ಪ್ರಮುಖರಾದ ಬಶೀರ್, ಶಫಿವುಲ್ಲಾ, ಅಕ್ಬರ್, ಅಬ್ದುಲ್ ಖಾಲಕ್, ಪುರಸಭೆ ಮಾಜಿ ಅಧ್ಯಕ್ಷ ಅಯೂಬ್ ಪಾಷ, ಸದಸ್ಯರಾದ ನೂರುಲ್ಲಾ, ಮೆಹಬೂಬ್ ಪಾಷ, ಮುಖಂಡರಾದ ಅಜೀಜ್ ಪಾಷ, ಜಮ್ ಜಮ್, ಸೈಯ್ಯದ್ ತನ್ವೀರ್ ಪಾಷ ಪಾಲ್ಗೊಂಡಿದ್ದರು.

ಕನ್ನಡಪ್ರಭ ವಾರ್ತೆ ಮಳವಳ್ಳಿ

ಪಟ್ಟಣದ ಮುಸ್ಲಿಮರು ಈದ್ಗಾ ಮೈದಾನದಲ್ಲಿ ರಂಜಾನ್ ಪ್ರಯುಕ್ತ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಈದ್ ಉಲ್ ಫಿತರ್ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.

ಶನಿವಾರ ಬೆಳಗ್ಗೆ ಪಟ್ಟಣದ ಪೇಟೆ ಮಸೀದಿ ಹಾಗೂ ಕೋಟೆ ಮಸೀದಿಯಿಂದ ಸಾವಿರಾರು ಸಂಖ್ಯೆಯಲ್ಲಿ ಸಾಮೂಹಿಕ ಮೆರವಣಿಗೆಯಲ್ಲಿ ಸಾಗಿದ ಮುಸ್ಲಿಮರು ಅಲ್ಲಾಹು ಅಕ್ಬರ್ ಘೋಷಣೆಗಳನ್ನು ಕೂಗುತ್ತಾ ಸಿದ್ಧಾರ್ಥ ಶಾಲೆ ಪಕ್ಕದ ಈದ್ಗಾ ಮೈದಾನದಲ್ಲಿ ಸೇರಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ಮುಸ್ಲಿಂ ಸಮುದಾಯದ ಧರ್ಮ ಗುರುಗಳು ರಂಜಾನ್ ಹಬ್ಬದ ಶುಭ ಸಂದೇಶ ಸಾರಿದರು. ಪ್ರಾರ್ಥನೆ ನಂತರ ಪರಸ್ಪರ ರಂಜಾನ್ ಶುಭಾಶಯ ಕೋರಿದರು. ರಂಜಾನ್ ಅಂಗವಾಗಿ ಪಟ್ಟಣದ ಸಿಪಿಐ ಎಸ್.ಜಯಾನಂದ್, ಗ್ರಾಮಾಂತರ ಸಿಪಿಐ ಬಸವರಾಜು ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

ಪ್ರಮುಖರಾದ ಬಶೀರ್, ಶಫಿವುಲ್ಲಾ, ಅಕ್ಬರ್, ಅಬ್ದುಲ್ ಖಾಲಕ್, ಪುರಸಭೆ ಮಾಜಿ ಅಧ್ಯಕ್ಷ ಅಯೂಬ್ ಪಾಷ, ಸದಸ್ಯರಾದ ನೂರುಲ್ಲಾ, ಮೆಹಬೂಬ್ ಪಾಷ, ಮುಖಂಡರಾದ ಅಜೀಜ್ ಪಾಷ, ಜಮ್ ಜಮ್, ಸೈಯ್ಯದ್ ತನ್ವೀರ್ ಪಾಷ ಪಾಲ್ಗೊಂಡಿದ್ದರು.

ಕಿರುಗಾವಲಿನಲ್ಲೂ ಸಹ ಮುಸ್ಲಿಮರು ಗ್ರಾಮದ ಹೊರವಲಯದ ಈದ್ಗಾ ಮೈದಾನದಲ್ಲಿ ರಂಜಾನ್ ಪ್ರಯುಕ್ತ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ರಂಜಾನ್ ಶುಭಾಶಯ ಕೋರಿದರು.