ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವಾಲಯ ಮುಂಭಾಗದ ಆವರಣದಲ್ಲಿ ಆರ್ಎಸ್ಎಸ್ನ ಗ್ರಾಮವಿಕಾಸ ಯೋಜನೆ ವತಿಯಿಂದ ಶುಕ್ರವಾರ ಸಂಜೆ ಆಯೋಜಿಸಿದ್ದ ಸಾಮೂಹಿಕ ದೀಪಪೂಜನ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತು. ಸಂಸ್ಕೃತಿಯ ಪಾಲನೆ ಜತೆಗೆ ಪೂರ್ವಿಕರ ಆಚರಣೆಯಲ್ಲಿ ಭಾಗಿಯಾಗಿದ್ದ ನೂರಾರು ಮಹಿಳೆಯರು ಬೆಳಕು ಎಂದರೆ ಜ್ಞಾನ, ದಿವ್ಯ ಬೆಳಕಿನ ಮೂಲಕ ಅಜ್ಞಾನವನ್ನು ಕಳೆದು ಸುಜ್ಞಾನದ ಕಡೆಗೆ ನಡೆವುದೇ ನಮ್ಮೆಲ್ಲರ ಜೀವನದ ಗುರಿ ಎಂಬ ಸಂಕಲ್ಪದೊಂದಿಗೆ ಭಾಗವಹಿಸಿ, ಜ್ಯೋತಿ ಬೆಳಗಿಸುವ ಮೂಲಕ ಕತ್ತಲನ್ನು ದೂರಗೊಳಿಸಿ, ಸದ್ಭಾವನೆಯ ಪ್ರಖರ ಬೆಳಕನ್ನು ಪ್ರಸರಿಸಿ, ಪುನೀತರಾದರು.
ಕನ್ನಡಪ್ರಭ ವಾರ್ತೆ ಹೊಳೆನರಸೀಪುರ
ಪಟ್ಟಣದ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವಾಲಯ ಮುಂಭಾಗದ ಆವರಣದಲ್ಲಿ ಆರ್ಎಸ್ಎಸ್ನ ಗ್ರಾಮವಿಕಾಸ ಯೋಜನೆ ವತಿಯಿಂದ ಶುಕ್ರವಾರ ಸಂಜೆ ಆಯೋಜಿಸಿದ್ದ ಸಾಮೂಹಿಕ ದೀಪಪೂಜನ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತು. ಸಂಸ್ಕೃತಿಯ ಪಾಲನೆ ಜತೆಗೆ ಪೂರ್ವಿಕರ ಆಚರಣೆಯಲ್ಲಿ ಭಾಗಿಯಾಗಿದ್ದ ನೂರಾರು ಮಹಿಳೆಯರು ಬೆಳಕು ಎಂದರೆ ಜ್ಞಾನ, ದಿವ್ಯ ಬೆಳಕಿನ ಮೂಲಕ ಅಜ್ಞಾನವನ್ನು ಕಳೆದು ಸುಜ್ಞಾನದ ಕಡೆಗೆ ನಡೆವುದೇ ನಮ್ಮೆಲ್ಲರ ಜೀವನದ ಗುರಿ ಎಂಬ ಸಂಕಲ್ಪದೊಂದಿಗೆ ಭಾಗವಹಿಸಿ, ಜ್ಯೋತಿ ಬೆಳಗಿಸುವ ಮೂಲಕ ಕತ್ತಲನ್ನು ದೂರಗೊಳಿಸಿ, ಸದ್ಭಾವನೆಯ ಪ್ರಖರ ಬೆಳಕನ್ನು ಪ್ರಸರಿಸಿ, ಪುನೀತರಾದರು.