ಸಾರಾಂಶ
ಸ್ಥಳೀಯ ಮೇರಿ ಮಾತೆಯ ದೇವಾಲಯದಲ್ಲಿ ಮೇರಿ ಮಾತೆಯ ದಿನಾಚರಣೆಯನ್ನು ಆಚರಿಸಲಾಯಿತು.
ಕನ್ನಡಪ್ರಭ ವಾರ್ತೆ ನಾಪೋಕ್ಲು
ಸ್ಥಳೀಯ ಮೇರಿ ಮಾತೆಯ ದೇವಾಲಯದಲ್ಲಿ ಮೇರಿ ಮಾತೆಯ ದಿನಾಚರಣೆಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.ಹಬ್ಬದ ಪೂರ್ವ ಸಿದ್ಧತೆಯಲ್ಲಿ ಮಾತೆಗೆ ಒಂಬತ್ತು ದಿನದಿಂದ ನೋವೇನಾ ಪ್ರಾರ್ಥನೆ ಸಲ್ಲಿಸಿ ಕೊನೆಯ ದಿನದಂದು ಮೇರಿಮಾತೆಯನ್ನು ಪ್ರತಿಷ್ಠಾಪಿಸಿ ಜಪಸರ ಮತ್ತು ನೋವೇನಾ ಪ್ರಾರ್ಥನೆ, ಬಲಿ ಪೂಜೆಯನ್ನು ನೆರವೇರಿಸಲಾಯಿತು, ಮಾತೆಯ ಹಾಡಿನೊಂದಿಗೆ ಕ್ರೈಸ್ತ ಬಾಂಧವರು ಪುಷ್ಪಾರ್ಚನೆಯೊಂದಿಗೆ ಹಾಡಿ ಸಂಭ್ರಮಿಸಿದರು. ಈಸಂದರ್ಭ ಧರ್ಮ ಗುರುಗಳಾದ ಜ್ಞಾನ ಪ್ರಕಾಶ್ ಮಾತನಾಡಿ ಮೇರಿಮಾತೆಯ ಆದರ್ಶಗಳನ್ನು ಪಾಲಿಸಿ ಬೇರೆಯವರ ಭಾವನೆಗಳನ್ನು ಅರ್ಥಮಾಡಿಕೊಳ್ಳಬೇಕು, ದೇವರನ್ನು ಎಲ್ಲಕ್ಕಿಂತ ಹೆಚ್ಚಾಗಿ ಪ್ರೀತಿಸಿ ಎಂದ ಅವರು ವೃದ್ಧಾಪಿ ತಂದೆ ತಾಯಿಗಳ ಸೇವೆ ಮಾಡುವುದರೊಂದಿಗೆ ತನ್ನ ಮಕ್ಕಳನ್ನು ವಿಶ್ವಾಸದಲ್ಲಿ ಬೆಳೆಸಿ ಉತ್ತಮ ನಾಗರಿಕರನ್ನಾಗಿ ಮಾಡಬೇಕು. ಪ್ರತಿಯೊಬ್ಬರು ಸುಸಂಸ್ಕೃತ ಮನೋಭಾವ ದೊಂದಿಗೆ ಉತ್ತಮ ಗುರಿಯನ್ನು ಬೆಳೆಸಿಕೊಳ್ಳಬೇಕು ಎಂದು ಶುಭ ಸಂದೇಶವನ್ನು ಸಾರಿ ಹಬ್ಬಕ್ಕೆ ಶುಭ ಹಾರೈಸಿದರು.
ಈ ಸಂದರ್ಭ ಹೆಚ್ಚಿನ ಸಂಖ್ಯೆಯಲ್ಲಿ ಕ್ರೈಸ್ತ ಬಾಂಧವರು, ಪಾಲನಾ ಸಮಿತಿಯ ಸದಸ್ಯರು, ಯುವಕ ಸಂಘದ ಸದಸ್ಯರು ಭಾಗವಹಿಸಿದ್ದರು.;Resize=(128,128))
;Resize=(128,128))
;Resize=(128,128))
;Resize=(128,128))