ಸಾರಾಂಶ
ಲೋಕಾಪುರ ಪಟ್ಟಣದಲ್ಲಿ ಮಾರುತೇಶ್ವರ ನೀರೋಕುಳಿ ಸೋಮವಾರ ವಿಜೃಂಭಣೆಯಿಂದ ನೆರವೇರಿತು.
ಕನ್ನಡಪ್ರಭ ವಾರ್ತೆ ಲೋಕಾಪುರ
ಪಟ್ಟಣದಲ್ಲಿ ಮಾರುತೇಶ್ವರ ನೀರೋಕುಳಿ ಸೋಮವಾರ ವಿಜೃಂಭಣೆಯಿಂದ ನೆರವೇರಿತು. ಬೆಳಗ್ಗೆ ಹನುಮಂತನ ದೇವಸ್ಥಾನದಲ್ಲಿ ಉತ್ಸವ, ಪೂಜೆ, ಮಹಾಮಂಗಳಾರತಿ ಮುಗಿಸಿ ಪ್ರಸಾದ ಸ್ವೀಕರಿಸಿದ ನಂತರ ಗಂಡಸರು ಅರಿಶಿನ, ಕುಂಕುಮ ಸ್ವಲ್ಪ ಸುಣ್ಣ ನೀರಿಗೆ ಬೆರೆಸಿ ಬಣ್ಣದ ನೀರನ್ನು ಸಂತೋಷದಿಂದ ಮೈಮೇಲೆ ಹಾಕಿಕೊಂಡು ಒಬ್ಬರಿಂದ ಒಬ್ಬರು ನೀರನ್ನು ಎರಚಿಕೊಂಡು ಚಿಣ್ಣರು ಹಾಗೂ ದೊಡ್ಡವರು ಸಂಭ್ರಮಪಟ್ಟರು.ದಾರಿಯುದ್ದಕ್ಕೂ ಹನುಮಂತನ ಪಲ್ಲಕ್ಕಿ ಸೇವೆ, ಭಜನೆ, ಕೀರ್ತನೆಗಳನ್ನು ಹೇಳಿಕೊಂಡು ಉತ್ಸವ ಅದ್ಧೂರಿಯಾಗಿ ಆಚರಿಸಿದರು. ಶಿವಲಿಂಗಪ್ಪ ಸಣ್ಣಶಿವಣ್ಣನವರ, ಸದಾಶಿವ ನಾವ್ಹಿ, ಸಂಗಪ್ಪ ಪರಣ್ಣವರ, ಶಂಕರ ತೇಲಿ, ಶಿವಾನಂದ ತೇಲಿ, ಸದಾಶಿವ ಗುರಾಣಿ, ನಾಗಪ್ಪ ಗುರಾಣಿ, ರಂಗಪ್ಪ ಗಂಗೋಳ, ವಿಠ್ಠಲ ಗುರಾಣಿ, ಪ್ರಭು ಬೋಳಿಶೆಟ್ಟಿ, ಅಡಿವೆಯ್ಯ ಮಲಾಬಾದಿಮಠ, ಬಸವರಾಜ ಹವಳಖೋಡ, ಸಿದ್ದಪ್ಪ ಕಡಕಭಾಂವಿ, ಶಾಂತೇಶ ಬೋಳಿಶೆಟ್ಟಿ, ಪ್ರಶಾಂತ ಹೂಗಾರ, ಲೋಕಣ್ಣ ಹೂಗಾರ, ಮಹಾದೇವ ಹೂಗಾರ, ವೆಂಕಣ್ಣ ಹೂಗಾರ, ಹಣಮಂತ ಹೂಗಾರ ಇತರರು ಇದ್ದರು.