ಸಾರಾಂಶ
ಕನ್ನಡಪ್ರಭ ವಾರ್ತೆ ಸವದತ್ತಿ
ಅಕ್ಷಯ ತೃತೀಯಾದಂದು ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಅಂಗವಾಗಿ ಮರಾಠ ಸಮಾಜದವರು ಸೇರಿದಂತೆ ಪಟ್ಟಣದ ಎಲ್ಲ ಸಮಾಜ ಬಾಂಧವರಿಂದ ಶಿವ-ಬಸವ ಜಯಂತಿ ಆಚರಿಸಲಾಯಿತು.ಇಲ್ಲಿನ ಛತ್ರಪತಿ ಶಿವಾಜಿ ಮಹಾರಾಜರ ವೃತ್ತದಲ್ಲಿ ಶಾಸಕ ವಿಶ್ವಾಸ ವೈದ್ಯ ಹಾಗೂ ಬಿಜೆಪಿ ತಾಲೂಕು ಅಧ್ಯಕ್ಷ ವಿರುಪಾಕ್ಷಣ್ಣ ಮಾಮನಿ ಶಿವಾಜಿ ಮಹಾರಾಜರ ಹಾಗೂ ಬಸವೇಶ್ವರ ಭಾವಚಿತ್ರಗಳಿಗೆ ಪೂಜೆ ಸಲ್ಲಿಸುವ ಮೂಲಕ ಶಿವಬಸವ ಜಯಂತಿಗೆ ಚಾಲನೆ ನೀಡಿದರು. ನಂತರ ಬಸವೇಶ್ವರ ವೃತ್ತಕ್ಕೆ ತೆರಳಿ ಬಸವೇಶ್ವರ ಪುತ್ಥಳಿಗೆ ಮಾಲಾರ್ಪಣೆ ಮಾಡಲಾಯಿತು.
ಈ ವೇಳೆ ಶಾಸಕ ವಿಶ್ವಾಸ ವೈದ್ಯ ಮಾತನಾಡಿ, ಬರುವಂತ ದಿನಗಳಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ವೃತ್ತಕ್ಕೆ ವಿಶೇಷ ಅನುದಾನ ನೀಡಿ ಉತ್ತಮ ರೀತಿಯಲ್ಲಿ ಅಭಿವೃದ್ಧಿಗೊಳಿಸುವುದರ ಜೊತೆಗೆ ಸುತ್ತಲಿನ ಪರಿಸರ ಶುಚಿತ್ವಗೊಳಿಸಿ ಶಿವಾಜಿ ಮಹಾರಾಜರ ವೃತ್ತವನ್ನು ಮಾದರಿ ವೃತ್ತವನ್ನಾಗಿಸುವುದಾಗಿ ಹೇಳಿದರು.ವಿರುಪಾಕ್ಷಣ್ಣ ಮಾಮನಿ ಮಾತನಾಡಿ, ದೇಶ ಭಕ್ತಿ ಹಾಗೂ ಸಮಾಜದ ಉನ್ನತಿಗಾಗಿ ಶ್ರಮಿಸಿದ ಶಿವಾಜಿ ಮಹಾರಾಜರ ಹಾಗೂ ಬಸವೇಶ್ವರ ಜಯಂತಿಯನ್ನು ಜ್ಯಾತ್ಯಾತೀತವಾಗಿ ಎಲ್ಲ ಸಮಾಜ ಬಾಂಧವರು ಸೇರಿಕೊಂಡು ಆಚರಣೆ ಮಾಡುತ್ತಿರುವುದು ಶ್ಲಾಘನೀಯ ಕಾರ್ಯ ಎಂದರು.
