ಕನ್ನಡಪ್ರಭ ವಾರ್ತೆ ಮಳವಳ್ಳಿ

ಐತಿಹಾಸಿಕ ಪ್ರಸಿದ್ಧ ಪಟ್ಟಣದ ಹೊರವಲಯದ ಮಾರೇಹಳ್ಳಿ ಲಕ್ಷ್ಮೀನರಸಿಂಹಸ್ವಾಮಿಯ ದಿವ್ಯ ಬ್ರಹ್ಮರಥೋತ್ಸವವು ಜೂನ್ 3ರಂದು ವಿಜೃಂಬಣೆಯಿಂದ ಜರುಗಲಿದೆ. ಬ್ರಹ್ಮರಥೋತ್ಸವದ ಅಂಗವಾಗಿ ಮೇ 26 ರಿಂದ ಜೂ.7ರವರಗೆ ಜಾತ್ರಾ ಮಹೋತ್ಸವವು ವಿಧಿವಿಧಾನಗಳಿಂದ ನೆರೆವೇರಲಿದೆ.

ಮಾರೇಹಳ್ಳಿ ಲಕ್ಷ್ಮಿನರಸಿಂಹಸ್ವಾಮಿ ದೇನಸ್ಥಾನದಲ್ಲಿ ಮೇ 26ರಂದು ಉತ್ಸವವನ್ನು ಮಳವಳ್ಳಿಯಿಂದ ದೇವಸ್ಥಾನಕ್ಕೆ ತರಲಾಗುತ್ತದೆ. ಮೇ 27 ಮತ್ತು 28ರಂದು ನಿತ್ಯಕಟ್ಲೆ, ರಾತ್ರಿ ಅಂಕುರಾರ್ಪಣ, ಧ್ವಜಾರೋಹಣ ನಡೆಯಲಿದೆ. ಮೇ 29ರ ಶುಕ್ರವಾರ ನಿತ್ಯಕಟ್ಲೆ, ಮೇ 30ರಂದು ಸೌರಮಾನ ನರಸಿಂಹ ಜಯಂತಿ, ಮೇ 31ರ ಭಾನುವಾರ ಹಗಲು ಹಂಸವಾಹನೋತ್ಸವ, ರಾತ್ರಿ ಪುಷ್ಪ ಮಂಟಪೋತ್ಸವ ಜರುಗಲಿದೆ.

ಜೂ.1ರಂದು ಬೆಳಗ್ಗೆ ಶೇಷವಾಹನೋತ್ಸವ, ರಾತ್ರಿ ಪ್ರಹ್ಲಾದ ಪರಿಪಾಲನೋತ್ಸವ, ಗರುಡೋತ್ಸವ, ಜೂ.2ರಂದು ಗಜವಾಹನೋತ್ಸವ, ಮಧ್ಯಾಹ್ನ ನಿವೇದನ, ರಾತ್ರಿ ಕಲ್ಯಾಣೋತ್ಸವ, ಗಜೇಂದ್ರಮೋಕ್ಷ ಸೇವೆ, ಜೂ.3ರಂದು ಮಧ್ಯಾಹ್ನ 1.59 ರಿಂದ 2.20 ಗಂಟೆಯೊಳಗೆ ದಿವ್ಯ ಬ್ರಹ್ಮರಥೋತ್ಸವ, ಪುಷ್ಪಾ ಅಲಂಕಾರ, ಯಾತ್ರಾದಾನ, ಮಂಟಪೋತ್ಸವ ಶಾಂತೋತ್ಸವ, ಜೂ.4ರಂದು ಬೆಳಗ್ಗೆ ಹನುಮಂತ್ಯುತ್ಸವ, ಗರುಡೋತ್ಸವ, ನೈವೇದ್ಯ ಪ್ರಸಾದ, ರಾತ್ರಿ ಶಯನೋತ್ಸವ ನಡೆಯಲಿದೆ.

ಜೂ.5ರಂದು ವಸಂತೋತ್ಸವ, ತೀರ್ಥಸ್ನಾನ, ಅವರೋಹನ, ಫನಿಮಾಲೆ ಉತ್ಸವ, ಜೂ.6ರಂದು ಅಹಾಭಿಷೇಕ, ಆರಾಧನೆ, ಜೂ.7ರ ಭಾನುವಾರ ಸೊಪ್ಪಿನ ಸೇವೆ, ಅಭಿಷೇಕದ ನಂತರ ಉತ್ಸವವನ್ನು ಮಾರೇಹಳ್ಳಿಯಿಂದ ಮಳವಳ್ಳಿಗೆ ಬಿಜಯ ಮಾಡಿಸುವುದರ ಮೂಲಕ ಜಾತ್ರಾ ಮಹೋತ್ಸವ ಮುಕ್ತಾಯಗೊಳ್ಳಲಿದೆ.


ಆಂಧ್ರಪ್ರದೇಶ, ತಮಿಳುನಾಡು ಸೇರಿದಂತೆ ರಾಜ್ಯದ ನಾನಾ ಭಾಗಗಳಿಂದ ಸಾವಿರಾರು ಭಕ್ತರು ಆಗಮಿಸುತ್ತಾರೆ. ದೇವರ ಕುಲದವರು ಒಂದು ವಾರದ ಮುಂಚಿತವಾಗಿಯೇ ಕುಟುಂಬ ಸಮೇತರಾಗಿ ಆಗಮಿಸಿ ದೇವಸ್ಥಾನದಲ್ಲಿ ವಾಸ್ತವ್ಯ ಹೂಡಿ ಸುಮಾರು ಎರಡು ವಾರಗಳ ಕಾಲ ನಡೆಯಲಿರುವ ವಿವಿಧ ಪೂಜಾ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಪ್ರತಿನಿತ್ಯ ದೇವರಿಗೆ ವಿಶೇಷ ಅಲಂಕಾರ, ಅನ್ನಸಂತರ್ಪಣೆ ಸೇರಿದಂತೆ ವಿವಿಧ ಸೇವೆಗಳು ನಡೆಯಲಿವೆ.