ಸಾರಾಂಶ
ಬಸವಕಲ್ಯಾಣದಲ್ಲಿ ಶ್ರಾವಣ ಮಾಸದ ಸಮಾರೋಪ ಸಮಾರಂಭದ ನಿಮಿತ್ತ ಶಿವಾನುಭಾವ ಚಿಂತನ ಕಾರ್ಯಕ್ರಮ ಜರುಗಿತು.
ಕನ್ನಡಪ್ರಭ ವಾರ್ತೆ ಬಸವಕಲ್ಯಾಣ
ಶರಣ ಜೇಡರ ದಾಸಿಮಯ್ಯನವರ ಹಾಗೂ ದಾಸದುಗ್ಗಳೆಯವರ ದಾಂಪತ್ಯ ಜೀವನ ಮನಕುಲಕ್ಕೆ ಮಾದರಿಯಾಗಿದೆ ಎಂದರು ಅಕ್ಕಮಹಾದೇವಿ ಗವಿಯ ಶರಣೆ ಸತ್ಯಕ್ಕತಾಯಿ ನುಡಿದರು.ಶ್ರಾವಣ ಮಾಸದ ಸಮಾರೋಪ ಸಮಾರಂಭದ ನಿಮಿತ್ತ ನಡೆದ ಶಿವಾನುಭಾವ ಚಿಂತನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂದಿನ ದಾಂಪತ್ಯ ಜೀವನಗಳು ಮದುವೆಯಾದ ಮೂರು ತಿಂಗಳಲ್ಲಿ ಮುರಿದು ಬೀಳುತ್ತವೆ. ಗಂಡ ಹೆಂಡತಿಯ ಮಧ್ಯೆ ಭಿನ್ನತೆ ಮೂಡಿ ಕುಟುಂಬದಲ್ಲಿ ಅಶಾಂತಿ ವಾತಾವರಣ ಬಹುತೇಕ ಕುಟುಂಬಗಳಲ್ಲಿ ನಾವು ಕಾಣಬಹುದು ಆದರೆ ಶರಣ ಜೇಡರ ದಾಸಿಮಯ್ಯನವರ ದಾಂಪತ್ಯ ಜೀವನ ಮಧುರ ಜೀವನ ಹಾಲು ಜೇನಿನಂತೆ ಗಂಡ ಹೆಂಡತಿ ಬಾಳಿ ಬದುಕಿದರು. ಇದನ್ನು ನಾವೆಲ್ಲರು ಅನುಸರಿಸುವ ಮುಖಾಂತರ ನಮ್ಮ ಕೌಟುಂಬಿಕ ಜೀವನ ಆದರ್ಶವಾಗಿ ಇಟ್ಟುಕೊಳ್ಳಲು ಸಹಾಯವಾಗುತ್ತದೆ ಎಂದರು.
12ನೇ ಶತಮಾನದಲ್ಲಿ ಬಾಳಿ ಬೆಳಗಿದ ಅನೇಕ ಶರಣ ದಂಪತಿಗಳು ಅದರಲ್ಲಿ ವಿಶೇಷವಾಗಿ ಜೇಡರ ದಾಸಿಮಯ್ಯ ಮತ್ತು ದಾಸದುಗ್ಗಳೆ, ಹರಳಯ್ಯಾ, ಕಲ್ಯಾಣಮ್ಮಾ, ಮೂಳಗಿ ಮಾರಯ್ಯಾ, ಮಹಾದೇವಮ್ಮಾ, ಉರಲಿಂಗಪೆದ್ದಿ, ಕಾಳವೆಯವರ ಜೀವನ ಮಾರ್ಗಗಳು ಜಗತ್ತಿಗೆ ಮಾರ್ಗದರ್ಶಿಯಾಗಿವೆ ಅವರ ತತ್ವ ಸಿದ್ಧಾಂತಗಳು ನಾವೆಲ್ಲರು ತಿಳಿದು ಆಚರಿಸಬೇಕೆಂದರು.ನಿವೃತ್ತ ಶಿಕ್ಷಕಿ ಲಕ್ಷ್ಮೀಬಾಯಿ ಪಾಟೀಲ, ಸುಮಿತ್ರಾ ಡಾವಣಗಾಂವೆ, ಶಿವಕುಮಾರ ಸಿದ್ದೇಶ್ವರ, ಬಸವರಾಜ ಮಂತಾದವರು ಅತಿಥಿಗಳಾಗಿ ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಚೆನ್ನಪ್ಪ ಪ್ರತಾಪೂರೆ, ಎಸ್.ಜಿ ಹುಡೇದ, ಗಣಪತಿ ಕಾಸ್ತೆ, ಎಸ್.ಜಿ ಕರಣೆ, ಶಿವರಾಜ ನೀಲಕಂಠೆ, ನಾಗಪ್ಪ ನಿಣ್ಣೆ ಮುಂತಾದವರು ಭಾಗವಹಿಸಿದರು.