ಸಾರಾಂಶ
-ನವ ಜೀವನಕ್ಕೆ ಕಾಲಿಡಲಿರುವ 18 ಜೋಡಿಗಳು
----ಕನ್ನಡಪ್ರಭ ವಾರ್ತೆ ಸುರಪುರ
ವಾಗಣಗೇರಾ ರಸ್ತೆಯ ಕುಂಬಾರಪೇಟ ಬಳಿಯ ಎನ್.ಯು. ಕಲ್ಯಾಣ ಮಂಟಪದಲ್ಲಿ ಏ.27ರಂದು ಅಂಬೇಡ್ಕರ್ ಜಯಂತಿ ಹಾಗೂ ಸಾಮೂಹಿಕ ವಿವಾಹ ಆಯೋಜಿಸಲಾಗಿದೆ ಎಂದು ಸತೀಶ ಜಾರಕಿಹೊಳಿ ಅಭಿಮಾನಿಗಳ ಬಳಗದ ಗೌರವಾಧ್ಯಕ್ಷ ಮಲ್ಲಿಕಾರ್ಜುನ ಕಟ್ಟಿಮನಿ ತಿಳಿಸಿದರುನಗರದ ಪತ್ರಿಕಾ ಭವನದಲ್ಲಿ ಸರಳ ಸಾಮೂಹಿಕ ವಿವಾಹದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಅಂದು ಮಧ್ಯಾಹ್ನ 12:30 ಗಂಟೆಗೆ ಡಾ. ಅಂಬೇಡ್ಕರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಜಯಂತಿಗೆ ಚಾಲನೆ ಬಳಿಕ ಸಾಮೂಹಿಕ ವಿವಾಹ ಜರುಗಲಿದೆ. 25 ಜೋಡಿಗಳ ಗುರಿ ಇಟ್ಟು ಕೊಳ್ಳಲಾಗಿದೆ. ಈಗಾಗಲೇ 18 ಜೋಡಿಗಳು ನೋಂದಣಿಯಾಗಿವೆ. ಸರಳ ವಿವಾಹದಲ್ಲಿ ನವಜೀವನಕ್ಕೆ ಕಾಲಿಡುವವರಿಗೆ ಸಮಾಜ ಕಲ್ಯಾಣ ಇಲಾಖೆಯಿಂದ 50 ಸಾವಿರ ರೂ. ಸಹಾಯ ಧನ, ಅಂತರ್ಜಾತಿ ವಿವಾಹಕ್ಕೆ 3.50 ಲಕ್ಷ ರು. ನೆರವು ಸಿಗಲಿದೆ ಎಂದರು.
ಭಾಲ್ಕಿಯ ಕರುಣ ಬುದ್ಧವಿಹಾರ ಪೂಜ್ಯ ನೌಪಾಲ ಬಂತೇಜಿ ಸಾನ್ನಿಧ್ಯ, ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಉದ್ಘಾಟಿಸುವರು, ಸಚಿವ ಶರಣಬಸಪ್ಪಗೌಡ ದರ್ಶನಾಪುರ, ಶಾಸಕ ರಾಜಾವೇಣುಗೋಪಾಲ ನಾಯಕ, ಮಾಜಿ ಸಚಿವ ರಾಜೂಗೌಡ, ಜಿಪಂ ಮಾಜಿ ಅಧ್ಯಕ್ಷ ರಾಜಾ ಹನುಮಪ್ಪ ನಾಯಕ ಇದ್ದರು.ಕಾಂಗ್ರೆಸ್ ಪಕ್ಷದ ಮುಖಂಡ ರವಿನಾಯಕ ಪಾಟೀಲ್, ಕೆಪಿಸಿಸಿ ರಾಜ್ಯ ಕಾರ್ಯದರ್ಶಿ ವಿಠ್ಠಲ್ ಯಾದವ್, ಬೆಂಗಳೂರಿನ ಹೈಕೋರ್ಟ್ ವಕೀಲ ಅನಂತ ನಾಯಕ್, ಬೆಳಗಾವಿ ಮಾನವ ಬಂಧುತ್ವ ವೇದಿಕೆ ವಿಭಾಗೀಯ ಸಂಚಾಲಕ ತೋಳಿ ಭರಮಣ್ಣ ಉಪನ್ಯಾಸ ನೀಡುವರು. ಮುಖಂಡರಾದ ಶಂಕರನಾಯಕ, ರಾಜಾ ಕುಮಾರ ನಾಯಕ, ಡಾ. ಭೀಮಣ್ಣ ಮೇಟಿ, ಡಾ. ಬಿ.ಎಂ. ಹಳ್ಳಿಕೋಟಿ, ಚಂದ್ರಶೇಖರ ದಂಡಿನ್, ಹನುಮಗೌಡ ಮರಕಲ್ ಇದ್ದರು.
ಸತೀಶ ಜಾರಕಿಹೊಳಿ ಅಭಿಮಾನಿಗಳ ಬಳಗದ ಅಧ್ಯಕ್ಷ ಸಾಹೇಬಗೌಡ ಪಾಟೀಲ್ ವಾಗಣಗೇರಾ, ಚಾಂದಾಪಾಷಾ ಮುಜಾವರ, ಇಮಾಮ್‌ಸಾಬ್ ಅರೆಕೇರಾ ಇದ್ದರು.-
25ವೈಡಿಆರ್7 : ಸುರಪುರ ನಗರದ ಪತ್ರಿಕಾ ಭವನದಲ್ಲಿ ಸತೀಶ ಜಾರಕಿಹೊಳಿ ಅಭಿಮಾನಿಗಳ ಬಳಗದ ಸದಸ್ಯರು ಸಾಮೂಹಿಕ ವಿವಾಹದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರು.