ಬಡವರ ಅಭಿವೃದ್ಧಿಗೆ ಶ್ರಮಿಸಿದ ಮನಮೋಹನ್‌ ಸಿಂಗ್‌

| Published : Jan 06 2025, 01:01 AM IST

ಸಾರಾಂಶ

ಹೊಸದುರ್ಗ ಪಟ್ಟಣದ ದುಗಾಂರ್ಭಿಕ ದೇವಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಅವರ ನುಡಿನಮನ ಕಾರ್ಯಕ್ರಮದಲ್ಲಿ ಶಾಸಕ ಬಿಜಿ ಗೋವಿಂದಪ್ಪ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಹೊಸದುರ್ಗ

ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಬಡವರ ಅಭಿವೃದ್ಧಿಗೆ ಶ್ರಮಿಸಿದ್ದಾರೆ ಎಂದು ಶಾಸಕ ಬಿ.ಜಿ. ಗೋವಿಂದಪ್ಪ ಹೇಳಿದರು.

ಪಟ್ಟಣದ ದುಗಾಂರ್ಭಿಕ ದೇವಿ ಕಲ್ಯಾಣ ಮಂಟಪದಲ್ಲಿ ಹೆಜ್ಜೆ ಸಾಲು ಒಂದು ಸಾಂಸ್ಕೃತಿಕ ವೇದಿಕೆ ವತಿಯಿಂದ ಶನಿವಾರ ಆಯೋಜಿಸಿದ್ದ ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಗೆ ನುಡಿನಮನ, ಚಿಂತನಾ ಮಂಥನ ಸಭೆ ಉದ್ಘಾಟಿಸಿ ಮಾತನಾಡಿದರು.

ಕಡ್ಡಾಯ ಶಿಕ್ಷಣ, ಆರೋಗ್ಯ, ಉದ್ಯೋಗ, ಮಾಹಿತಿ ಹಕ್ಕು ಕಾಯ್ದೆ ಸೇರಿದಂತೆ ಹತ್ತು ಹಲವು ಯೋಜನೆಗಳನ್ನು ರೂಪಿಸಿ, ಬಡವರ ಏಳಿಗೆಗಾಗಿ ಶ್ರಮಿಸಿದ ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಅವರನ್ನು ಸದಾ ನೆನೆಯಬೇಕು. ವಿಶ್ವ ಆರ್ಥಿಕ ಸಂಕಷ್ಠ ಎದುರಿಸುತ್ತಿರುವಾಗ ಅಂದು ಮನಮೋಹನ್‌ ಸಿಂಗ್‌ ಅವರ ಸಲಹೆ ಪಡೆದಿದ್ದು ದೇಶದ ಹೆಮ್ಮೆ. ಅವರು ಈ ದೇಶದಲ್ಲಿ ಉತ್ತಮ ಆಡಳಿತ ನಡೆಸಿದ್ದಾರೆ. ದೇಶಕ್ಕೆ ಕಪ್ಪುಚುಕ್ಕೆ ತರುವಂತಹ ಯಾವ ಕೆಲಸವನ್ನು ಮಾಡಿಲ್ಲ. ಅವರು ಬದುಕಿದ್ದಾಗ ತೆಗಳಿದ ಕೆಲವರು ಅವರು ನಿಧನರಾದಾಗ ಗುಣಗಾನ ಮಾಡಿದರು. ಮನಮೋಹನ್‌ ಸಿಂಗ್‌ ಅವರು ಬಗ್ಗೆ ಕೀಳಾಗಿ ಮಾತನಾಡಿದವರೇ ಅವರನ್ನು ಹೊಗಳಿದರು ಅಂತಹ ವ್ಯಕ್ತಿತ್ವ ಮನಮೋಹನ್‌ ಸಿಂಗ್‌ ಅವರದು ಎಂದು ಗುಣಗಾನ ಮಾಡಿದರು.

ಆರ್ಥಿಕ ತಜ್ಞ ಜಿ.ಎಸ್‌. ಮಲ್ಲಿಕಾರ್ಜುನಪ್ಪ ಅವರು ಉದಾರೀಕರಣ ಮತ್ತು ಮನಮೋಹನ್‌ ಸಿಂಗ್‌ ಕುರಿತು ಉಪನ್ಯಾಸ ನೀಡಿದರು.

ಈ ವೇಳೆ ಹೆಜ್ಜೆ ಸಾಲು ಒಂದು ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಗೋ.ತಿಪ್ಪೇಶ್‌, ಹೈಕೋರ್ಚ್‌ ನಿವೃತ್ತ ನ್ಯಾಯಮೂರ್ತಿ ಎಚ್‌.ಬಿಲ್ಲಪ್ಪ, ನಗರ ಘಟಕದ ಅಧ್ಯಕ್ಷ ಆಗ್ರೋ ಶಿವಣ್ಣ, ಕಸಾಪ ತಾಲ್ಲೂಕು ಅಧ್ಯಕ್ಷ ಬಿ.ಪಿ. ಓಂಕಾರಪ್ಪ ಮುಖಂಡರಾದ ಈಶ್ವರಪ್ಪ, ವೀರಭದ್ರಪ್ಪ, ಕೈನಡು ಚಂದ್ರಪ್ಪ, ದೊಡ್ಡಘಟ್ಟತಿಪ್ಪಯ್ಯ ಸೇರಿದಂತೆ ಸಾರ್ವಜನಿಕರಿದ್ದರು.