ಸಾರಾಂಶ
ಹಾನಗಲ್ಲ: ಸರ್ಕಾರ ಮಹಿಳೆಯರ ಸಬಲೀಕರಣಕ್ಕಾಗಿ ಪೋಷಣಾ, ಮಾತೃ ವಂದನಾ, ಮನಸ್ವಿನಿ, ಸುಕನ್ಯಾ ಸೇರಿದಂತೆ ಹತ್ತು ಹಲವು ಯೋಜನೆಗಳ ಮೂಲಕ ಒಳ್ಳೆಯ ಅವಕಾಶ ಕಲ್ಪಿಸಲಾಗಿದ್ದು ಇದರ ಸದುಪಯೋಗಕ್ಕೆ ಮುಂದಾಗಬೇಕು ಎಂದು ತಾಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿ ರಂಗನಾಥ ತಿಳಿಸಿದರು.
ತಾಲೂಕಿನ ಅಜಗುಂಡಿಕೊಪ್ಪದಲ್ಲಿ ಆದರ್ಶ ಮಹಿಳಾ ಒಕ್ಕೂಟ ಹಾಗೂ ರೋಶನಿ ಸಮಾಜ ಸೇವಾ ಸಂಸ್ಥೆ ವತಿಯಿಂದ ಆಯೋಜಿಸಿದ್ದ ಮಹಿಳಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಮಾನಸಿಕ ಮತ್ತು ದೈಹಿಕ ದೌರ್ಜನ್ಯವನ್ನು ತಡೆಯಲು ಇಲಾಖೆಯ ವತಿಯಿಂದ ಮಹಿಳಾ ರಕ್ಷಣಾ ಸಿಬ್ಬಂದಿ ನೇಮಿಸುವುದರ ಜೊತೆಗೆ ಸ್ವ ಉದ್ಯೋಗದಲ್ಲಿ ತೊಡಗಬೇಕು ಎಂಬ ಉದ್ದೇಶದೊಂದಿಗೆ ಉದ್ಯೋಗಿನಿ ಯೋಜನೆಯ ಅಡಿಯಲ್ಲಿ ಸಹಾಯಧನ ನೀಡಿ ಆರ್ಥಿಕ ಸಬಲೀಕರಣಕ್ಕೆ ಪ್ರೇರೇಪಿಸಲಾಗುತ್ತಿದೆ. ಮಹಿಳೆಯರು ಕುಟುಂಬದ ಜವಾಬ್ದಾರಿಯನ್ನು ನಿಭಾಯಿಸುವ ಶಕ್ತಿ ಸಾಮರ್ಥ್ಯ ಹೊಂದಿರುವ ಸಹನಾ ಮೂರ್ತಿ ಎಂದು ಕರೆಯಲಾಗುತ್ತದೆ. ಆದ್ದರಿಂದ ಮನೆಯಲ್ಲಿ ಮಕ್ಕಳಿಗೆ ತಮ್ಮ ಸಂಸ್ಕೃತಿ, ಆಚಾರ-ವಿಚಾರ, ಹಿರಿಯರೊಂದಿಗೆ ವರ್ತಿಸುವ ರೀತಿ ಸಂಬಂದಗಳ ಬಗ್ಗೆ ಹೇಳಿಕೊಡುವುದು ತುಂಬ ಅಗತ್ಯ ಎಂದರು.ಕಾರ್ಯಕ್ರಮದಲ್ಲಿ ರೋಶನಿ ಸಮಾಜ ಸೇವಾ ಸಂಸ್ಥೆಯ ನಿರ್ದೇಶಕಿ ಸಿಸ್ಟರ್ ಅನಿತಾ ಡಿಸೋಜಾ, ರೋಶನಿ ಕಾನ್ವೇಂಟನ್ ಜಾನೇಟ, ನ್ಯಾಯವಾದಿ ವೆರೋನಿಕಾ, ಗ್ರಾಪಂ ಸದಸ್ಯೆ ರೇಖಾ ಸಕನಳ್ಳಿ, ನೀಲವ್ವ ಹೊಸವಡ್ಡರ, ಆದರ್ಶ ಮಹಿಳಾ ಒಕ್ಕೂಟದ ಅಧ್ಯಕ್ಷೆ ಪ್ರೇಮಾ ಕಾಳೇರ, ಸದಸ್ಯೆ ಶಾಂತವ್ವ ಛಲವಾದಿ, ಅಮೀನಾ ಹಾವಣಗಿ, ಹೇಮಾವತಿ ಕುನ್ನೂರ, ಹಳ್ಳಿ ಅಭಿವೃದ್ಧಿ ಸಮಿತಿ ಸದಸ್ಯ ಪರಮೇಶ ಚೌಟಿ, ಹಿರಿಯರಾದ ರಾಜವಳ್ಳಿ ಕನವಳ್ಳಿ, ಶಿವಪ್ಪ ಪಾಣಿ, ಕಾರ್ಯಕ್ರಮಗಳ ವ್ಯವಸ್ಥಾಪಕ ಶಿವಕುಮಾರ ಮಾಂಗ್ಲೇನವರ, ಮಹಿಳಾ ಸಬಲೀಕರಣ ಸಂಯೋಜಕ ಡಿಗ್ಗಪ್ಪ ಲಮಾಣಿ, ಸಿಬ್ಬಂದಿ ಎಸ್.ವಿ. ಪಾಟೀಲ್, ಪ್ರವೀಣ ಮಾಂಗ್ಲೇನವರ, ರೂಪಾ ರಜಪೂತ, ಶೀಲಾ ಮ್ಯಾಗಲಮನಿ, ಪವಿತ್ರಾ ಜೋಗೇರ ಉಪಸ್ಥಿತರಿದ್ದರು. ರಾಧಾ ಹುಳ್ಳಿ ನಿರೂಪಿಸಿದರು, ಸುಮಲತಾ ಗಿರಿಸಿನಕೊಪ್ಪ ವಂದಿಸಿದರು.