ಸಾರಾಂಶ
ದೊಡ್ಡಬಳ್ಳಾಪುರ ತಾಲೂಕಿನ ಕನಸವಾಡಿಯಲ್ಲಿ ನಡೆದ ದೊಡ್ಡಬಳ್ಳಾಪುರ ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟದಲ್ಲಿ ಇಲ್ಲಿನ ಶ್ರೀ ದೇವರಾಜ ಅರಸ್ ಪದವಿ ಪೂರ್ವ ಕಾಲೇಜಿನ ಕ್ರೀಡಾಪಟುಗಳು ಭಾಗವಹಿಸಿ ವಿವಿಧ ಬಹುಮಾನಗಳನ್ನು ಪಡೆದಿದ್ದಾರೆ.
ಕನ್ನಡಪ್ರಭ ವಾರ್ತೆ ದೊಡ್ಡಬಳ್ಳಾಪುರ
ತಾಲೂಕಿನ ಕನಸವಾಡಿಯಲ್ಲಿ ನಡೆದ ದೊಡ್ಡಬಳ್ಳಾಪುರ ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟದಲ್ಲಿ ಇಲ್ಲಿನ ಶ್ರೀ ದೇವರಾಜ ಅರಸ್ ಪದವಿ ಪೂರ್ವ ಕಾಲೇಜಿನ ಕ್ರೀಡಾಪಟುಗಳು ಭಾಗವಹಿಸಿ ವಿವಿಧ ಬಹುಮಾನಗಳನ್ನು ಪಡೆದಿದ್ದಾರೆ.ಓಟದ ಸ್ಪರ್ಧೆಗಳಲ್ಲಿ ನಿತಿನ್‌ಗೌಡ, ಧೀರಜ್‌ಯಾದವ್ ಪ್ರಥಮ ಸ್ಥಾನ, 4 x 100 ರಿಲೇಯಲ್ಲಿ ಬಾಲಕಿಯರ ವಿಭಾಗದಲ್ಲಿ ದಿವ್ಯ, ಸಿಂಧು, ತೇಜಸ್ವಿನಿ, ಮನುಶ್ರೀ ಪ್ರಥಮ ಸ್ಥಾನ ಪಡೆದಿದ್ದಾರೆ.
4x400 ರಿಲೇ ಸ್ಪರ್ಧೆ ಬಾಲಕರ ವಿಭಾಗದಲ್ಲಿ ನವೀನ, ರಾಹುಲ್, ಧೀರಜ್ ಯಾದವ್, ನಿತಿನ್ ಗೌಡ ಪ್ರಥಮ, 4x100 ರಿಲೇ ಸ್ಪರ್ಧೆಯ ಬಾಲಕರ ವಿಭಾಗದಲ್ಲಿ ಧೀರಜ್ ಯಾದವ್, ಅಮಿತ್ ಕುಮಾರ್, ಆದರ್ಶ್, ರಾಹುಲ್.ಕೆ ದ್ವಿತೀಯ ಸ್ಥಾನ ಪಡೆದಿದ್ದಾರೆ.ವಾಕಿಂಗ್ ರೇಸ್‌ನಲ್ಲಿ ಸುಮನ್.ಸಿ ಪ್ರಥಮ, ಟೇಕ್ವಾಂಡೋದಲ್ಲಿ ಸೂರ್ಯ- ನಾಲ್ಕನೇ ಸ್ಥಾನ, ಪ್ರೀತಮ್ ಕುಮಾರ್- 5ನೇ ಸ್ಥಾನ, ದರ್ಶನ್ -ಪ್ರಥಮ, ಕ್ರಾಸ್ ಕಂಟ್ರಿ ವಿಭಾಗದಲ್ಲಿ ಸೌಮ್ಯ ಮತ್ತು ಮಾನ್ಯ ಮೂರನೇ ಸ್ಥಾನ, 3000 ಮೀಟರ್ ಓಟದಲ್ಲಿ ಮಾನ್ಯ ಮೂರನೇ ಸ್ಥಾನ, 800 ಮೀಟರ್ ಓಟದಲ್ಲಿ ನವೀನ್ ಮೂರನೇ ಸ್ಥಾನ ಪಡೆದುಕೊಂಡಿದ್ದಾರೆ.
ಗುಂಪು ವಿಭಾಗದ ಸ್ಪರ್ಧೆಯಲ್ಲಿ ಯೋಗ ವಿಭಾಗದಲ್ಲಿ ಕಾಲೇಜಿಗೆ ಎರಡನೇ ಸ್ಥಾನ, ಚೆಸ್ ವಿಭಾಗದಲ್ಲಿ ಪ್ರಥಮ, ಹ್ಯಾಂಡ್ ಬಾಲ್ ಬಾಲಕಿರ ವಿಭಾಗದಲ್ಲಿ ಎರಡನೇ ಸ್ಥಾನ, ಥ್ರೋಬಾಲ್ ಬಾಲಕಿಯರ ವಿಭಾಗದಲ್ಲಿ ಪ್ರಥಮ, ಬಾಲಕರ ವಿಭಾಗದಲ್ಲಿ ಎರಡನೇ ಸ್ಥಾನ ಮತ್ತು ಖೋಖೋ ಬಾಲಕರ ವಿಭಾಗದಲ್ಲಿ ಎರಡನೇ ಸ್ಥಾನ ಲಭಿಸಿದೆ.ಕಾಲೇಜಿನ ಕ್ರೀಡಾಪಟುಗಳಿಗೆ ಸಂಸ್ಥೆಯ ಉಪಾಧ್ಯಕ್ಷ ಜೆ.ರಾಜೇಂದ್ರ, ಕಾಲೇಜಿನ ಪ್ರಾಂಶುಪಾಲ ಮಹಂತೇಶ್, ಟೀಮ್ ಮ್ಯಾನೇಜರ್ ರವಿಕುಮಾರ್, ದೈಹಿಕ ಶಿಕ್ಷಣ ವಿಭಾಗದ ದಾದಾಪೀರ್ ಮತ್ತಿತರರು ಅಭಿನಂದಿಸಿದ್ದಾರೆ.