ಮಳಖೇಡದಲ್ಲಿ ಸಾಮೂಹಿಕ ಪಾರಾಯಣ

| Published : Jan 25 2024, 02:01 AM IST

ಸಾರಾಂಶ

ಅಯೋಧ್ಯೆಯಲ್ಲಿ ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆ ನಿರ್ವಿಜ್ಞವಾಗಿ ನೆರವೇರಿದ ಕಾರಣ ಮಳಖೇಡದಲ್ಲಿ ಸಾಮೂಹಿಕ ಪಾರಾಯಣ, ಶ್ರೀರಾಮ ದೇವರ ರಥೋತ್ಸವ, ಭಜನೆ ಆಚರಿಸಲಾಯಿತು.

ಕನ್ನಡಪ್ರಭ ವಾರ್ತೆ ಕಲಬುರಗಿ

ಅಯೋಧ್ಯೆಯಲ್ಲಿ ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆ ನಿರ್ವಿಜ್ಞವಾಗಿ ನೆರವೇರಿದ ಕಾರಣ ಮಳಖೇಡದಲ್ಲಿ ಸಾಮೂಹಿಕ ಪಾರಾಯಣ, ಶ್ರೀರಾಮ ದೇವರ ರಥೋತ್ಸವ, ಭಜನೆ ಆಚರಿಸಲಾಯಿತು.

ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರ ಆದೇಶ ಮೇರೆಗೆ ವಿಶ್ವ ಮಧ್ವ ಮಹಾ ಪರಿಷತ್ ಕಲಬುರ್ಗಿ ಅಡಿಯಲ್ಲಿ ಬರುವ ಎಲ್ಲಾ ಪಾರಾಯಣ ಸಂಘ ಗಳು ಪ್ರತಿ ವರ್ಷ ''''ರಾಮ ಪ್ರತಿಷ್ಠಾಪನೆಯ'''' ಮರು ದಿನವನ್ನು ಸಾಮೂಹಿಕ ಪಾರಾಯಣ ಮಳಖೇಡದಲ್ಲಿಯೇ ಆಚರಣೆ ಮಾಡಬೇಕು ಎಂದು ಶ್ರೀಪಾದಂಗಳವರ ಆದೇಶಿಸಿದ್ದರು.

ಪಂಡಿತ ವೆಂಕಣ್ಣಾಚಾರ್ಯ ಪುಜಾರ ಮಾತನಾಡಿ, ತ್ರೇತಾಯುಗದಲ್ಲಿ ಲವ ಕುಶ ಈ ಕಾಗಿಣಾ ನದಿ ತೀರದಲ್ಲಿ ಬಂದು ತಪಸ್ಸು ಮಾಡಿದ್ದರು. ಇಂತಹ ಪುಣ್ಯ ಸ್ಥಳ ಅದಕ್ಕಾಗಿ ಜಯತೀರ್ಥರು ಇಲ್ಲಿ ಬಂದು ನೆಲೆಸಿದ್ದರು ನಂತರ ಅವರ ಮೂಲ ವೃಂದಾವನ ಇಲ್ಲಿಯೇ ಆಗಿತ್ತು ಅನ್ನುವ ಹಳೆಯ ಚರಿತ್ರೆಯಲ್ಲಿ ಕಾಣಬಹುದು ಎಂದು ಹೇಳಿದರು.

ಹುಬ್ಬಳ್ಳಿಯ ಜಯತೀರ್ಥ ಆಚಾರ್ಯ ಗುರುಗಳಾದ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರ ಮಹಿಮೆ ಹೇಳಿದರು. ಪಾರಾಯಣ ಸಂಘಗಳ ಸಂಚಾಲಕ ರವಿ ಲಾತೂರಕರ, ಪದ್ಮನಾಭ ಆಚಾರ್ಯ ಜೋಶಿ, ಡಿ ಕೆ ಕುಲಕರ್ಣಿ, ಗುಂಡಾಚಾರ್ಯ ನರಬೋಳ ,ಜಗನ್ನಾಥ್ ಸಗರ,ಜಗನ್ನಾಥ್ ಮೊಗರೆ, ರಾಮಾಚಾರ್ಯ ಮೋಗರೆ, ಎನ್ ವಿ ಕುಲಕರ್ಣಿ, ವಿಜಯ ಕುಮಾರ್ ಕುಲಕರ್ಣಿ, ಸುರೇಶ್ ಕುಲಕರ್ಣಿ ಅನಿಲ್ ಕುಲಕರ್ಣಿ, ರಾಮಾಚಾರ್ಯ ನಗನೂರ, ತಿರುಪತಿ ಆಚಾರ್ಯ,ಕಲಬುರ್ಗಿ ನಗರದ ಎಲ್ಲಾ ಪಾರಾಯಣ ಸಂಘಗಳ ಸದಸ್ಯರು ಉಪಸ್ಥಿತರಿದ್ದರು.