ಇದಕ್ಕೂ ಮುಂಚೆ ಗಿರಿಜನ್ನವರ ಓಣಿಯ ಶ್ರೀ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ವೇದಮೂರ್ತಿ ಗದಗಯ್ಯ ಚಿಕ್ಕಮಠ ವೈದಿಕತ್ವದಲ್ಲಿ ಸಮಾಜ ಬಾಂಧವರು ಬಾಲ ಶಿವಾಜಿ ತೊಟ್ಟಿಲಲ್ಲಿ ಹಾಕುವ ಮೂಲಕ ಪೂಜೆ ಸಲ್ಲಿಸಿ ಛತ್ರಪತಿ ಶಿವಾಜಿ ಮಹಾರಾಜರ ಘೋಷಣೆಯೊಂದಿಗೆ ಸಂಭ್ರಮ ಆಚರಿಸಿದರು.ಪಂಚಮಸಾಲಿ ಜಾಗೃತಿ ವೇದಿಕೆ ಅಧ್ಯಕ್ಷ ಅಲ್ಲಮಪ್ರಭು ಪ್ರಭುನವರ, ಮರಾಠ ಸಮಾಜದ ಮುಖಂಡ ಹಾಗೂ ಶ್ರೀ ರಾಮಲಿಂಗೇಶ್ವರ ಅರ್ಬನ ಸೌಹಾರ್ದ ಅಧ್ಯಕ್ಷ ಪುಂಡಲೀಕ ಭೀ. ಬಾಳೋಜಿ, ಬಸವರಾಜ ಕಪ್ಪಣ್ಣವರ, ಕುಮಾರಸ್ವಾಮಿ ತಲ್ಲೂರಮಠ, ರಾಜಶೇಖರ ನಿಡವಣಿ, ಸಿ.ಬಿ.ದೊಡಗೌಡರ, ಜಿ.ವೈ.ಕರಮಲ್ಲಪ್ಪನವರ, ಡಿ.ಡಿ.ಟೋಪೋಜಿ, ಬಸವರಾಜ ಅರಮನಿ, ಐ.ಪಿ.ಪಾಟೀಲ, ಬಸವರಾಜ ಪುಟ್ಟಿ, ಅಶೋಕ ಮುರಗೋಡ, ಎಮ್.ಎಮ್.ಯಲಿಗಾರ, ಮಲ್ಲು ಬೀಳಗಿ, ಸೋಮು ಹದ್ಲಿ, ಮಾರುತಿ ಜಾಧವ, ತಾನಾಜಿ ಶಿಂಧೆ, ಮಲ್ಲಿಕಾರ್ಜುನ ಬೇವೂರ, ಸುಭಾಸ ಅರಗಂಜಿ, ಮಂಜು ನಿಕ್ಕಂ, ಸುಭಾಸ ಪವಾರ, ರವಿ ಗಿರಿಜನ್ನವರ, ಸುರೇಶ ಬಾಳೋಜಿ, ನಾಗಪ್ಪ ಶಿಂಧೆ, ಅಣ್ಣಪ್ಪ ಪವಾರ, ಕೇದಾರ ಮೊಕಾಶಿ, ಮಂಜು ಪಾಚಂಗಿ, ಲಕ್ಷ್ಮಣ ಕಿಟದಾಳ, ಶಿವಾನಂದ ತಾರೀಹಾಳ, ಸಿದ್ದಪ್ಪ ರಾಹುತ, ಶ್ರೀನಿವಾಸ ಗದಗ, ಯಲ್ಲಪ್ಪ ಮಡಿವಾಳರ, ವಿಠ್ಠಲ ಜಾಮದಾರ, ಮಲ್ಲೇಶ ರಾಜನಾಳ, ಮಂಜುನಾಥ ಡಬಕೆ, ಚಂದ್ರು ಸುತಗಟ್ಟಿ, ಅಶೋಕ ಶಿಂಧೆ, ಪ್ರಶಾಂತ ಪವಾರ, ಆನಂದ ಶಿಂಧೆ, ಸಂತೋಷ ಜಾಧವ ಇತರರು ಉಪಸ್ಥಿತರಿದ್ದರು.