ದೇಶದ ಸುರಕ್ಷತೆಗೆ ಗಂಭೀರ ಸವಾಲಾಗಿರುವ ಅಕ್ರಮ ಬಾಂಗ್ಲಾ ವಲಸಿಗರನ್ನು ದೇಶದಿಂದ ಹೊರಗಟ್ಟುವ ಉದ್ದೇಶದಿಂದ ‘ಕೊಡಗು ಸುರಕ್ಷಾ ಆಂದೋಲನ ಸಮಿತಿ’ ನೇತೃತ್ವದಲ್ಲಿ ಕೊಡಗಿನಾದ್ಯಂತ ಕೈಗೊಳ್ಳಲಾಗಿರುವ 12 ದಿನಗಳ ಜನಜಾಗೃತಿ ವಾಹನ ಜಾಥಾವು ಬುಧವಾರ ನಾಪೋಕ್ಲು ಬಸ್ ನಿಲ್ದಾಣಕ್ಕೆ ಆಗಮಿಸಿ ಬೃಹತ್ ಜನಜಾಗೃತಿ ಸಭೆ ಆಯೋಜಿಸಲಾಯಿತು.

ನಾಪೋಕ್ಲು : ದೇಶದ ಸುರಕ್ಷತೆಗೆ ಗಂಭೀರ ಸವಾಲಾಗಿರುವ ಅಕ್ರಮ ಬಾಂಗ್ಲಾ ವಲಸಿಗರನ್ನು ದೇಶದಿಂದ ಹೊರಗಟ್ಟುವ ಉದ್ದೇಶದಿಂದ ‘ಕೊಡಗು ಸುರಕ್ಷಾ ಆಂದೋಲನ ಸಮಿತಿ’ ನೇತೃತ್ವದಲ್ಲಿ ಕೊಡಗಿನಾದ್ಯಂತ ಕೈಗೊಳ್ಳಲಾಗಿರುವ 12 ದಿನಗಳ ಜನಜಾಗೃತಿ ವಾಹನ ಜಾಥಾವು ಬುಧವಾರ ನಾಪೋಕ್ಲು ಬಸ್ ನಿಲ್ದಾಣಕ್ಕೆ ಆಗಮಿಸಿ ಬೃಹತ್ ಜನಜಾಗೃತಿ ಸಭೆ ಆಯೋಜಿಸಲಾಯಿತು.

ಕಾರ್ಯಕ್ರಮದಲ್ಲಿ ಸಂಘಟನೆಗಳ ಪ್ರಮುಖ ಮುಖಂಡರು ಭಾಗವಹಿಸಿ ಪ್ರಸ್ತುತ ದೇಶದ ಆಂತರಿಕ ಸುರಕ್ಷತೆಗೆ ಎದುರಾಗಿರುವ ವಿವಿಧ ಸವಾಲುಗಳು ಹಾಗೂ ಅಕ್ರಮ ವಲಸೆಯಿಂದ ಉಂಟಾಗುವ ಅಪಾಯಗಳ ಕುರಿತು ಸಾರ್ವಜನಿಕರಿಗೆ ಮನವರಿಕೆ ಮಾಡಿಕೊಟ್ಟರು.ದೇಶಪ್ರೇಮ ಹಾಗೂ ನಾಡಿನ ಸುರಕ್ಷತೆಯ ಹಿತದೃಷ್ಟಿಯಿಂದ ನಡೆಯುತ್ತಿರುವ ಈ ಮಹತ್ವದ ಜಾಗೃತಿ ಜಾಥಾ ಮತ್ತು ಸಭೆಯಲ್ಲಿ ಸ್ಥಳೀಯ ಹಕ್ಕುಗಳ ರಕ್ಷಣೆಗೆ ಶ್ರೀ ಸೋಮನಾಥನಂದ ಪುರಿ ಸ್ವಾಮೀಜಿ ಕರೆ ನೀಡಿದರು. ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಸ್ವಾಮೀಜಿ, ‘ಕೊಡಗಿನ ಜನರು ತಮ್ಮ ಮೂಲ ಅಸ್ತಿತ್ವ ಮತ್ತು ಹಕ್ಕುಗಳ ಬಗ್ಗೆ ಎಚ್ಚರ ತಪ್ಪಿದರೆ ಶೋಷಣೆಗೆ ಒಳಗಾಗಬೇಕಾಗುತ್ತದೆ’ ಎಂದು ಕಳವಳ ವ್ಯಕ್ತಪಡಿಸಿದರು. ನಾಪೋಕ್ಲು ಮಾಜಿ ಸೈನಿಕರ ಸಂಘದ ಅಧ್ಯಕ್ಷ ಕೊಂಡಿರ ಗಣೇಶ್ ಅವರು, ಭವಿಷ್ಯದಲ್ಲಿ ಎದುರಾಗಬಹುದಾದ ಸವಾಲುಗಳು ದೂರವಿಲ್ಲ, ಅವು ಖಂಡಿತವಾಗಿಯೂ ಬಂದೇ ಬರುತ್ತವೆ ಎಂದು ಎಚ್ಚರಿಸಿದರು. ಬಿಜೆಪಿ ಸ್ಥಾನೀಯ ಸಮಿತಿ ಸಂಚಾಲಕ ಶಿವಚಳಿಯಂಡ ಅಂಬಿ ಕಾರ್ಯಪ್ಪ, ಅಕ್ರಮ ಬಾಂಗ್ಲಾದೇಶಿಗರ ವಿರುದ್ಧದ ಹೋರಾಟದ ಕುರಿತು ಮಾತನಾಡಿದ ಪ್ರಮುಖ ಅಂಶಗಳನ್ನು ಹಂಚಿಕೊಂಡರು.ಜಿಲ್ಲಾಡಳಿತವು ತಕ್ಷಣವೇ ಅಕ್ರಮವಾಗಿ ನೆಲೆಸಿರುವವರನ್ನು ಪತ್ತೆ ಹಚ್ಚಿ, ಅವರ ಗುರುತಿನ ಚೀಟಿ ಹಾಗೂ ದಾಖಲಾತಿಗಳನ್ನು ಪರಿಶೀಲಿಸಬೇಕು. ಸೂಕ್ತ ದಾಖಲೆಗಳಿಲ್ಲದ ಅಕ್ರಮ ನಿವಾಸಿಗಳನ್ನು ತಕ್ಷಣವೇ ಹೊರಹಾಕುವ ಕಾರ್ಯವಾಗಬೇಕು ಮತ್ತು ಈ ಹೋರಾಟಕ್ಕೆ ಪ್ರತಿಯೊಬ್ಬರೂ ಸಂಪೂರ್ಣ ಸಹಕಾರ ನೀಡಬೇಕು ಎಂದು ಆಗ್ರಹಿಸಿದರು. ಇದಕ್ಕೂ ಮೊದಲು ರಥವನ್ನು ಸ್ವಾಗತಿಸಿಕೊಂಡು ಭಾರತಾಂಬೆಯ ಭಾವಚಿತ್ರಕ್ಕೆ ಎಲ್ಲರೂ ಸೇರಿ ಪುಷ್ಪಾರ್ಚನೆ ಮಾಡಲಾಯಿತು. ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಪ್ರಮುಖ್ ಸುನಿಲ್ ಮಾದಾಪುರ ನಿರೂಪಿಸಿದದರು. ರಾಷ್ಟ್ರೀಯ ಸ್ವಯಂಸೇವಕದ ಸಂಘದ ಪ್ರಮುಖರಾದ ಕಂಗಂಡ ಜಾಲಿ ಪೂವಪ್ಪ ವಾಸ್ತವಿಕ ನುಡಿಯಾಡಿದರು.ಜಾಗೃತಿ ಸಭೆಯಲ್ಲಿ ಬಿ ಎಂ ಪ್ರತೀಪ, ಶಿವಚಳಿಯಂಡ ಜಗದೀಶ್, ಪಿ ಎಂ ನಿರನ್ ಕಾರ್ಯಪ್ಪ, ಅರೆಯಡ ರತ್ನ ಪೆಮ್ಮಯ್ಯ , ವಿ ಎಚ್ ಪಿ ರಾಧಾಕೃಷ್ಣ ರೈ, ಪಟ್ಟು ಪೆಮ್ಮಯ್ಯ , ಸೂರ್ಯ ಕುಮಾರ್, ಕೇಟೋಳಿರ ಗಣಪತಿ, ಡಾಲಿ ಅಚ್ಚಪ್ಪ, ರಮ್ಮಿ, ಪ್ರದೀಪ್, ಪ್ರಕಾಶ್, ಮೇದಪ್ಪ, ಟಿಎ ಮಿಟ್ಟು, ಗಿರಿ ಪೆಮ್ಮಯ್ಯ , ಜೀವನ್ ಮತ್ತಿತರರಿದ್ದರು.