ಬಡದಾಳ ಜಿಪಂ ವ್ಯಾಪ್ತಿಯಲ್ಲಿ ಹಲವರು ಕಾಂಗ್ರೆಸ್ ಸೇರ್ಪಡೆ

| Published : Apr 17 2024, 01:17 AM IST

ಬಡದಾಳ ಜಿಪಂ ವ್ಯಾಪ್ತಿಯಲ್ಲಿ ಹಲವರು ಕಾಂಗ್ರೆಸ್ ಸೇರ್ಪಡೆ
Share this Article
  • FB
  • TW
  • Linkdin
  • Email

ಸಾರಾಂಶ

ಅಫಜಲ್ಪುರ ಮತಕ್ಷೇತ್ರದ ಬಡದಾಳ ಜಿಪಂ ಕೇಂದ್ರದಲ್ಲಿ ವಿವಿಧ ಪಕ್ಷಗಳನ್ನು ತೊರೆದು ಹಲವರು ಕೆಪಿಸಿಸಿ ಸದಸ್ಯ ಅರುಣಕುಮಾರ ಪಾಟೀಲ್ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.

ಕನ್ನಡಪ್ರಭ ವಾರ್ತೆ ಚವಡಾಪುರ

ಅಫಜಲ್ಪುರ ಮತಕ್ಷೇತ್ರದ ಬಡದಾಳ ಜಿಪಂ ಕೇಂದ್ರದಲ್ಲಿ ವಿವಿಧ ಪಕ್ಷಗಳನ್ನು ತೊರೆದು ಹಲವರು ಕೆಪಿಸಿಸಿ ಸದಸ್ಯ ಅರುಣಕುಮಾರ ಪಾಟೀಲ್ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.

ಕೆಪಿಸಿಸಿ ಸದಸ್ಯ ಅರುಣಕುಮಾರ ಪಾಟೀಲ್ ಮುಖಂಡರನ್ನು ಪಕ್ಷಕ್ಕೆ ಸ್ವಾಗತಿಸಿ ಮಾತನಾಡಿ, ಬಾರಿಯ ಲೋಕಸಭೆ ಚುನಾವಣೆ ಅಭಿವೃದ್ಧಿ ಮತ್ತು ಸುಳ್ಳು ಹೇಳುವವರ ನಡುವಿನ ಚುನಾವಣೆಯಾಗಿದೆ. ಕಳೆದ ಐದು ವರ್ಷದ ಅವಧಿಯಲ್ಲಿ ಬಿಜೆಪಿ ಅಭ್ಯರ್ಥಿ ಉಮೇಶ ಜಾಧವ ಸಂಸದರಾಗಿ ವಿಫಲವಾಗಿದ್ದಾರೆ. ಜನರ ಕೈಗೆ ಸಿಗದೆ ಓಡಾಡಿದವರಿಗ ಮತ್ತೆ ಬಂದು ಮೋದಿ ಹೆಸರಿನಲ್ಲಿ ಮತ ಕೇಳುತ್ತಿದ್ದಾರೆ. ಜನ ಅಧಿಕಾರ ನೀಡಿದಾಗ ಅಫಜಲ್ಪುರ ಮತಕ್ಷೇತ್ರಕ್ಕೆ ಒಂದೇ ಒಂದು ಪೈಸೆ ಅಭಿವೃದ್ಧಿ ಕೆಲಸ ಮಾಡದವರು ಈಗ ಮತ್ತೆ ಬಂದು ಜನರೆದುರು ಮತ ಕೇಳಲು ಶುರು ಮಾಡಿದ್ದಾರೆ. ಅವರ ಸುಳ್ಳಿನ ಸಂಚಿಗೆ ಮತದಾರರು ಬಲಿಯಾಗಬಾರದು ಎಂದ ಅವರು ಡಾ. ಮಲ್ಲಿಕಾರ್ಜುನ ಖರ್ಗೆ ಅವರು ಮಾಡಿದ ಅಭಿವೃದ್ಧಿ ಕೆಲಸಗಳು ಕಣ್ಣಿಗೆ ಕಾಣುವಂತವು, ಅಲ್ಲದೆ ಅವರು ಜನಸಾಮಾನ್ಯರಿಗೆ ತಾತ್ಕಾಲಿಕವಾಗಿ ಸೌಲಭ್ಯಗಳನ್ನು ಕಲ್ಪಿಸುವ ಕೆಲಸ ಮಾಡಿಲ್ಲ. ಬದಲಾಗಿ ಪೀಳಿಗೆ ಯಿಂದ ಪೀಳಿಗೆ ತನಕ ಉಪಯೋಗಕ್ಕೆ ಬರುವಂತ ಅಭಿವೃದ್ಧಿ ಮಾಡಿದ್ದಾರೆ. ಹೀಗಾಗಿ ಮಲ್ಲಿಕಾರ್ಜುನ ಖರ್ಗೆ ಅವರ ಕೈ ಬಲಪಡಿಸುವ ನಿಟ್ಟಿನಲ್ಲಿ ಮತ್ತು ಕಲಬುರಗಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ದೊಡ್ಮನಿ ಅವರನ್ನು ಭಾರಿ ಬಹುಮತದಿಂದ ಗೆಲ್ಲಿಸಿ ಲೋಕಸಭೆಗೆ ಕಳುಹಿಸಿ ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಮಾಜಿ ಜಿ.ಪಂ ಸದಸ್ಯ ಸಿದ್ದಾರ್ಥ ಬಸರಿಗಿಡ, ಮುಖಂಡರಾದ ಶಿವಾನಂದ ಗಾಡಿ, ಗೋರಖನಾಥ ಮಳಗಿ, ಶಿವಣ್ಣ ಸಿಂಗಡಗಾಂವ, ಹಣಮಂತ ಆನೂರ, ಶಿವಯೋಗಿ ಡಬ್ಬಿ, ಅರ್ಜುನ ಮಾಶಾಳ, ಲಕ್ಷ್ಮೀಪುತ್ರ ಕುರುಬತಳ್ಳಿ, ಮಂಜುನಾಥ ಆನೂರ, ಪ್ರಭಾಕರ ಕಲಬಂಡಿ, ಸುರೇಶ ಕಲಬುರಗಿ, ಶಾಂತ ನಾಟಿಕಾರ, ಚನ್ನಪ್ಪ ನಾಟಿಕಾರ, ಶರಣಪ್ಪ ಮಳಗಿ,ಅರುಣ ಮಳಗಿ, ರಮೇಶ ತೋಟನಾಕ, ಶರಣು ಬಿದನೂರ, ಕಲ್ಲಪ್ಪ ನಾಟಿಕಾರ, ವಿಜಯಕುಮಾರ ಭತ್ತಾ, ಅಮೃತ ಮಾತಾರಿ, ನಾಗಣ್ಣ ಮಾತಾರಿ, ಸತೀಶ ನಿಲಂಗಿ ಸೇರಿದಂತೆ ಅನೇಕರು ಇದ್ದರು.