ಕೊಪ್ಪಮಲೆನಾಡಿನ ಎಲ್ಲಾ ಕಾರ್ಮಿಕರ ಭೂಮಿ, ವಸತಿಗಳಿಗೆ ಹಕ್ಕು ಪತ್ರ ನೀಡಬೇಕು, ವನ್ಯಜೀವಿಗಳು ಮತ್ತು ಮಾನವ ಸಂಘರ್ಷಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುಲು ಮುಂದಾಗಬೇಕು ಎಂದು ಆಗ್ರಹಿಸಿ ಕರ್ನಾಟಕ ಜನಶಕ್ತಿ ಸಂಘಟನೆ ಗುರುವಾರ ಅಗಳಗಂಡಿ ಗ್ರಾಪಂ ವ್ಯಾಪ್ತಿಯ ಗಡಿಕಲ್ ವೃತ್ತದಿಂದ ಜಯಪುರ ಬಸ್ ನಿಲ್ದಾಣದವರೆಗೂ ಕಾಲ್ನಡಿಗೆ ಜಾಥ ನಡೆಸಿ ಕೊಪ್ಪ ತಾಲೂಕು ತಹಸೀಲ್ದಾರ್, ಶೃಂಗೇರಿ ವಲಯ ಅರಣ್ಯ ಆಧಿಕಾರಿ ಮತ್ತು ಕ್ಷೇತ್ರದ ಶಾಸಕರಿಗೆ ಮನವಿ ಸಲ್ಲಿಸಿದರು.
ಕನ್ನಡಪ್ರಭ ವಾರ್ತೆ, ಕೊಪ್ಪ
ಮಲೆನಾಡಿನ ಎಲ್ಲಾ ಕಾರ್ಮಿಕರ ಭೂಮಿ, ವಸತಿಗಳಿಗೆ ಹಕ್ಕು ಪತ್ರ ನೀಡಬೇಕು, ವನ್ಯಜೀವಿಗಳು ಮತ್ತು ಮಾನವ ಸಂಘರ್ಷಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುಲು ಮುಂದಾಗಬೇಕು ಎಂದು ಆಗ್ರಹಿಸಿ ಕರ್ನಾಟಕ ಜನಶಕ್ತಿ ಸಂಘಟನೆ ಗುರುವಾರ ಅಗಳಗಂಡಿ ಗ್ರಾಪಂ ವ್ಯಾಪ್ತಿಯ ಗಡಿಕಲ್ ವೃತ್ತದಿಂದ ಜಯಪುರ ಬಸ್ ನಿಲ್ದಾಣದವರೆಗೂ ಕಾಲ್ನಡಿಗೆ ಜಾಥ ನಡೆಸಿ ಕೊಪ್ಪ ತಾಲೂಕು ತಹಸೀಲ್ದಾರ್, ಶೃಂಗೇರಿ ವಲಯ ಅರಣ್ಯ ಆಧಿಕಾರಿ ಮತ್ತು ಕ್ಷೇತ್ರದ ಶಾಸಕರಿಗೆ ಮನವಿ ಸಲ್ಲಿಸಿದರು.ಬದುಕಿಗಾಗಿ ಸಾಗುವಳಿ ಮಾಡುತ್ತಿರುವ ರೈತ ಮತ್ತು ಕಾರ್ಮಿಕರ ಜಮೀನು ಮತ್ತು ವಸತಿಗೆ ತಿಂಗಳ ಕಾಲಮಿತಿಯೊಳಗೆ ಹಕ್ಕುಪತ್ರ ನೀಡಬೇಕು. ಹಕ್ಕು ಪತ್ರ ನೀಡುವವರೆಗೆ ಸರ್ವೆ ನಿಲ್ಲಿಸಬೇಕು, ಅಕ್ರಮ ಸಕ್ರಮ ಸಮಿತಿ ಯೋಜನೆಯಡಿ ಎಸ್.ಐ.