ಕುಕನೂರಿನಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮ

| Published : Dec 19 2023, 01:45 AM IST

ಸಾರಾಂಶ

ಭಾರತ ಸಂಸ್ಕೃತಿ ಪ್ರಕಾರ ಸತಿ-ಪತಿಗಳನ್ನು ಶಿವ-ಪಾರ್ವತಿ ಸ್ವರೂಪ ಅನ್ನುತ್ತಾರೆ. ಧರ್ಮ ಮತ್ತು ನೀತಿ ಪ್ರಕಾರ ಇಲ್ಲಿ ವಿವಾಹ ಕಾರ್ಯ ಜರುಗುತ್ತವೆ. ಸಾಮೂಹಿಕ ವಿವಾಹವಾದ ದಂಪತಿಗಳು ಸಾಮರಸ್ಯದಿಂದ ಬಾಳಬೇಕು.

ಕುಕನೂರು: ಗ್ರಾಮ ಸಮೃದ್ಧವಾಗಬೇಕಾದರೆ ಆ ಗ್ರಾಮದ ಜನರ ಮನಸ್ಸು ವಿಶಾಲ ಆಗಿರಬೇಕು ಎಂದು ತಾಪಂ ಮಾಜಿ ಉಪಾಧ್ಯಕ್ಷ ಕಳಕಪ್ಪ ಕಂಬಳಿ ಹೇಳಿದರು.

