ಸಾರಾಂಶ
ಚಿಂತಕರ ಚಾವಡಿಯ ವಿಧಾನ ಪರಿಷತ್ ಚುನಾವಣೆಯಲ್ಲಿ ವಿಚಾರವಂತರು, ಅನುಭವಿ ರಾಜಕಾರಣಿಯಾಗಿರುವ ಮರಿತಿಬ್ಬೇಗೌಡರು ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿರುವುದರಿಂದ ಎಲ್ಲಾ ಶಿಕ್ಷಕ ಬಂಧುಗಳು ತಮ್ಮ ಮೊದಲ ಪ್ರಾಶಸ್ತ್ಯದ ಮತವನ್ನು ಕೊಟ್ಟು ಗೆಲ್ಲಿಸಬೇಕು.
ಕನ್ನಡಪ್ರಭ ವಾರ್ತೆ ಮಳವಳ್ಳಿ
ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಮರಿತಿಬ್ಬೇಗೌಡರು 5ನೇ ಬಾರಿಗೆ ಗೆಲುವು ಸಾಧಿಸಲಿದ್ದಾರೆ ಎಂದು ಜಿಪಂ ಮಾಜಿ ಸದಸ್ಯ ವಿಶ್ವಾಸ್ ಭವಿಷ್ಯ ನುಡಿದರು.ತಾಲೂಕಿನ ವಿವಿಧ ಪ್ರೌಢಶಾಲಾ-ಕಾಲೇಜುಗಳಿಗೆ ಕಾಂಗ್ರೆಸ್ ಮುಖಂಡರೊಂದಿಗೆ ಮತಯಾಚಿಸಿ ಮಾತನಾಡಿ, ಚಿಂತಕರ ಚಾವಡಿಯ ವಿಧಾನ ಪರಿಷತ್ ಚುನಾವಣೆಯಲ್ಲಿ ವಿಚಾರವಂತರು, ಅನುಭವಿ ರಾಜಕಾರಣಿಯಾಗಿರುವ ಮರಿತಿಬ್ಬೇಗೌಡರು ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿರುವುದರಿಂದ ಎಲ್ಲಾ ಶಿಕ್ಷಕ ಬಂಧುಗಳು ತಮ್ಮ ಮೊದಲ ಪ್ರಾಶಸ್ತ್ಯದ ಮತವನ್ನು ಕೊಟ್ಟು ಗೆಲ್ಲಿಸಬೇಕೆಂದು ಕೋರಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಪಿ.ರಾಜು ಮಾತನಾಡಿ, ಸತತ 20 ವರ್ಷಗಳಿಂದ ಪರಿಷತ್ ಸದಸ್ಯರಾಗಿ ಅಪಾರ ರಾಜಕೀಯ ಅನುಭವ ಪಡೆದಿರುವ ಮರಿತಿಬ್ಬೇಗೌಡರು ಪರಿಷತ್‌ಗೆ ಅವಶ್ಯಕತೆ ಇದ್ದು, ಶಿಕ್ಷಕ ಮತದಾರರು ಹೆಚ್ಚಿನ ಮತಗಳನ್ನು ಕೊಟ್ಟು ತಾಲೂಕಿನ ಗೌರವವನ್ನು ಹೆಚ್ಚಿಸಬೇಕು ಎಂದು ಮನವಿ ಮಾಡಿದರು.ತಾಲೂಕಿನ ತಳಗವಾದಿ, ಚನ್ನಪಿಳ್ಳೇಕೊಪ್ಪಲು, ಹಿಟ್ಟನಹಳ್ಳಿಕೊಪ್ಪಲು, ಭೀಮನಹಳ್ಳಿ, ಚೊಟ್ಟನಹಳ್ಳಿ, ಕ್ಯಾತೇಗೌಡನದೊಡ್ಡಿ, ಕಿರುಗಾವಲು, ರಾಗಿಬೊಮ್ಮನಹಳ್ಳಿ, ಚಿಕ್ಕಮಾಳಿಗೆಕೊಪ್ಪಲು ಸೇರಿದಂತೆ ಅನೇಕ ಪ್ರೌಢಶಾಲಾ-ಕಾಲೇಜುಗಳಿಗೆ, ಮೊರಾರ್ಜಿ ವಸತಿ ಶಾಲೆಗಳಲ್ಲಿ ಮತಯಾಚನೆ ಮಾಡಿದರು.
ಈ ವೇಳೆ ಜಿಪಂ ಮಾಜಿ ಸದಸ್ಯೆ ಸುಜಾತಾ ಕೆ.ಎಂ.ಪುಟ್ಟು, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಚಿಕ್ಕಲಿಂಗಯ್ಯ, ಟಿಎಪಿಸಿಎಂಎಸ್ ನಿರ್ದೆಶಕರಾದ ಕೆ.ಜೆ.ದೇವರಾಜು, ಎಚ್.ಬಿ.ಬಸವೇಶ್, ಟಿ.ಸಿ.ಚೌಡಯ್ಯ ತಾಪಂ ಮಾಜಿ ಉಪಾಧ್ಯಕ್ಷ ಸಿ.ಮಾಧು, ಜಿ.ಪಂ ಮಾಜಿ ಅಧ್ಯಕ್ಷ ಬಿ.ಆರ್.ರಾಮಚಂದ್ರು, ಕೆಪಿಸಿಸಿ ಸದಸ್ಯರಾದ ಸಿದ್ದೇಗೌಡ, ಪುಟ್ಟಸ್ವಾಮಿ, ಬ್ಲಾಕ್ ಕಾಂಗ್ರೆಸ್ ಕಾರ್ಯಧ್ಯಕ್ಷ ಶಿವಮಾದೇಗೌಡ, ವಕೀಲ ಜಗದೀಶ್, ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ದ್ಯಾಪೇಗೌಡ, ರೋಹಿತ್ ಗೌಡ(ದೀಪು), ಮುಖಂಡರಾದ ಮುತ್ತುರಾಜ್, ದಿಲೀಪ್ ಕುಮಾರ್(ವಿಶ್ವ), ಪ್ರಸನ್ನ, ಶಿವಮೂರ್ತಿ, ಆನಂದ್ ಸೇರಿದಂತೆ ಹಲವರು ಇದ್ದರು.