ಟಿ ಸರ್ವೆ ನಂತರ ಫಲಾನುಭವಿಗಳಿಗೆ ಜಾಗ ಬಿಟ್ಟು ಕೊಡುತ್ತೇವೆ ಎಂದು ಎಇ.ಎಫ್.ಒ ಯಾವ ಆಧಾರದಲ್ಲಿ ಹೇಳುತ್ತಾರೆ ಎಂದು ಸ್ಪಷ್ಟ ಪಡಿಸಬೇಕು ಎಂದು ಒತ್ತಾಯಿಸಿದರು.ಕಾಡು ಪ್ರಾಣಿಗಳಿಂದ ಆಗುವ ಹಾನಿಗಳಿಗೆ, ಪ್ರಾಣಹಾನಿಗಳಿಗೆ ಅರಣ್ಯ ಇಲಾಖೆ ಮತ್ತು ಸರ್ಕಾರಗಳೇ ನೇರ ಹೊಣೆಯಾಗಿವುದರಿಂದ ಇದಕ್ಕೆ ಶಾಶ್ವತ ಪರಿಹಾರ ಕಂಡು ಹಿಡಿಯಲೇ ಬೇಕೆಂದು ಮನವಿಯಲ್ಲಿ ಆಗ್ರಹಿಸಿದ್ದು ಮಲೆನಾಡಿನ ಕಾಡಿನೊಳಗೆ ಇಲಾಖೆಯವರು ಗಿಡ ನೆಡುವ ಯೋಜನೆ ಮಲೆನಾಡಿಗರ ಅರಣ್ಯದೊಂದಿಗಿನ ಹಕ್ಕುಗಳನ್ನು ಕಸಿದುಕೊಳ್ಳುವ ಹುನ್ನಾರ ಆದ್ದರಿಂದ ಸರ್ಕಾರಗಳು ಈ ರೀತಿಯ ಅವೈಜ್ಞಾನಿಕ ಯೋಜನೆಗಳನ್ನು ಕೂಡಲೆ ನಿಲ್ಲಿಸುವಂತೆ ಆಗ್ರಹಿಸಿದ್ದಾರೆ.ಮನವಿ ಸ್ವೀಕರಿಸಿ ಪ್ರತಿಭಟನಾ ನಿರತನ್ನುದ್ದೇಶಿಸಿ ಮಾತನಾಡಿದ ಶಾಸಕ ಟಿ.ಡಿ ರಾಜೇಗೌಡ ಕಾಂಗೆಸ್ ಸರ್ಕಾರ ಬೇರೆ ಸರ್ಕಾರಗಳಂತಲ್ಲ ನುಡಿದಂತೆ ನಡೆದು ಜನಪರ ಯೋಜನೆಗಳನ್ನು ನೀಡುತ್ತಿದೆ. ಉಳುವವನೆ ಭೂಮಿ ಒಡೆಯ ಯೋಜನೆ ಕಾಂಗ್ರೆಸ್ ಸರ್ಕಾರ ನೀಡಿದ ಕೊಡುಗೆ. ನ್ಯಾಯಯುತವಾದ ಬೇಡಿಕೆಗಳನ್ನು ಸರ್ಕಾರದ ಗಮನಕ್ಕೆ ತಂದು ಈಡೇರಿಸುವ ಭರವಸೆ ನೀಡಿದರು.ಅರಣ್ಯ ಸಚಿವ ಈಶ್ವರ್ ಖಂಡ್ರೆ ಪ್ರತಿಭಟನಾಗಾರರೊಂದಿಗೆ ದೂರವಾಣಿ ಮುಖಾಂತರ ಮಾತನಾಡಿ ಫೆ.೨೮ರ ಶನಿವಾರ ಬಾಳೆಹೊನ್ನೂರಿನಲ್ಲಿ ಭೇಟಿಯಾಗುವ ಭರವಸೆ ನೀಡಿದರು. ಸಾಹಿತಿ ಕಲ್ಕುಳಿ ವಿಠಲ ಹೆಗ್ಡೆ ಶೃಂಗೇರಿ, ಕರ್ನಾಟಕ ಜನಶಕ್ತಿಸಂಘಟನೆಯ ಕೆ.ಎಲ್. ಆಶೋಕ್, ರಾಧ ಹಾಗಲಗಂಚಿ, ವೆಂಕಟೇಶ್ ಹಾಗಲಗಂಚಿ, ಸರೋಜ, ಕೃಪಾ, ಸುರೇಶ್ ಗಡಿಕಲ್ ಮುಂತಾದವರಿದ್ದರು.