ಈದ್‌ ಮಿಲಾದ್‌ ಅಂಗವಾಗಿ ಶ್ರದ್ಧಾ ಭಕ್ತಿಯ ಮೆರವಣಿಗೆ

| Published : Sep 06 2025, 01:00 AM IST

ಸಾರಾಂಶ

ಮೆರವಣಿಗೆಯು ಮಧ್ಯಾಹ್ನ ಗೌಸಿಯಾನಗರದ ಮಸೀದಿ ಮೌಲಾ ಅಲಿಯಿಂದ ಆರಂಭವಾದ ಮೆರವಣಿಗೆ

ಕನ್ನಡಪ್ರಭ ವಾರ್ತೆ ಮೈಸೂರುಪ್ರವಾದಿ ಮುಹಮ್ಮದ್‌ ಅವರ 1500ನೇ ಜನ್ಮದಿನದ ವೇಳೆ ಮರ್ಕಾಜಿ ಜುಲೂಸ್‌ ಮೆರವಣಿಗೆಯು ಶುಕ್ರವಾರ ಅದ್ಧೂರಿಯಾಗಿ ನೆರವೇರಿತು.ಈ ಮೆರವಣಿಗೆಗೆ ಮದ್ರಸಾ ಫೈಜಾನ್‌ ಮೌಲಾ ಅಲಿ ಮದ್ರೀಸ್‌, ಫೈಜಾನ್‌ ಆಲಾ ಹಜರತ್‌, ರಜಾ ಮುಸ್ತಫಾ, ಅಲ್‌ನೂರ್‌ ಮದ್ರೀಸ್‌, ಫೈಜಾನ್‌ ರಜಾ, ಫೈಜಾನ್‌ ಲಿಯಾಖತ್‌ರಜಾ, ಮೊಹಮ್ಮದ್‌ರಜಾ, ಫೈಜಾನ್‌ ಅಮೀರ್‌ ಮಿಲ್ಲತ್‌ ವಿದ್ಯಾರ್ಥಿಗಳು ಬೆಂಬಲ ನೀಡಿದರು.ಮೆರವಣಿಗೆಯು ಮಧ್ಯಾಹ್ನ ಗೌಸಿಯಾನಗರದ ಮಸೀದಿ ಮೌಲಾ ಅಲಿಯಿಂದ ಆರಂಭವಾದ ಮೆರವಣಿಗೆಯು ಅಜೀಜ್‌ ಸೇಠ್‌ ಮುಖ್ಯರಸ್ತೆ, ಶಾಂತಿನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಅಶೋಕ ರಸ್ತೆಯ ಮೀಲಾದ್‌ ಬಾಗ್‌ ತಲುಪಿತು.ಬಳಿಕ ಆಲಂ ಖುಶಾಯಿ ಮತ್ತು ಫಾತೆಹಾಖಾನಿ, ದಾರುದ್‌ಸಲಾಮ್‌ ಹಾಗೂ ದುವಾ ನೆರವೇರಿಸಲಾಗುವುದು.ಮೆರವಣಿಗೆಗೂ ಮುನ್ನ ಗೌಸಿಯಾನಗರದ ಮಸೀದಿ ಮೌಲಾ ಅಲಿ ವತಿಯಿಂತ ಅತ್ಯುತ್ತಮ ಸ್ತಬ್ಧಚಿತ್ರಕ್ಕೆ ಬಹುಮಾನ ಹಾಗೂ ನೆನಪಿನ ಪ್ರಮಾಣ ಪತ್ರ ನೀಡಲಾಯಿತು.ಈದ್‌ ಮಿಲಾದ್‌ ಅಂಗವಾಗಿ ಜಿಲ್ಲಾ ವಕ್ಫ್‌ ಬೋರ್ಡ್‌ ಸಲಹಾ ಸಮಿತಿ ಸದಸ್ಯರು ಬಡ ವಿಧವೆಯರಿಗೆ ಉಚಿತವಾಗಿ ಹೊಲಿಗೆ ಯಂತ್ರ ವಿತರಿಸಿದರು.ಸರ್‌ಖಾಜಿ ಹಜರತ್‌ ಮೌಲಾನಾ ಮೊಹಮ್ಮದ್‌ ಉಸ್ಮಾನ್‌ ಷರೀಫ್‌ ಅವರ ಅಧ್ಯಕ್ಷತೆಯಲ್ಲಿ ಮತ್ತು ದಾರುಲ್‌ ಉಲೂಮ್‌ ಸಿದ್ದಿಕಿಯಾ ಅರೇಬಿಕ್‌ಕಾಲೇಜಿನ ಖಾಜಿ ಷರಿಯತ್‌ ಹಜರತ್‌ ಮುಫ್ತಿ ಸೈಯದ್‌ ತಾಜುದ್ದೀನ್‌ ಅವರ ನೇತೃತ್ವದಲ್ಲಿ 50 ವರ್ಷ ಮೇಲ್ಪಟ್ಟ ವಿಧವೆಯರಿಗ ಹೊಲಿಗೆ ಯಂತ್ರ ವಿತರಿಸಲಾಯಿತು.ಈದ್‌ ಮಿಲಾದ್ ಮೆರವಣಿಗೆ ಅಂಗವಾಗಿ ಬಿಗಿ ಪೊಲೀಸ್‌ ಬಂದೋಬಸ್ತ್‌ ವ್ಯವಸ್ಥೆ ಮಾಡಲಾಗಿತ್ತು.