ಸಬ್‌ ರಿಜಿಸ್ಟ್ರಾರ್‌ನಲ್ಲಿ ಮದುವೆಯಾಗಿದೆ

| Published : Jan 04 2025, 12:31 AM IST

ಸಾರಾಂಶ

ಹೊಸ ವರ್ಷಾಚರಣೆ ಸಂದರ್ಭದಲ್ಲಿ ಹೋಟೆಲ್‌ ಮುಂದೆ ಪ್ರಿಯಕರನಿಗೆ ಚಾಕು ಇರಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ನ್ಯಾಯಾಂಗ ಬಂಧನಕ್ಕೆ ಒಳಗಾಗಿರುವ ಭವಾನಿ ತನಗೂ ಮನುಕುಮಾರ್‌ಗೂ ವರ್ಷದ ಹಿಂದೆಯೇ ಮದುವೆಯಾಗಿದೆ. ಸಬ್‌ ರಿಜಿಸ್ಟ್ರಾರ್‌ ಕಚೇರಿಯಲ್ಲೇ ನಾವು ಮದುವೆಯಾಗಿದ್ದೇವೆ ಎನ್ನುವ ಸತ್ಯವನ್ನು ಆರೋಪಿ ಹೊರಹಾಕಿದ್ದಾಳೆ. ಮನುಕುಮಾರ್‌ ಮತ್ತು ತನಗೂ 2023ರ ನವೆಂಬರ್‌ 1ರಂದೇ ಸಬ್‌ ರಿಜಿಸ್ಟ್ರಾರ್‌ ಕಚೇರಿಯಲ್ಲಿ ಮದುವೆಯಾಗಿದೆ ಎಂದು ಬಹಿರಂಗಗೊಳಿಸಿದ್ದಾಳೆ.

ಕನ್ನಡಪ್ರಭ ವಾರ್ತೆ ಹಾಸನ

ಹೊಸ ವರ್ಷಾಚರಣೆ ಸಂದರ್ಭದಲ್ಲಿ ಹೋಟೆಲ್‌ ಮುಂದೆ ಪ್ರಿಯಕರನಿಗೆ ಚಾಕು ಇರಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ನ್ಯಾಯಾಂಗ ಬಂಧನಕ್ಕೆ ಒಳಗಾಗಿರುವ ಭವಾನಿ ತನಗೂ ಮನುಕುಮಾರ್‌ಗೂ ವರ್ಷದ ಹಿಂದೆಯೇ ಮದುವೆಯಾಗಿದೆ. ಸಬ್‌ ರಿಜಿಸ್ಟ್ರಾರ್‌ ಕಚೇರಿಯಲ್ಲೇ ನಾವು ಮದುವೆಯಾಗಿದ್ದೇವೆ ಎನ್ನುವ ಸತ್ಯವನ್ನು ಆರೋಪಿ ಹೊರಹಾಕಿದ್ದಾಳೆ.

ಆರೋಪಿ ಭವಾನಿ ಈ ಸಂಬಂಧವಾಗಿ ಪೊಲೀಸರಿಗೆ ಕಳುಹಿಸಿರುವ ತನ್ನ ಮೊಬೈಲ್‌ ಸ್ಕ್ರೀನ್‌ ಶಾಟ್ ವೈರಲ್‌ ಆಗಿದ್ದು, ಮನುಕುಮಾರ್‌ ಮತ್ತು ತನಗೂ 2023ರ ನವೆಂಬರ್‌ 1ರಂದೇ ಸಬ್‌ ರಿಜಿಸ್ಟ್ರಾರ್‌ ಕಚೇರಿಯಲ್ಲಿ ಮದುವೆಯಾಗಿದೆ. ವಿವಾಹವನ್ನು ನೋಂದಣಿ ಕೂಡ ಮಾಡಿಸಿದ್ದೇವೆ ಎಂದು ಹೇಳಿ ವಿವಾಹ ನೋಂದಣಿಯಾಗಿರುವ ಸರ್ಟಿಫಿಕೇಟ್‌ ಕೂಡ ಬಹಿರಂಗಗೊಳಿಸಿದ್ದಾಳೆ.

ಮನುಕುಮಾರ್‌ ತನ್ನೊಂದಿಗೆ ಮದುವೆವಾದ ನಂತರವೂ ಹಲವು ಯುವತಿಯರೊಂದಿಗೆ ಸಂಪರ್ಕ ಇಟ್ಟುಕೊಂಡಿದ್ದ. ಪ್ರೀತಿಪ್ರೇಮದ ನಾಟಕ ಆಡುತ್ತಿದ್ದ. ಹೊಸ ವರ್ಷಾಚರಣೆ ವೇಳೆಯೂ ಹೋಟೆಲ್‌ಗೆ ಯುವತಿಯೊಬ್ಬಳೊಂದಿಗೆ ಹೋಗಿದ್ದ. ಈ ವಿಚಾರ ತಿಳಿದೇ ನಾನು ಅಲ್ಲಿಗೆ ಹೋಗಿ ಜಗಳ ಮಾಡಿದ್ದು, ತನಗೆ ನ್ಯಾಯ ಕೊಡಿಸುವಂತೆ ಭವಾನಿ ಮನವಿ ಮಾಡಿದ್ದಾಳೆ.

===============

3ಎಚ್ಎಸ್ಎನ್23 : ಚಾಕು ಇರಿದ ಆರೋಪಿ ಭವಾನಿ.