ಸಾರಾಂಶ
ಕನ್ನಡಪ್ರಭ ವಾರ್ತೆ, ತುಮಕೂರುಮಗಳ ಮೊಬೈಲ್ ನಂ ಕೊಟ್ಟು ಫೋನ್ ಪೇ ಮೂಲಕ ಹಣ ಹಾಕಿಸಿದ ತಪ್ಪಿಗೆ ಮಗಳನ್ನೇ ಕಳೆದುಕೊಂಡ ತಂದೆಯ ಮನಕಲಕುವ ಘಟನೆ ಜಿಲ್ಲೆಯ ಗುಬ್ಬಿ ತಾಲೂಕಿನ ಗ್ಯಾರಹಳ್ಳಿಯಲ್ಲಿ ನಡೆದಿದೆ.ಫೋನ್ ಪೇ ಮೂಲಕ ಹಣ ಹಾಕುತ್ತಿದ್ದ ವಿವಾಹಿತನ ಕಿರುಕುಳಕ್ಕೆ ಬೇಸತ್ತು ಭಾವನಾ (22) ಎಂಬ ಯುವತಿ ನೆಲಮಂಗಲದ ತನ್ನ ಚಿಕ್ಕಮ್ಮನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.ಭಾವನಾ ಮೈಸೂರಿನಲ್ಲಿ ನರ್ಸಿಂಗ್ ಓದುತ್ತಿದ್ದಳು. ಮಗಳ ಓದಿನ ಖರ್ಚಿಗೆ ಗ್ರಾಮದ ನವೀನ್ ಮೂಲಕ ಭಾವನಾಳ ತಂದೆ ಫೋನ್ ಪೇ ಮೂಲ ಹಣ ಕಳುಹಿಸುತ್ತಿದ್ದರು. ಮೊಬೈಲ್ ನಂಬರ್ ದುರ್ಬಳಕೆ ಮಾಡಿಕೊಂಡ ನವೀನ್ ಪ್ರೀತಿಸುವಂತೆ ಭಾವನಾಗೆ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಈಗಾಗಲೇ ಮದುವೆಯಾಗಿ ಮಕ್ಕಳನ್ನು ಹೊಂದಿರುವ ನವೀನನ ಪ್ರೀತಿಗೆ ಭಾವನಾ ವಿರೋಧ ವ್ಯಕ್ತಪಡಿಸಿದ್ದಳು. ಆದರೆ ನನ್ನನ್ನು ಪ್ರೀತಿಸದಿದ್ದರೆ ರೈಲಿಗೆ ಸಿಕ್ಕಿ ಸಾಯುವುದಾಗಿ ನವೀನ ಬೆದರಿಕೆ ಹಾಕಿದ್ದ. ಅಲ್ಲದೇ ರೈಲ್ವೆ ಹಳಿ ಮೇಲೆ ನಿಂತು ಪೋಟೊ ತೆಗೆದು ಹಾಕಿ ಬ್ಲಾಕ್ ಮೇಲ್ ಮಾಡುತ್ತಿದ್ದ. ನವೀನನ ಕಿರುಕುಳದಿಂದ ಬೇಸತ್ತಿದ್ದ ಭಾವನಾ ಕಳೆದ 15 ದಿನಗಳ ಹಿಂದೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಳು. ಆದರೆ ಹೇಗೋ ಬದುಕುಳಿದಿದ್ದಳು. ಈ ಘಟನೆ ಬಳಿಕ ನವೀನ್ ಮೇಲೆ ಕ್ರಮ ಕೈಗೊಳ್ಳಿ ಅಂತ ಚೇಳೂರು ಪೊಲೀಸ್ ಠಾಣೆಗೆ ಭಾವನಾ ತಂದೆ ದೂರು ನೀಡಿದ್ದರು. ಠಾಣೆಗೆ ನವೀನನ್ನು ಕರೆಸಿ ಪೊಲೀಸರು ಬುದ್ದಿ ಹೇಳಿ ಮುಚ್ಚಳಿಕೆ ಪತ್ರ ಬರೆಸಿಕೊಂಡು ಕಳುಹಿಸಿದ್ದರು.ಆದರೆ ನೆಲಮಂಗಲದಲ್ಲಿರುವ ಚಿಕ್ಮಮ್ಮನ ಮನೆಗೆ ಹೋಗಿದ್ದ ಭಾವನಾ ಅಲ್ಲಿಯೇ ನೇಣು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಳು. ಕೂಡಲೇ ಶವವನ್ನು ಗ್ಯಾರಹಳ್ಳಿಗೆ ತಂದ ಪೋಷಕರು ವಿವಾಹಿತ ನವೀನ್ ಮನೆ ಮುಂದೆ ಇಟ್ಟು ಪ್ರತಿಭಟನೆ ನಡೆಸಲು ಮುಂದಾಗಿದ್ದರು. ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ನೆಲಮಂಗಲದಲ್ಲಿ ದೂರು ದಾಖಲಿಸುವಂತೆ ಸೂಚಿಸಿದ್ದರು. ಸದ್ಯ ವಿವಾಹಿತ ನವೀನ್ ತಲೆ ಮರೆಸಿಕೊಂಡಿದ್ದಾನೆ.