ಸಾರಾಂಶ
ಶೈಕ್ಷಣಿಕ ಮತ್ತು ಸಾಮಾಜಿಕ ಗಣತಿಯಲ್ಲಿ ಆಗುತ್ತಿರುವ ಸಮಸ್ಯೆಗಳು ತಾಂತ್ರಿಕ ಮತ್ತು ಇನ್ನಿತರ ಅನೇಕ ಸಮಸ್ಯೆಗಳ ಕುರಿತಾಗಿ ಮನವಿ ಸಲ್ಲಿಸಲಾಯಿತು.
ಕನ್ನಡಪ್ರಭ ವಾರ್ತೆ ಮಡಿಕೇರಿ
ಕೊಡಗು ಜಿಲ್ಲಾ ಪ್ರೌಢಶಾಲಾ ಶಿಕ್ಷಕ ಸಂಘದ ವತಿಯಿಂದ ಶೈಕ್ಷಣಿಕ ಮತ್ತು ಸಾಮಾಜಿಕ ಗಣತಿಯಲ್ಲಿ ಆಗುತ್ತಿರುವ ಸಮಸ್ಯೆಗಳು ತಾಂತ್ರಿಕ ಮತ್ತು ಇನ್ನಿತರ ಅನೇಕ ಸಮಸ್ಯೆಗಳನ್ನು ಕುರಿತಾಗಿ ಶಾಸಕ ಡಾ. ಮಂತರ್ ಗೌಡ ಹಾಗೂ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರಿಗೆ ಮನವಿ ಸಲ್ಲಿಸಲಾಯಿತು.ಇದಕ್ಕೆ ಪೂರಕವಾಗಿ ಸ್ಪಂದಿಸಿದ ಜಿಲ್ಲಾಧಿಕಾರಿಗಳು ಗಣತಿಯಲ್ಲಿ ಆಗುತ್ತಿರುವ ತಾಂತ್ರಿಕ ಮತ್ತು ಇನ್ನಿತರ ಸಮಸ್ಯೆಗಳನ್ನು ಆದಷ್ಟು ಬೇಗ ಪರಿಹರಿಸಿ ಗಣತಿಗೆ ಪೂರಕವಾದ ವಾತಾವರಣವನ್ನು ನಾವು ಮಾಡುತ್ತೇವೆ ಎಂದು ಭರವಸೆ ನೀಡಿದರು. ಜಿಲ್ಲಾಧಿಕಾರಿಗಳು ಶಿಕ್ಷಕರ ಮನವಿಗೆ ಸ್ಪಂದಿಸುತ್ತಾ UHID ನಂಬರ್ ಮತ್ತು ಆರ್ ಆರ್ ನಂಬರ್ ನ ಜೊತೆಗೆ ಮನೆ ಮುಖ್ಯಸ್ಥರ ಹೆಸರಿನ ಪಟ್ಟಿಯನ್ನು ಗಣತಿದಾರರಿಗೆ ಒದಗಿಸಲಾಗುವುದು ಎಂದು ಕೂಡ ತಿಳಿಸಿರುತ್ತಾರೆ.
ಗಣತಿಯ ಸಂದರ್ಭದಲ್ಲಿ ನೆಟ್ವರ್ಕ್ ಸಮಸ್ಯೆಯಿಂದಾಗಿ ಗಣತಿ ಮಾಡಲು ಸಾಧ್ಯವಾಗದ ಕಡೆಗಳಲ್ಲಿ ಆ ವಿಶೇಷ ಫ್ಯಾನ್ಸ್ಗಳನ್ನು ಆಯೋಜಿಸುವ ಮೂಲಕ ಗಣತಿಯ ಕೊನೆಯ ಹಂತದಲ್ಲಿ ಆ ಸ್ಥಳದ ಗಣತಿ ಕಾರ್ಯವನ್ನು ಪೂರೈಸಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.ಈ ಸಂದರ್ಭದಲ್ಲಿ ಕೂಡಗು ಜಿಲ್ಲಾ ಪ್ರೌಢಶಾಲಾ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷರಾದ ಹೆಚ್.ಜಿ. ಕುಮಾರ್ , ಕಾರ್ಯದರ್ಶಿಗಳಾದ ಮಹೇಂದ್ರ, ಕೊಡಗು ಜಿಲ್ಲಾ ಪ್ರೌಢಶಾಲಾ ಶಿಕ್ಷಕರ ಸಂಘದ ಮಡಿಕೇರಿ ತಾಲೂಕು ಘಟಕದ ಅಧ್ಯಕ್ಷ ರವಿಕೃಷ್ಣ, ತಾಲೂಕಿನ ಪದಾಧಿಕಾರಿಗಳು ಸೋಮವಾರಪೇಟೆ ತಾಲೂಕ್ ಘಟಕದ ಕಾರ್ಯದರ್ಶಿ ಶೈಲಾ, ಪದಾಧಿಕಾರಿಗಳಾದ ಪ್ರಕಾಶ್ ಹಾಜರಿದ್ದರು.