ದೇಶಕ್ಕೆ ಸ್ವಾತಂತ್ರ್ಯ ದೊರೆತರೂ ಕಲ್ಯಾಣ ಕರ್ನಾಟಕ ಭಾಗಕ್ಕೆ ತಕ್ಷಣ ಸ್ವಾತಂತ್ರ್ಯ ಸಿಗಲಿಲ್ಲ. ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಹೋರಾಟದಿಂದ ಈ ಭಾಗಕ್ಕೆ ಸ್ವಾತಂತ್ರ್ಯ ದೊರೆಯಿತು ಎಂದು ಯುವಾ ಬ್ರಿಗೇಡ್‌ನ ಚಕ್ರವರ್ತಿ ಸೂಲಿಬೆಲೆ ಹೇಳಿದರು.
ಕನ್ನಡಪ್ರಭ ವಾರ್ತೆ ಮಸ್ಕಿ
ದೇಶಕ್ಕೆ ಸ್ವಾತಂತ್ರ್ಯ ದೊರೆತರೂ ಕಲ್ಯಾಣ ಕರ್ನಾಟಕ ಭಾಗಕ್ಕೆ ತಕ್ಷಣ ಸ್ವಾತಂತ್ರ್ಯ ಸಿಗಲಿಲ್ಲ. ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಹೋರಾಟದಿಂದ ಈ ಭಾಗಕ್ಕೆ ಸ್ವಾತಂತ್ರ್ಯ ದೊರೆಯಿತು ಎಂದು ಯುವಾ ಬ್ರಿಗೇಡ್‌ನ ಚಕ್ರವರ್ತಿ ಸೂಲಿಬೆಲೆ ಹೇಳಿದರು.ಪಟ್ಟಣದಲ್ಲಿ ಕಲ್ಯಾಣ ಕರ್ನಾಟಕ ದಿನಾಚರಣೆ ಅಂಗವಾಗಿ ಯುವಾ ಬ್ರಿಗೇಡ್ ತಾಲೂಕು ಸಮಿತಿಯಿಂದ ಆಯೋಜಿಸಿದ್ದ ತಿರಂಗಾ ಯಾತ್ರೆ ಹಾಗೂ ವಿಜಯೀ ಭವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ದೇಶ ಕಟ್ಟಲು ಅನೇಕರು ರಕ್ತ ಹಾಗೂ ತ್ಯಾಗವನ್ನು ಅರ್ಪಿಸಿದ್ದಾರೆ. ಅವರ ತ್ಯಾಗದ ಫಲವಾಗಿ ಇಂದು ಭಾರತ ಜಾಗತಿಕ ಮಟ್ಟದಲ್ಲಿ ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ ಎಂದರು.
ಈ ಸಂದರ್ಭದಲ್ಲಿ ಗಚ್ಚಿನ ಮಠದ ವರ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ಡಾ.ಮಲ್ಲಿಕಾರ್ಜುನ, ಮಸ್ಕಿ ಯುವಾ ಬ್ರಿಗೇಡ್ ತಾಲೂಕು ಸಂಚಾಲಕ ಅಶೋಕ ಬೆಳಗಲ್, ಯಮನೂರ ಕನ್ನಾರಿ, ಅಮರೇಶ್ ಬ್ಯಾಳಿ, ವಿನೋದ್ ಹಳ್ಳಿ, ದೇವರಾಜ್, ಅಮರೇಶ್ ಹರಾಸೂರು, ಕಾರ್ತಿಕ್ ಸೇರಿದಂತೆ ಇನ್ನಿತರರು ಇದ್ದರು.ಬೃಹತ್ ತಿರಂಗಾ ಯಾತ್ರೆ: ಯುವಾ ಬ್ರಿಗೇಡ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಬೃಹತ್ ತಿರಂಗ ಯಾತ್ರೆಯು ಪಟ್ಟ ಣದ ವಿವಿಧ ಬಡಾವಣೆಗಳಲ್ಲಿ ಸಾಗಿದ ತಿರಂಗಾ ಯಾತ್ರೆ ಭ್ರಮಾರಂಭ ಕಲ್ಯಾಣ ಮಂಟಪ ತಲುಪಿತು. ತಿರಂಗಾ ಯಾತ್ರೆಯಲ್ಲಿ ಮಲ್ಲಿಕಾರ್ಜುನ, ಮಸ್ಕಿ ಯುವಾ ಬ್ರಿಗೇಡ್ ತಾಲೂಕು ಸಂಚಾಲಕ ಅಶೋಕ ಬೆಳಗಲ್, ಶರಣಯ್ಯ ಸೊಪ್ಪಿಮಠ, ಮೌನೇಶ್ ನಾಯಕ್, ಪ್ರಸನ್ನ ಪಾಟೀಲ್, ರಾಕೇಶ್ ಪಾಟೀಲ್, ಯಮನೂರ ಕನ್ನಾರಿ, ಅಮರೇಶ್ ಬ್ಯಾಳಿ, ವಿನೋದ್ ಹಳ್ಳಿ, ದೇವರಾಜ್, ಅಮರೇಶ್ ಹರಾಸೂರು, ಕಾರ್ತಿಕ್ ಸೇರಿ ವಿದ್ಯಾರ್ಥಿಗಳು ಹಾಗೂ ಇನ್ನಿತರ ಯುವ ಬ್ರಿಗೇಡ್ ನ ಕಾರ್ಯಕರ್ತರಿದ್ದರು.