ಸಾರಾಂಶ
ರಾಮನಗರ: ಜಿಲ್ಲಾ ಮಡಿವಾಳರ ಸಂಘದ ನೂತನ ಅಧ್ಯಕ್ಷರಾಗಿ ಮಂಟೇದಯ್ಯ ಅವಿರೋಧವಾಗಿ ಆಯ್ಕೆಯಾದರು.
ರಾಮನಗರದ ಪ್ರವಾಸಿ ಮಂದಿರದಲ್ಲಿ ರಾಜ್ಯಾಧ್ಯಕ್ಷ ಸಿ.ನಂಜಪ್ಪ ಅವರ ನೀರ್ದರ್ಶನದಂತೆ ಜಿಲ್ಲೆಯ ನಾಲ್ಕು ತಾಲೂಕಿನ ಅಧ್ಯಕ್ಷರು ಪದಾಧಿಕಾರಿಗಳ ಸಭೆ ನಡೆಸಿ ಜಿಲ್ಲಾ ಮಡಿವಾಳರ ಸಂಘಕ್ಕೆ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಸಲಾಯಿತು.ನೂತನ ಅಧ್ಯಕ್ಷರಾಗಿ ಮಂಟೇದಯ್ಯ, ಕಾರ್ಯದರ್ಶಿಯಾಗಿ ಲೋಕೇಶ್, ಉಪಾಧ್ಯಕ್ಷರಾಗಿ ಸಿ.ಎಚ್.ಸಂತೋಷ್ ಕುಮಾರ್ , ಸಿ.ಗಂಗಾಧರಯ್ಯ, ಖಜಾಂಚಿಯಾಗಿ ಶಿವನಂಜಯ್ಯ, ನಿರ್ದೇಶಕರಾಗಿ ಹರೀಶ್ ಕುಮಾರ್, ಚಂದ್ರಪ್ಪ, ಮುರುಗೇಶ್, ರುದ್ರಯ್ಯ, ವಸಂತಮ್ಮ ಅವರನ್ನು ನೇಮಕ ಮಾಡಲಾಯಿತು.
ಈ ವೇಳೆ ನೂತನ ಅಧ್ಯಕ್ಷ ಮಂಟೇದಯ್ಯ ಮಾತನಾಡಿ, ಸಂಘದ ಧ್ಯೇಯೋದ್ದೇಶಗಳನ್ನು ಅರಿತು ಪ್ರಾಮಾಣಿಕವಾಗಿ ಸಂಘದ ಸರ್ವತೋಮುಖ ಅಭಿವೃದ್ಧಿಗೆ ಹಾಗೂ ಸಮುದಾಯದ ಏಳಿಗೆಗೆ ಶಕ್ತಿ ಮೀರಿ ಶ್ರಮಿಸುತ್ತೇನೆ. ಸಮುದಾಯದ ಬಡವರಿಗೆ ಆರ್ಥಿಕ ಸದೃಢತೆಗೆ ಸರಕಾರದಿಂದ ಸಿಗಬೇಕಾದ ಸವಲತ್ತುಗಳನ್ನು ಕೊಡಿಸಲು ಶ್ರಮಿಸುತ್ತೇನೆ ಎಂದರು. ಕಾರ್ಯದರ್ಶಿ ಲೋಕೇಶ್ ಮಾತನಾಡಿ, ಸಂಘವನ್ನು ಸದೃಢವಾಗಿ ಕಟ್ಟಲು ಎಲ್ಲರೂ ಒಗ್ಗಟ್ಟಿನಿಂದ ದುಡಿಯೋಣ ಸಂಘವನ್ನು ಶಕ್ತಿಯುತವಾಗಿ ಬೆಳೆಸಲು ಎಲ್ಲರ ಸಹಕಾರ ಪ್ರೋತ್ಸಾಹ ಕೋರಿದರು.ರಾಮನಗರ ತಾಲೂಕು ಮಡಿವಾಳ ಸಂಘದ ಅಧ್ಯಕ್ಷ ವೀರಭದ್ರಯ್ಯ ಚನ್ನಪಟ್ಟಣ ಮಡಿವಾಳರ ಸಂಘದ ಅಧ್ಯಕ್ಷ ರಾಘವೇಂದ್ರ, ಕಾರ್ಯದರ್ಶಿ ಶಿವಕುಮಾರ್, ಮಾಗಡಿ ಮಡಿವಾಳರ ಸಂಘದ ಅಧ್ಯಕ್ಷ ಟಿ.ಎಂ.ಶ್ರೀನಿವಾಸ್, ಕಾರ್ಯದರ್ಶಿ ಹರೀಶ್ ಕುಮಾರ್, ಕಾನೂನು ಸಲಹೆಗಾರ ಡಿ.ಕೆ.ಚಂದ್ರಶೇಖರ್, ಕನಕಪುರ ಮಡಿವಾಳರ ಸಂಘದ ಅಧ್ಯಕ್ಷ ಎಂ.ಭೈರಯ್ಯ, ಪುಟ್ಟಸ್ವಾಮಿ, ಕೆಂಚಪ್ಪ, ಧನಂಜಯ, ನಿಂಗರಾಜು, ರವಿಕುಮಾರ್, ಶಿವನಂಜಯ, ಮಹದೇವ ಗವಿಯಪ್ಪ, ರವಿ ಮತ್ತಿತರರು ಹಾಜರಿದ್ದರು.
23ಕೆಆರ್ ಎಂಎನ್ 1.ಜೆಪಿಜಿರಾಮನಗರ ಜಿಲ್ಲಾ ಮಡಿವಾಳರ ಸಂಘಕ್ಕೆ ಆಯ್ಕೆಯಾದ ನೂತನ ಅಧ್ಯಕ್ಷ ಮಂಟೇದೆಯ್ಯ ಹಾಗೂ ಪದಾಧಿಕಾರಿಗಳನ್ನು ಮಡಿವಾಳ ಸಮಾಜದ ಮುಖಂಡರು ಅಭಿನಂದಿಸಿದರು.