ಸಾರಾಂಶ
ಮಾರೇಹಳ್ಳಿ ಎಚ್.ಎಲ್.ಎನ್.ಸಿಂಹ ಅವರು 1954ರಲ್ಲಿ ಬೇಡರ ಕಣ್ಣಪ್ಪ ಚಿತ್ರದ ಕನ್ನಡಿಗರ ಕಣ್ಮಣಿ ಡಾ.ರಾಜಕುಮಾರ್ ಅವರನ್ನು ಪರಿಚಯಿಸಿ ಮುತ್ತುರಾಜ ಹೆಸರನ್ನು ಬದಲಾಯಿಸಿ ರಾಜಕುಮಾರ ಎಂದು ಮರು ನಾಮಕರಣ ಮಾಡಿ ಕನ್ನಡ ಚಿತ್ರರಂಗಕ್ಕೆ ದೊಡ್ಡ ಆಸ್ತಿಯನ್ನು ಕೊಟ್ಟರು.
ಕನ್ನಡಪ್ರಭ ವಾರ್ತೆ ಮಳವಳ್ಳಿ
ವರನಟ ಡಾ.ರಾಜ್‌ಕುಮಾರ್ ಅವರನ್ನು ಸಿನಿಮಾಕ್ಕೆ ಪರಿಚಯಿಸುವ ಜೊತೆಗೆ ಕನ್ನಡ ಸಿನಿಮಾ ರಂಗದಲ್ಲಿ ತನ್ನದೇ ಸಾಧನೆ ಮಾಡಿರುವ ತಾಲೂಕಿನ ಮಾರೇಹಳ್ಳಿ ಎಚ್.ಎಲ್.ಎನ್.ಸಿಂಹ ಹೆಸರು ಶಾಶ್ವತವಾಗಿ ಉಳಿಯುವಂತೆ ರಾಜ್ಯ ಸರ್ಕಾರ ಮುಂದಾಗಬೇಕು ಎಂದು ಡಾ.ರಾಜ್ ಕುಮಾರ್ ಕಲಾ ಸಂಘದ ಅಧ್ಯಕ್ಷ ದೊಡ್ಡಯ್ಯ ಒತ್ತಾಯಿಸಿದರು.ಪಟ್ಟಣದ ಹೊರವಲಯದ ಲಕ್ಷ್ಮಿನರಸಿಂಹಸ್ವಾಮಿ ದೇವಸ್ಥಾನದಲ್ಲಿ ದಿ.ಎಚ್.ಎಲ್.ಎನ್.ಸಿಂಹ ಅವರ ಜನ್ಮದಿನದ ಅಂಗವಾಗಿ ವಿಶೇಷ ಪೂಜೆ ಸಲ್ಲಿಸಿ ಸಾರ್ವಜನಿಕರಿಗೆ ಸಿಹಿ ವಿತರಿಸಿ ಮಾತನಾಡಿ, 1954ರಲ್ಲಿ ಬೇಡರ ಕಣ್ಣಪ್ಪ ಚಿತ್ರದ ಕನ್ನಡಿಗರ ಕಣ್ಮಣಿ ಡಾ.ರಾಜಕುಮಾರ್ ಅವರನ್ನು ಪರಿಚಯಿಸಿ ಮುತ್ತುರಾಜ ಹೆಸರನ್ನು ಬದಲಾಯಿಸಿ ರಾಜಕುಮಾರ ಎಂದು ಮರು ನಾಮಕರಣ ಮಾಡಿ ಕನ್ನಡ ಚಿತ್ರರಂಗಕ್ಕೆ ದೊಡ್ಡ ಆಸ್ತಿಯನ್ನು ಕೊಟ್ಟರು ಎಂದರು.
ಮಾರೇಹಳ್ಳಿಯ ಎಚ್.ಎಲ್.ಎನ್.ಸಿಂಹ ಅವರಿಗೆ ಭಾರತೀಯ ಚಿತ್ರರಂಗಕ್ಕೆ 1936ರಲ್ಲಿ ಅಖಂಡ ಭಾರತದಲ್ಲೇ ಪ್ರಪ್ರಥಮವಾಗಿ ಕನ್ನಡ ಸಾಮಾಜಿಕ ಚಲನಚಿತ್ರವನ್ನು ನಿರ್ದೇಶನ ಮಾಡಿರುವ ಕೀರ್ತಿ ಅವರಿಗೆ ಸಲ್ಲುತ್ತದೆ. ಕನ್ನಡ ಚಿತ್ರರಂಗಕ್ಕೆ ಹಲವು ನಟರನ್ನು ಪರಿಚಯಿಸಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಅಪಾರ ಸಾಧನೆ ಮಾಡಿರುವ ಎಚ್.ಎಲ್.ಸಿಂಹ ಅವರ ಹೆಸರನ್ನು ಪ್ರಸ್ತುತ ಚಿತ್ರರಂಗ ಮರೆತಿರುವುದು ವಿಷಾದನೀಯ ಎಂದರು.ಕಾರ್ಯಕ್ರಮದಲ್ಲಿ ಪುರಸಭೆ ಸದಸ್ಯ ಎಂ.ಎನ್.ಶಿವಸ್ವಾಮಿ, ಮಾಜಿ ಅಧ್ಯಕ್ಷ ಗಂಗರಾಜೇ ಅರಸು, ಕಸಾಪದ ತಾಲೂಕು ಘಟಕದ ಅಧ್ಯಕ್ಷ ಚೇತನ್ ಕುಮಾರ್, ಸಾಹಿತಿ ಮ.ಸಿ.ನಾರಾಯಣ, ಮುಖಂಡರಾದ ಮಾರೇಹಳ್ಳಿ ಬಸವರಾಜು, ಸೋಮು, ಶೇಷಾದ್ರಿ, ಎಂ.ಕೆ.ಶಿವಣ್ಣ, ಬಸವರಾಜು, ಮಾದೇಗೌಡ, ಜಗದೀಶ್, ಕೃಷ್ಣಪ್ಪ ಇದ್ದರು.ಚಲನಚಿತ್ರ ನಿರ್ಮಾಪಕ ಎಸ್.ಎನ್.ಸುರೇಶ್ ನಿಧನ
ಶ್ರೀರಂಗಪಟ್ಟಣ:ಪಟ್ಟಣದ ಪೇಟೆ ಬೀದಿ ನಿವಾಸಿ (ತ್ರಿಬ್ಬಲ್‌ಎಸ್ ವಾಣಿಜ್ಯೋದ್ಯಮಿ) ಹಾಗೂ ಚಲನಚಿತ್ರ ನಿರ್ಮಾಪಕ ಎಸ್.ಎನ್. ಸುರೇಶ್ (52) ಬುಧವಾರ ತಡರಾತ್ರಿ ನಿಧನರಾದರು. ಮೃತರು ತಾಯಿ, ತಮ್ಮ, ತಂಗಿ ಹಾಗೂ ಅಪಾರ ಬಂದುಗಳನ್ನು ಅಗಲಿದ್ದಾರೆ. ಕೋಮಲ್ ನಟನೆಯ ಕರೋಡ್‌ಪತಿ ಚಲನಚಿತ್ರ ನಿರ್ಮಾಪಕರಾಗಿದ್ದರು. ಮೃತರ ಅಂತ್ಯಕ್ರಿಯೆ ಪಟ್ಟಣದ ಶಂಭು ಲಿಂಗಯ್ಯನ ಕಟ್ಟೆ ರುದ್ರಭೂಮಿಯಲ್ಲಿ ಗುರುವಾರ ಸಂಜೆ ನೆರವೇರಿಸಲಾಯಿತು.