ಸಾಮೂಹಿಕ ವಿವಾಹ ಕಾರ್ಯ ಸರ್ವಶ್ರೇಷ್ಠವಾದದ್ದು: ನವಲಕಲ್ ಶ್ರೀ

| Published : Apr 08 2024, 01:02 AM IST

ಸಾಮೂಹಿಕ ವಿವಾಹ ಕಾರ್ಯ ಸರ್ವಶ್ರೇಷ್ಠವಾದದ್ದು: ನವಲಕಲ್ ಶ್ರೀ
Share this Article
  • FB
  • TW
  • Linkdin
  • Email

ಸಾರಾಂಶ

ಸಿರವಾರ ತಾಲೂಕಿನ ಬಲ್ಲಟಗಿಯ ಲಿಂಗೈಕ್ಯ ಬಸವಲಿಂಗಯ್ಯ ತಾತನವರ 15ನೇ ಪುಣ್ಯಸ್ಮರಣೆಯ ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ನವಲಕಲ್ ಬೃಹನ್ಮಠದ ಅಭನವಶ್ರೀ ಸೋಮನಾಥ ಶಿವಾಚಾರ್ಯ ಸ್ವಾಮೀಜಿ ಉದ್ಘಾಟಿಸಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಸಿರವಾರ

ಇಂದಿನ ಬರಗಾಲದ ದಿನಗಳಲ್ಲಿ ಬಡವನ ಕುಟುಂಬದ ಹೊರೆ ಕಡಿಮೆ ಮಾಡಲು ಶರಣರ ಸನ್ನಿಧಿಯಲ್ಲಿ ನಡೆಯುವ ಸಾಮೂಹಿಕ ವಿವಾಹ ಕಾರ್ಯಕ್ರಮಗಳು ಸರ್ವ ಶ್ರೇಷ್ಠವಾಗಿದ್ದು ಎಂದು ನವಲಕಲ್ ಬೃಹನ್ಮಠದ ಅಭಿನವಶ್ರೀ ಸೋಮನಾಥ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ತಾಲೂಕಿನ ಬಲ್ಲಟಗಿಯ ಲಿಂಗೈಕ್ಯ ಬಸವಲಿಂಗಯ್ಯ ತಾತನವರ 15ನೇ ಪುಣ್ಯಸ್ಮರಣೆಯ ಜಾತ್ರಾ ಮಹೋತ್ಸವದ ಅಂಗವಾಗಿ ಭಾನುವಾರ ನಡೆದ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಾಮೂಹಿಕ ವಿವಾಹ ಕಾರ್ಯಕ್ರಮವು ಬಡವರ ವಿವಾಹ ಕಾರ್ಯಕ್ರಮವಲ್ಲ. ಅದು ಹತ್ತಾರು ಮಹನಿಯರ ಸಮ್ಮುಖದಲ್ಲಿ ನಡೆಯುವ ಸರ್ವಶ್ರೇಷ್ಠ ಕಾರ್ಯ, ಇಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುವ ನವ ದಂಪತಿ ಕುಟುಂಬದೊಂದಿಗೆ ಸಮೃದ್ಧಿ ದಾಂಪತ್ಯ ಜೀವನ ನಡೆಸಿ ಇಂತಹ ಕಾರ್ಯಗಳನ್ನು ಶ್ಲಾಘಿಸುವ ರೀತಿಯಲ್ಲಿ ನಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ನೀಲಗಲ್ ಬೃಹನ್ಮಠದ ಡಾ.ಪಂಚಾಕ್ಷರಿ ಶಿವಾಚಾರ್ಯ ಸ್ವಾಮೀಜಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದರು. ಸಾಮೂಹಿಕ ವಿವಾಹದಲ್ಲಿ 17 ಜೋಡಿಗಳು ನವ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಜಾತ್ರಾ ಮಹೋತ್ಸವ ಅಂಗವಾಗಿ ಭಾನುವಾರ ಬೆಳಗ್ಗೆ ಲಿಂಗಕ್ಯರ ಕತೃ ಗದ್ದುಗೆಗೆ ರುದ್ರಾಭಿಷೇಕ ಸೇರಿದಂತೆ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆದವು.ಕರೆಗುಡ್ಡದ ಮಹಾಂತೇಶ್ವರ ಮಠದ ಮಹಾಂತಲಿಂಗ ಶಿವಾಚಾರ್ಯರು, ಬಲ್ಲಟಗಿಯ ಬಸವರಾಜಯ್ಯ ಸ್ವಾಮಿ, ಗುರುಬಸಯ್ಯಸ್ವಾಮಿ, ಗಫರ್ ಸಾಬ ತಾತ, ಡಾ.ಟಿ.ಶರಣಪ್ಪ, ಟಿ.ಮಲ್ಲಿಕಾರ್ಜುನ, ಶಿವರಾಜ ನಾಯಕ ವಕೀಲ, ಅರುಣಕುಮಾರ ನಾಯಕ, ಬಸಯ್ಯ ಗುಡದಿನ್ನಿ, ಸೇರಿದಂತೆ ಬಲ್ಲಟಗಿ ಸೇರಿದಂತೆ ಸುತ್ತಲಿನ ಗ್ರಾಮಗಳ ಭಕ್ತರು ಪಾಲ್ಗೊಂಡಿದ್ದರು.