ತಾಲೂಕಿನ ಗೊರ್ಲೆಕೊಪ್ಪ ಗ್ರಾಮದಲ್ಲಿ ಶ್ರೀ ಕಟ್ಟಿಬಸವಲಿಂಗೇಶ್ವರ, ಶ್ರೀ ಪತ್ರಿವನ ಬಸವೇಶ್ವರ ಕಾರ್ತಿಕೋತ್ಸವ ಹಾಗು 26ನೇ ವರ್ಷದ ಪುರಾಣ ಮಂಗಲೋತ್ಸವ ಹಾಗು ನೂತನ ಉಚ್ಚಾಯ ರಥೋತ್ಸವ ಕಾರ್ಯಕ್ರಮ ಪ್ರಯುಕ್ತ ಜರುಗಿದ ಸಾಮೂಹಿಕ ವಿವಾಹ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು.ಯಾವುದೇ ಕಾರ್ಯಕ್ರಮ ಇರಲಿ ಅಚ್ಚುಕಟ್ಟಾಗಿ ಯಶಸ್ವಿಯಾಗಬೇಕಾದರೆ ಇಡೀ ಗ್ರಾಮಸ್ಥರು ನಿತ್ಯದ ಕೆಲಸ ಬದಿಗೊತ್ತು ಗ್ರಾಮದ ಕಾರ್ಯಕ್ರಮ ನಮ್ಮ ಮನೆಯ ಕಾರ್ಯವೆಂದು ಭಾವಿಸಿದಾಗ ಮಾತ್ರ ಸಾಧ್ಯವಾಗುತ್ತದೆ. ಆ ನಿಟ್ಟಿನಲ್ಲಿ ಸರ್ವರಂಗದಲ್ಲೂ ಗೊರ್ಲೆಕೊಪ್ಪ ಗ್ರಾಮ ಶ್ರೀಮಂತವಾಗಿದೆ ಎಂದರು.ಕುಕನೂರಿನ ಅನ್ನದಾನೀಶ್ವರ ಶಾಖಾಮಠದ ಮಹಾದೇವ ಸ್ವಾಮೀಜಿ ಮಾತನಾಡಿ, ಸಾಮೂಹಿಕ ವಿವಾಹ ಎಂಬುದು ಪುಣ್ಯದ ಕಾರ್ಯ. ಸಾಮೂಹಿಕವಾಗಿ ವಿವಾಹ ಆಗುವುದು ಪುಣ್ಯದ ಕೆಲಸ. ಇಂತಹ ಸಾಮೂಹಿಕ ವಿವಾಹಕ್ಕೆ ತಾಪಂ ಮಾಜಿ ಉಪಾಧ್ಯಕ್ಷ ಕಳಕಪ್ಪ ಕಂಬಳಿ ಪ್ರತಿವರ್ಷ ತಾಳಿಯನ್ನು ದೇಣಿಗೆಯಾಗಿ ಕೊಡುತ್ತಾ ಬರುತ್ತಿದ್ದಾರೆ. ಬಡವರ ಕಷ್ಟಕ್ಕೆ ಸ್ಪಂದಿಸುತ್ತಿರುವುದು ಸಾರ್ಥಕ ಕೆಲಸ ಎಂದರು.ಗುಳೇದಗುಡ್ಡದ ಅಭಿನವ ಒಪ್ಪತ್ತೇಶ್ವರ ಸ್ವಾಮೀಜಿ ಮಾತನಾಡಿ, ಭಾರತ ಸಂಸ್ಕೃತಿ ಪ್ರಕಾರ ಸತಿ-ಪತಿಗಳನ್ನು ಶಿವ-ಪಾರ್ವತಿ ಸ್ವರೂಪ ಅನ್ನುತ್ತಾರೆ. ಧರ್ಮ ಮತ್ತು ನೀತಿ ಪ್ರಕಾರ ಇಲ್ಲಿ ವಿವಾಹ ಕಾರ್ಯ ಜರುಗುತ್ತವೆ. ಸಾಮೂಹಿಕ ವಿವಾಹವಾದ ದಂಪತಿಗಳು ಸಾಮರಸ್ಯದಿಂದ ಬಾಳಬೇಕು ಎಂದರು.ಜಿಪಂ ಮಾಜಿ ಅಧ್ಯಕ್ಷ ರಾಮಣ್ಣ ಭಜಂತ್ರಿ ಮಾತನಾಡಿ, ಬರಗಾಲದಲ್ಲೂ ಗೊರ್ಲೆಕೊಪ್ಪ ಗ್ರಾಮಸ್ಥರು ಬಡವರ್ಗದ ಜನರಿಗೆ ಅನ್ನ ನೀಡಿದವರು. ವಿವಾಹ ಕಾರ್ಯ ಮಾಡಿಕೊಟ್ಟವರು ಎಂದರು.ಯಲಬುರ್ಗಾ ಶ್ರೀಧರ ಮುರುಡಿ ಹಿರೇಮಠದ ಬಸವಲಿಂಗೇಶ್ವರ ಶಿವಾಚಾರ್ಯರು ಮಾತನಾಡಿದರು.ಬೆದವಟ್ಟಿ ಹಿರೇಮಠದ ಶಿವಸಂಗಮೇಶ್ವರ ಶಿವಾಚಾರ್ಯರು, ಬೇನಾಳ ಹಿರೇಮಠದ ಸದಾಶಿವಮಹಾಂತ ಸ್ವಾಮೀಜಿ, ಜಿಗೇರಿ ಹಿರೇಮಠದ ಗುರುಸಿದ್ದೇಶ್ವರ ಸ್ವಾಮೀಜಿ, ಪ್ರಮುಖರಾದ ಚನ್ನಪ್ಪಗೌಡ ಮಾಲಿಪಾಟೀಲ್, ಶರಣಯ್ಯ ಇಟಗಿ, ವೀರಪ್ಪನಗೌಡ ಪೊಲೀಸ್ ಪಾಟೀಲ್, ಮಂಜುನಾಥ ಗುನ್ನಾಳ, ಡಾ.ಶಿವಯ್ಯ ಗಂಧದಮಠ, ಮುಕುಂದಯ್ಯ ಹಿರೇಮಠ, ಶರಣಯ್ಯ ಹಿರೇಮಠ, ಮಹೇಶ ಕಲ್ಮಠ, ಕರಬಸಯ್ಯ ಬಿನ್ನಾಳ, ಸಿದ್ದಯ್ಯ ಲಕ್ಕುಂಡಿಮಠ, ಶಾಂತವೀರಯ್ಯ ಜೂಲ್ಪಿ, ಜಂಬಯ್ಯ ಹಿರೇಮಠ, ಅಂದಯ್ಯ ಲಿಂಗಪುರ, ಗ್ರಾಪಂ ಸದಸ್ಯ ರವಿ ಲಮಾಣಿ, ಹುಚ್ಚೀರಯ್ಯ ಹಿರೇಮಠ, ಬಸಯ್ಯ ಹಿರೇಮಠ, ಪುರಾಣ ಪ್ರವಚನಕಾರ ಪ್ರಭುದೇವಸ್ವಾಮಿ ಇತರರಿದ್ದರು.