಗೆ ಸಲ್ಲಬೇಕು ಎಂದರು.
ದೇಶ ಮೊದಲು, ಭಾರತ ಸಂವಿಧಾನವೇ ಶ್ರೇಷ್ಠ ಎಂದು ನಂಬಿದ್ದ ಡಾ.ಮನಮೋಹನ್ ಸಿಂಗ್ ಭಾರತೀಯರ ಮನಸ್ಸಿನಲ್ಲಿ ಚಿರಸ್ಥಾಯಿಯಾಗಿ ಉಳಿಯಲಿದ್ದಾರೆ ಎಂದು ತಿಳಿಸಿದರು.ಯೋಗಗುರು ಅಲ್ಲಮ ಪ್ರಭು ಮಾತನಾಡಿ, 10 ವರ್ಷಗಳ ಕಾಲ ಭಾರತದ ಪ್ರಧಾನಿಯಾಗಿದ್ದ ಅಲ್ಪಸಂಖ್ಯಾತ ಸಿಖ್ ಧರ್ಮದ ಡಾ. ಮನಮೋಹನ್ ಸಿಂಗ್ ರವರು ಆರ್ಥಿಕ ಕ್ರಾಂತಿಯ ಹರಿಕಾರ, ಸರಳ, ಸಜ್ಜನಿಕೆಯ ತೇಜೋಮೂರ್ತಿ, ಮೌನವಾಗಿದ್ದೇ ದೇಶದ ಅಭಿವೃದ್ಧಿಗೆ ಶ್ರಮಿಸಿದರು ಎಂದರು.
ಡಾ.ಮನಮೋಹನ್ ಸಿಂಗ್ ಅವರ ಆತ್ಮಕ್ಕೆ ಚಿರಶಾಂತಿ ಕೋರಿ ಸಿಖ್ ಧರ್ಮದ ಖ್ಯಾತ ಘೋಷಣೆಯಾದ, ಸತ್ ಶ್ರೀ ಅಕಾಲ್, ಸತ್ ಶ್ರೀ ಅಕಾಲ್ (ಸತ್ಯಕ್ಕೆ ಜಯವಾಗಲಿ, ಸತ್ಯ ಎಂದೆಂದೂ ಶ್ರೇಷ್ಠ)ಮೊಳಗಿಸಿದ ಯೋಗಪಟುಗಳು ಅನಂತರ 5 ನಿಮಿಷ ಮೌನಾಚಾರಣೆ ಮಾಡಿದರು.ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಪೊಲೀಸ್ ಇಲಾಖೆಯ ಉಮೇಶ ನವೀನಾ, ವೈರಮುಡಿ ಯಶೋಧಾ, ಕೆಇಬಿ ಸುಲೋಚನಾ, ಕರುಣಾ ಕೊಣನೂರು, ಉಪನ್ಯಾಸಕ ಶ್ರೀಧರ್, ಶಿಕ್ಷಣ ಸಂಯೋಜಕ ಸಿ ವೀರಭದ್ರಯ್ಯ, ಶಿಕ್ಷಕ ಮಾಕವಳ್ಳಿ ವಸಂತರಾಜು, ಶಿಕ್ಷಕಿಯರಾದ, ಪವಿತ್ರ ಚನ್ನೇಗೌಡ, ರೇಣುಕಾ, ವಾಣಿ, ಶ್ರೀಮತಿ ರಾಧಾ ಆಚಾರ್, ಕುಮಾರಿ ನಿಸರ್ಗ ಹೊಸಹೊಳಲು, ಐಶ್ವರ್ಯ, ಶ್ರಾವಣಿ, ಶೋಭಾ, ಜಾಹ್ನವಿ, ನೀತು, ತ್ರಿವೇಣಿ ಇದ್ದರು.