ಸಾರಾಂಶ
ಮ್ಯಾರಥಾನ್ ಸ್ಪರ್ಧೆಯು ಕೊಡಿಯಾಲದಿಂದ ಅನಿಕೇತನ ಶಾಲೆಯವರೆಗೆ 5 ಕಿ.ಮೀ ದೂರದವರೆಗೆ ನಡೆಯಿತು. ಮ್ಯಾರಥಾನ್ ಓಟದಲ್ಲಿ ಸಾವಿರಕ್ಕೂ ಹೆಚ್ಚು ಸ್ಪರ್ಧಾಳುಗಳು ಭಾಗವಹಿಸಿ ಬಹುಮಾನ ಗಳಿಸಿದರು. ಹೊರ ಜಿಲ್ಲೆಯಿಂದಲೂ ಕೂಡ ಸ್ಪರ್ಧಾಳುಗಳು ಪಾಲ್ಗೊಂಡಿದ್ದರು. ಈ ಸ್ಪರ್ಧೆಯಲ್ಲಿ ಬಾಲಕ ಮತ್ತು ಬಾಲಕಿಯರು ಭಾಗವಹಿಸಿದ್ದರು.
ಕನ್ನಡಪ್ರಭ ವಾರ್ತೆ ಮಂಡ್ಯ
ಮ್ಯಾರಥಾನ್ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವುದರಿಂದ ವಿದ್ಯಾರ್ಥಿಗಳ ದೈಹಿಕ ಮತ್ತು ಮಾನಸಿಕ ಸಾಮರ್ಥ್ಯ ಹೆಚ್ಚಾಗುತ್ತದೆ ಎಂದು ಅನಿಕೇತನ ಸ್ಕೂಲ್ ಆಫ್ ಎಜುಕೇಶನ್ ಸಂಸ್ಥಾಪಕ ಕಾರ್ಯದರ್ಶಿ ಡಾ.ರಾಮಲಿಂಗಯ್ಯ ಸಲಹೆ ನೀಡಿದರು.ತಾಲೂಕಿನ ಕಾಳೇನಹಳ್ಳಿ ಗ್ರಾಮದ ಅನಿಕೇತನ ಸ್ಕೂಲ್ ಆಫ್ ಎಜುಕೇಷನ್ ವತಿಯಿಂದ ಕ್ರೀಡಾ ಮತ್ತು ಸಾಂಸ್ಕೃತಿಕ ಹಬ್ಬದ ಪ್ರಯುಕ್ತ ಮ್ಯಾರಥಾನ್ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿದರು.
ಶಿಕ್ಷಣ ಮತ್ತು ಬದುಕಿನಲ್ಲಿ ಗುರಿ ತಲುಪಲು ಮಹತ್ವಾಕಾಂಕ್ಷೆಯನ್ನು ಈ ಸ್ಪರ್ಧೆ ನೀಡುತ್ತದೆ. ಕ್ರೀಡೆಯಲ್ಲಿ ಸೋಲು ಗೆಲುವಿಗಿಂತ ವಿದ್ಯಾರ್ಥಿಗಳು ಪಾಲ್ಗೊಳ್ಳುವಿಕೆ ಬಹಳ ಮುಖ್ಯ. ಇದು ಅವರಲ್ಲಿ ಆರೋಗ್ಯಕರ ಸ್ಪರ್ಧಾ ಮನೋಭಾವವನ್ನು ಸೃಷ್ಟಿಸುತ್ತದೆ ಎಂದರು.ಮ್ಯಾರಥಾನ್ ಸ್ಪರ್ಧೆಯು ಕೊಡಿಯಾಲದಿಂದ ಅನಿಕೇತನ ಶಾಲೆಯವರೆಗೆ 5 ಕಿ.ಮೀ ದೂರದವರೆಗೆ ನಡೆಯಿತು. ಮ್ಯಾರಥಾನ್ ಓಟದಲ್ಲಿ ಸಾವಿರಕ್ಕೂ ಹೆಚ್ಚು ಸ್ಪರ್ಧಾಳುಗಳು ಭಾಗವಹಿಸಿ ಬಹುಮಾನ ಗಳಿಸಿದರು. ಹೊರ ಜಿಲ್ಲೆಯಿಂದಲೂ ಕೂಡ ಸ್ಪರ್ಧಾಳುಗಳು ಪಾಲ್ಗೊಂಡಿದ್ದರು. ಈ ಸ್ಪರ್ಧೆಯಲ್ಲಿ ಬಾಲಕ ಮತ್ತು ಬಾಲಕಿಯರು ಭಾಗವಹಿಸಿದ್ದರು.
ಗೆದ್ದಂತಹ ಸ್ಪರ್ಧಿಗಳಿಗೆ ಮೊದಲನೇ ಬಹುಮಾನ 3 ಸಾವಿರ ರು. ಮತ್ತು ಟ್ರೋಫಿ, 2ನೇ ಬಹುಮಾನ 2 ಸಾವಿರ ರು. ಮತ್ತು ಟ್ರೋಫಿ, 3ನೇ ಬಹುಮಾನ 1 ಸಾವಿರ ರು. ಮತ್ತು ಟ್ರೋಫಿ, 4ನೇ ಬಹುಮಾನ 500 ರು. ಮತ್ತು ಟ್ರೋಫಿ 5ನೇ ಬಹುಮಾನ 400 ರು. ಮತ್ತು ಟ್ರೋಫಿ, 6ನೇ ಬಹುಮಾನ 300 ರು. ಮತ್ತು 7ನೇ ಬಹುಮಾನ 200 ರು. ಬಹುಮಾನ ನೀಡಿ ಗೌರವಿಸಲಾಯಿತು.ಕಾರ್ಯಕ್ರಮದಲ್ಲಿ ಉಪ ಪ್ರಾಂಶುಪಾಲರಾದ ಮಂಗಳಮ್ಮ ಮುಖ್ಯ ಶಿಕ್ಷಕಿ ತೇಜಸ್ವಿ ಶೈಕ್ಷಣಿಕ ಸಲಹೆಗಾರ ಹನುಮಂತ ಸ್ವಾಮಿ ದೈಹಿಕ ಶಿಕ್ಷಕರಾದ ಪಾರ್ಥೇಗೌಡ, ಉಷಾರಾಣಿ, ರಾಧಾ, ವಿನೋದ್ ಕುಮಾರ್, ಅಶೋಕ, ವೆಂಕಟೇಶ್ ಸಾಂಸ್ಕೃತಿಕ ಸಂಚಾಲಕರಾದ ಆಶಾ, ಶೋಭಾ, ಪುಟ್ಟೇಗೌಡ, ರಾಜು, ರಾಹುಲ್ ಭಾಗವಹಿಸಿದ್ದರು.