ಸಾರಾಂಶ
ಇಲ್ಲಿಯ ಕಾವೇರಿ ನದಿಯ ತಟದಲ್ಲಿ ನಡೆದ ತೆಪ್ಪೋತ್ಸವದಲ್ಲಿ ಶ್ರೀ ರಾಮರ ಪರಿವಾರ ಸಮೇತ ಪ್ರತಿಷ್ಠಾಪಿಸಿ, ಕಾವೇರಿ ನದಿ ನೀರಿನ ಮಧ್ಯೆ ಭಾಗದಲ್ಲಿ ಚಲುಸುತ್ತಿದ್ದ, ತೆಪ್ಪದಲ್ಲಿ ವಿದ್ಯುತ್ ದೀಪ ಹಾಗೂ ಹೂಗಳಿಂದ ಶ್ರೀಂಗರಿಸಿದ ಮಂಟಪವೂ ಜನರ ಮನ ಸೆಳೆಯಿತು. . ಬಂದಂತಹ ಭಕ್ತರುಗಳಿಗೆ ಪ್ರಸಾದದ ವ್ಯವಸ್ಥೆ ಮಾಡಿದ್ದರು. ಮುಖ್ಯ ಅರ್ಚಕರು ಶ್ರೀನಿವಾಸ್, ಉಮೇಶ್, ರಘು, ಎಂ.ಎನ್. ಕುಮಾರಸ್ವಾಮಿ, ಕಾಳಬೋಯಿ, ಕೇಶವ, ಸಿದ್ದರಾಜು ಮುಂತಾದವರು ಇದ್ದರು.
ರಾಮನಾಥಪುರ: ಇಲ್ಲಿಯ ಕಾವೇರಿ ನದಿಯ ತಟದಲ್ಲಿ ನಡೆದ ತೆಪ್ಪೋತ್ಸವದಲ್ಲಿ ಶ್ರೀ ರಾಮರ ಪರಿವಾರ ಸಮೇತ ಪ್ರತಿಷ್ಠಾಪಿಸಿ, ಕಾವೇರಿ ನದಿ ನೀರಿನ ಮಧ್ಯೆ ಭಾಗದಲ್ಲಿ ಚಲುಸುತ್ತಿದ್ದ, ತೆಪ್ಪದಲ್ಲಿ ವಿದ್ಯುತ್ ದೀಪ ಹಾಗೂ ಹೂಗಳಿಂದ ಶ್ರೀಂಗರಿಸಿದ ಮಂಟಪವೂ ಜನರ ಮನ ಸೆಳೆಯಿತು.
ರಾಮನಾಥಪುರದ ಶ್ರೀ ಚತುರ್ಯಗಮೂರ್ತಿ ಶ್ರೀ ರಾಮೇಶ್ವರಸ್ವಾಮಿ ದೇವಾಲಯದ ರಥೋತ್ಸವದ ಕಳೆದ ಮಾರನೇದಿವದ ಇಲ್ಲಿಯ ಕಾವೇರಿ ನದಿಯ ವಹ್ನಿಪುಷ್ಕರಣಿಯಲ್ಲಿ ಕೆಲವು ಹೊತ್ತು ಮಂಟಪದಲ್ಲಿ ಕೂರಿಸಿದ್ದ ಶ್ರೀರಾಮರ ಪರಿವಾರ ಸಮೇತ 3 ಸುತ್ತು ಚಲಿಸಿದ ನಂತರ ಮಹಾ ಮಂಗಳಾರತಿ ಮಾಡಿ ಮತ್ತೆ ದೇವಾಲಯದಲ್ಲಿ ಪ್ರತಿಸ್ಥಾಪಿಸಿ ಪೂಜಾ ಕೈಂಕರ್ಯ ಮತ್ತು ಮಹಾಮಂಗಳಾರತಿ ಮಾಡಲಾಯಿತು. ಬಂದಂತಹ ಭಕ್ತರುಗಳಿಗೆ ಪ್ರಸಾದದ ವ್ಯವಸ್ಥೆ ಮಾಡಿದ್ದರು. ಮುಖ್ಯ ಅರ್ಚಕರು ಶ್ರೀನಿವಾಸ್, ಉಮೇಶ್, ರಘು, ಎಂ.ಎನ್. ಕುಮಾರಸ್ವಾಮಿ, ಕಾಳಬೋಯಿ, ಕೇಶವ, ಸಿದ್ದರಾಜು ಮುಂತಾದವರು ಇದ್ದರು.;Resize=(128,128))
;Resize=(128,128))
;Resize=(128,128))
;Resize=(128,128))