ಸಾರಾಂಶ
ಭಟ್ಕಳ: ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಅಭಿಯೋಜನಾ ಇಲಾಖೆ, ನ್ಯಾಯಾಲಯದ ಸಿಬ್ಬಂದಿ ವತಿಯಿಂದ ಹುತಾತ್ಮರ ದಿನ ಆಚರಿಸಲಾಯಿತು.
ವಕೀಲರ ಸಂಘದ ಸಭಾಂಗಣದಲ್ಲಿ ಹುತಾತ್ಮರ ದಿನಾಚರಣೆಯ ಕುರಿತು ಹಿರಿಯ ಶ್ರೇಣಿಯ ಸಿವಿಲ್ ಹಾಗೂ ಜೆ.ಎಂ.ಎಫ್.ಸಿ. ನ್ಯಾಯಾಧೀಶ ಕಾಂತ ಕುರಣಿ ಮಾತನಾಡಿದರು.ಬಳಿಕ ವಕೀಲರು, ನ್ಯಾಯಾಲಯದ ಸಿಬ್ಬಂದಿ ಎರಡು ನಿಮಿಷಗಳ ಮೌನಾಚರಣೆ ಮಾಡಿದರು.ಈ ಸಂದರ್ಭದಲ್ಲಿ ಪ್ರಥಮ ದರ್ಜೆ ನ್ಯಾಯಾಲಯದ ನ್ಯಾಯಾಧೀಶೆ ದೀಪಾ ಅರಳಗುಂಡಿ, ಹೆಚ್ಚುವರಿ ನ್ಯಾಯಾಲಯದ ನ್ಯಾಯಾಧೀಶೆ ಧನವತಿ, ಸಹಾಯಕ ಸರಕಾರಿ ಅಭಿಯೋಜಕರಾದ ವಿವೇಕ ನಾಯ್ಕ, ಶೇಖರ ಹರಿಕಾಂತ, ವಕೀಲರಾದ ವಿ.ಎಫ್. ಗೋಮ್ಸ್, ಎಸ್.ಜೆ. ನಾಯ್ಕ, ನಾರಾಯಣ ಯಾಜಿ, ಮಹೇಶ ಆರ್. ನಾಯ್ಕ, ಆರ್.ಜಿ. ನಾಯ್ಕ, ವಿ.ಆರ್. ಸರಾಫ್, ಗಣೇಶ ದೇವಾಡಿಗ, ರವೀಂದ್ರ, ನಾರಾಯಣ ನಾಯ್ಕ, ಗಣೇಶ ಮುರ್ಡೇಶ್ವರ, ನ್ಯಾಯಾಲಯದ ಸಿಬ್ಬಂದಿ, ಪುರಸಭೆಯ ಕಾರ್ಮಿಕರು ಮುಂತಾದವರಿದ್ದರು.
5ರಿಂದ ಕರಾವಳಿ ಸಮುದ್ರ ಉತ್ಸವಕಾರವಾರ: ನಗರದ ರವೀಂದ್ರನಾಥ ಟಾಗೋರ ಕಡಲತೀರದಲ್ಲಿ ಫೆ. 5ರಿಂದ 9ರ ವರೆಗೆ ಕರಾವಳಿ ಸಮುದ್ರ ಉತ್ಸವ ಸಂಘಟಿಸಲಾಗಿದೆ ಎಂದು ವಿಧಾನಪರಿಷತ್ ಸದಸ್ಯ ಗಣಪತಿ ಉಳ್ವೇಕರ್ ತಿಳಿಸಿದರು.ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಸಚಿವ ಮಂಕಾಳು ವೈದ್ಯ ಚಾಲನೆ ನೀಡುವರು. ಮುಖ್ಯ ಅತಿಥಿಗಳಾಗಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಶಾಸಕ ಸತೀಶ ಸೈಲ್, ಮಾಜಿ ಸಚಿವ ಆನಂದ ಅಸ್ನೋಟಿಕರ, ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯಾ ಕೆ., ಜಿಲ್ಲಾ ಪೊಲೀಸ್ ವರಿಷ್ಠ ನಾರಾಯಣ ಎಂ., ಕೆಎಫ್‌ಡಿಸಿ ವ್ಯವಸ್ಥಾಪಕ ನಿರ್ದೇಶಕ ಕೆ. ದಿನೇಶ, ನಗರಸಭೆ ಅಧ್ಯಕ್ಷ ರವಿರಾಜ ಅಂಕೋಲೇಕರ ಮೊದಲಾದವರು ಉಪಸ್ಥಿತರಿರಲಿದ್ದಾರೆ ಎಂದರು.
ಐದು ದಿನಗಳ ಉತ್ಸವದಲ್ಲಿ ಸ್ಥಳೀಯ ಕಲಾವಿದರು ಹಾಗೂ ಸ್ಯಾಂಡಲ್‌ವುಡ್, ಬಾಲಿವುಡ್ ಗಾಯಕರು, ಗಾಯಕಿಯರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಲಿದ್ದಾರೆ. ಉತ್ಸವದ ಕೊನೆಯ ದಿನ ಸ್ಥಳೀಯ ಮೀನುಗಾರರಿಗೆ ಕಡಲ ತೀರದಲ್ಲಿ ದೋಣಿ ಸ್ಪರ್ಧೆ, ಈಜು ಸ್ಪರ್ಧೆ ಆಯೋಜಿಸಲಾಗುತ್ತಿದೆ. ಅಮ್ಯೂಸ್ಮೆಂಟ್ ಪಾರ್ಕ್ ಹಾಗೂ ವಿವಿಧ ಮಳಿಗೆಗಳೂ ಇರಲಿವೆ ಎಂದು ಮಾಹಿತಿ ನೀಡಿದರು.ಪರ್ಸೈನ್ ಬೋಟ್ ಯುನಿಯನ್ ಅಧ್ಯಕ್ಷ ಪ್ರಶಾಂತ ತಾಂಡೇಲ್, ಗುರುನಾಥ ಉಳ್ವೇಕರ್, ಗಿರೀಶ್ ರಾವ್, ಗೌರೀಶ ಉಳ್ವೇಕರ್, ಸಂಪತ್ ಹರಿಕಂತ್ರ ಮೊದಲಾದವರು ಇದ್ದರು.