ಬಂಟಕಲ್ಲು ದೇವಳದಲ್ಲಿ ಸಾಮೂಹಿಕ ವಾಹನ ಪೂಜೆ

| Published : Nov 04 2024, 12:18 AM IST

ಸಾರಾಂಶ

ಪೂಜಾ ಕಾರ್ಯಕ್ರಮವನ್ನು ಶಿರ್ವ ಪೋಲಿಸ್ ಠಾಣಾಧಿಕಾರಿ ಸಕ್ತಿವೇಲು ಉದ್ಘಾಟಿಸಿ ಮಾತನಾಡಿ, ವಾಹನಗಳನ್ನು ಚಲಾಯಿಸುವಾಗ ಸಾರಿಗೆ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ವಾಹನ ಚಾಲನೆಯನ್ನೂ ಶ್ರದ್ಧೆಯಿಂದ ಮಾಡಿದಾಗ ಅಪಘಾತ ರಹಿತವಾಗಿ ಸುರಕ್ಷಿತ ಚಾಲನೆ ಸಾಧ್ಯವಾಗುವುದು ಎಂದರು.

ಕನ್ನಡಪ್ರಭ ವಾರ್ತೆ ಕಾಪು

ಇಲ್ಲಿನ ಶ್ರೀಕ್ಷೇತ್ರ ಬಂಟಕಲ್ಲು ಶ್ರೀದುರ್ಗಾಪರಮೇಶ್ವರೀ ದೆವಳದಲ್ಲಿ ರಾಜಾಪುರ ಸಾರಸ್ವತ ಸೇವಾ ವೃಂದದ ಆಶ್ರಯದಲ್ಲಿ ವರ್ಷಂಪ್ರತಿಯಂತೆ ಜರುಗುವ ಸಾಮೂಹಿಕ ವಾಹನ ಪೂಜಾ ಧಾರ್ಮಿಕ ಅನುಷ್ಠಾನಗಳು ಶನಿವಾರ ಶ್ರೀಕ್ಷೇತ್ರ ವೈದಿಕರಾದ ವೇದಮೂರ್ತಿ ಶ್ರೀಕಾಂತ್ ಭಟ್ ನೇತೃತ್ವದಲ್ಲಿ ಜರುಗಿದವು.

ಪೂಜಾ ಕಾರ್ಯಕ್ರಮವನ್ನು ಶಿರ್ವ ಪೋಲಿಸ್ ಠಾಣಾಧಿಕಾರಿ ಸಕ್ತಿವೇಲು ಉದ್ಘಾಟಿಸಿ ಮಾತನಾಡಿ, ವಾಹನಗಳನ್ನು ಚಲಾಯಿಸುವಾಗ ಸಾರಿಗೆ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ವಾಹನ ಚಾಲನೆಯನ್ನೂ ಶ್ರದ್ಧೆಯಿಂದ ಮಾಡಿದಾಗ ಅಪಘಾತ ರಹಿತವಾಗಿ ಸುರಕ್ಷಿತ ಚಾಲನೆ ಸಾಧ್ಯವಾಗುವುದು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೇವಾ ವೃಂದದ ಅಧ್ಯಕ್ಷ ಕೆ.ಆರ್. ಪಾಟ್ಕರ್ ವಹಿಸಿದ್ದರು. ಶ್ರೀ ಕ್ಷೇತ್ರದ ಆಡಳಿತ ಮೊಕ್ತೇಸರ ಗಂಪದಬೈಲು ಜಯರಾಮ ಪ್ರಭು, ನಿಕಟಪೂರ್ವ ಆಡಳಿತ ಮೊಕ್ತೇಸರ ಶಶಿಧರ ವಾಗ್ಲೆ ಸಡಂಬೈಲು ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿ ಅಧ್ಯಕ್ಷ ಉಮೇಶ ಪ್ರಭು ಪಾಲಮೆ, ನಿವೃತ್ತ ಶಿಕ್ಷಕ ಬಿ. ಪುಂಡಲೀಕ ಮರಾಠೆ, ಶ್ರೀದೇವಳದ ಆಡಳಿತ ಮಂಡಳಿ ಮಾಜಿ ಅಧ್ಯಕ್ಷ ಪಿ. ದಯಾನಂದ ಕಾಮತ್ ಮೂಡುಬೆಳ್ಳೆ, ಆಡಳಿತ ಮಂಡಳಿ ಸದಸ್ಯರಾದ ದೇವದಾಸ್ ಪಾಟ್ಕರ್ ಮುದರಂಗಡಿ, ರಾಮದಾಸ್ ಪ್ರಭು, ರಾಘವೇಂದ್ರ ನಾಯಕ್ ಪಾಲಮೆ, ಅನಂತರಾಮ ವಾಗ್ಲೆ, ನಿವೃತ್ತ ಯೋಧ ರಾಜೇಂದ್ರ ಪಾಟ್ಕರ್, ವೀರೇಂದ್ರ ಪಾಟ್ಕರ್, ಕಾರು ಚಾಲಕ ಮಾಲಕರ ಸಂಘದ ಅಧ್ಯಕ್ಷ ಉಮೇಶ್ ರಾವ್ ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ಗೋವುಪೂಜೆ ನಡೆಯಿತು. ಸೇವಾ ವೃಂದದ ಕಾರ್ಯದರ್ಶಿ ವಿಶ್ವನಾಥ್ ಬಾಂದೇಲ್ಕರ್ ವಂದಿಸಿದರು. ನೂರಕ್ಕೂ ಅಧಿಕ ವಾಹನ ಮಾಲಕರು ವಾಹನದೊಂದಿಗೆ ಪಾಲ್ಗೊಂಡಿದ್ದರು. ಶ್ರೀದೇವಳದ ಪ್ರಬಂಧಕರಾದ ಕೃಷ್ಣಮೂರ್ತಿ ಪಾಟ್ಕರ್ ಉಪಾಹಾರದ ವ್ಯವಸ್ಥೆ ಮಾಡಿದ್ದರು.