ಜೈ ಭೀಮ್ ಹಾಡು ಹಾಕಿದ್ದಕ್ಕೆ ಮರ್ಮಾಂಗಕ್ಕೆ ಹಲ್ಲೆ

| Published : Jan 06 2025, 01:01 AM IST

ಸಾರಾಂಶ

ಟಾಟಾ ಏಸ್ ವಾಹನದಲ್ಲಿ ಜೈ ಭೀಮ್ ಹಾಡು ಹಾಕಿದ್ದಕ್ಕೆ ಯುವಕನ ಮರ್ಮಾಂಗಕ್ಕೆ ಕಾಲಿನಿಂದ ಒದ್ದ ಪರಿಣಾಮ ಗಂಭೀರವಾಗಿ ಗಾಯಗೊಂಡಿರುವ ಘಟನೆ ಗುಬ್ಬಿ ತಾಲೂಕಿನ ಗಿಡದ ಮುದ್ದೇನಹಳ್ಳಿ ಗ್ರಾಮದ ಬಳಿ ನಡೆದಿದೆ.

ಕನ್ನಡಪ್ರಭ ವಾರ್ತೆ, ತುಮಕೂರು / ಗುಬ್ಬಿಟಾಟಾ ಏಸ್ ವಾಹನದಲ್ಲಿ ಜೈ ಭೀಮ್ ಹಾಡು ಹಾಕಿದ್ದಕ್ಕೆ ಯುವಕನ ಮರ್ಮಾಂಗಕ್ಕೆ ಕಾಲಿನಿಂದ ಒದ್ದ ಪರಿಣಾಮ ಗಂಭೀರವಾಗಿ ಗಾಯಗೊಂಡಿರುವ ಘಟನೆ ಗುಬ್ಬಿ ತಾಲೂಕಿನ ಗಿಡದ ಮುದ್ದೇನಹಳ್ಳಿ ಗ್ರಾಮದ ಬಳಿ ನಡೆದಿದೆ.ತುಮಕೂರು ತಾಲೂಕು ಸಿರಿವರ ಗ್ರಾಮದ ದೀಪು(19) ಹಾಗೂ ಚಾಲಕ ನರಸಿಂಹ ಮೂರ್ತಿ ಹಲ್ಲೆಗೊಳಗಾದವರು. ಟಾಟಾ ಏಸ್ ನಲ್ಲಿ ಅಂಬೇಡ್ಕರ್ ಜೈ ಭೀಮ್ ಹಾಡು ಹಾಕಿಕೊಂಡು ದೀಪು ಮತ್ತು ನರಸಿಂಹಮೂರ್ತಿ ಹೋಗುತ್ತಿದ್ದರು. ಈ ವೇಳೆ ರೈಲ್ವೆ ಪೊಲೀಸ್ ಚಂದ್ರಶೇಖರ್ ಹಾಗೂ ನರಸಿಂಹರಾಜು ಬೈಕ್ ನಲ್ಲಿ ಬಂದು ಅಡ್ಡಗಟ್ಟಿದ್ದಾರೆ.ಅಂಬೇಡ್ಕರ್ ಹಾಡು ಯಾಕೇ ಹಾಕಿದ್ದೀರಾ, ನಿಮ್ಮ ಜಾತಿ ಯಾವುದು ಎಂದು ಪ್ರಶ್ನಿಸಿ ಜಾತಿ ಕೇಳಿ, ನಿಂದನೆ ಮಾಡಿದ್ದಾರೆ. ಬಳಿಕ ಟಾಟಾ ಏಸ್ ವಾಹನದಿಂದ ಕೆಳಗೆ ಎಳೆದು ಮನಸೋಇಚ್ಚೆ ತಳಿಸಿದ್ದಾರೆ. ಘಟನೆಯಲ್ಲಿ ದೀಪು ಎಂಬ ಯುವಕ‌ನ ಮರ್ಮಾಂಗಕ್ಕೆ ಗಂಭೀರ ಗಾಯವಾಗಿದೆ. ಗುಬ್ಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.