ಸಾರಾಂಶ
ಮಾರ್ಚ್ ತಿಂಗಳಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಮಂಡಿಸಿದ ವಿತ್ತ ಬಜೆಟ್‌ನಲ್ಲಿ 2026, ಏ.1ಕ್ಕೆ ಮೊದಲು ನಿವೃತ್ತಿಯಾದ ಸರ್ಕಾರಿ ನೌಕರರು ಹಾಗೂ ಕುಟುಂಬದವರಿಗೆ ಪಿಂಚಣಿಯನ್ನು 8ನೇ ವೇತನ ಆಯೋಗದಂತೆ ಪಿಂಚಣಿ ಪರಿಷ್ಕರಿಸಲು ಸಾಧ್ಯವಿಲ್ಲ ಎಂದು ನಿರ್ಣಯ ಕೈಗೊಳ್ಳುತ್ತಿರುವುದು ಸರಿಯಲ್ಲ.
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
8ನೇ ವೇತನ ಆಯೋಗದ ಪಿಂಚಣಿ ಪರಿಷ್ಕರಣೆಯನ್ನು ನಿವೃತ್ತ ನೌಕರರು ಹಾಗೂ ಕುಟುಂಬದವರಿಗೆ ಮಾಡಲು ಆಗುವುದಿಲ್ಲ ಎಂಬ ನಿರ್ಣಯವನ್ನು ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ಕೈಗೊಂಡಿರುವುದನ್ನು ವಿರೋಧಿಸಿ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ತಾಲೂಕು ಘಟಕ ಪಟ್ಟಣದ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದರು.ಮಾರ್ಚ್ ತಿಂಗಳಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಮಂಡಿಸಿದ ವಿತ್ತ ಬಜೆಟ್‌ನಲ್ಲಿ 2026, ಏ.1ಕ್ಕೆ ಮೊದಲು ನಿವೃತ್ತಿಯಾದ ಸರ್ಕಾರಿ ನೌಕರರು ಹಾಗೂ ಕುಟುಂಬದವರಿಗೆ ಪಿಂಚಣಿಯನ್ನು 8ನೇ ವೇತನ ಆಯೋಗದಂತೆ ಪಿಂಚಣಿ ಪರಿಷ್ಕರಿಸಲು ಸಾಧ್ಯವಿಲ್ಲ ಎಂದು ನಿರ್ಣಯ ಕೈಗೊಳ್ಳುತ್ತಿರುವುದನ್ನು ಖಂಡಿಸಿದರು.
ಇದರಿಂದ ಪಿಂಚಣಿದಾರರಿಗೆ ಹಾಗೂ ಕುಟುಂಬದವರು ಸಂಕಷ್ಟಕ್ಕೆ ಒಳಗಾಗಲಿದ್ದಾರೆ. ಹಾಗಾಗಿ ಪ್ರಧಾನಿಗಳು ಮಧ್ಯ ಪ್ರವೇಶ ಮಾಡಿ ಸದರಿ ಬಿಲ್ ಅನ್ನು ತಡೆ ಹಿಡಿಯಬೇಕು. 8ನೇ ವೇತನ ಆಯೋಗದ ಎಲ್ಲಾ ಸೌಲಭ್ಯಗಳನ್ನು ನಿವೃತ್ತ ನೌಕರರು ಹಾಗೂ ಕುಟುಂಬದವರಿಗೂ ನೀಡಬೇಕು ಎಂದು ಒತ್ತಾಯಿಸಿದರು.ಪ್ರತಿಭಟನೆ ನಂತರ ತಹಸೀಲ್ದಾರ್ ಲೋಕೇಶ್ ಅವರಿಗೆ ಡೀಸಿ ಮೂಲಕ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಮನವಿ ಪತ್ರವನ್ನು ಸಲ್ಲಿಸಿ ನಿರ್ಣಯ ವಾಪಸ್ ಪಡೆಯುವಂತೆ ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ತಾಲೂಕು ಅಧ್ಯಕ್ಷ ನಜೀರ್ ಅಹಮದ್, ಉಪಾಧ್ಯಕ್ಷರಾದ ನರಸಿಂಹರಾಜೇಅರಸ್, ಮಾಕವಳ್ಳಿ ವಸಂತಕುಮಾರ್, ಕಾರ್ಯದರ್ಶಿ ಶ್ರೀಕಂಠೇಗೌಡ, ಜಂಟಿ ಕಾರ್ಯದರ್ಶಿ ನಿವೃತ್ತ ಇಂಜಿನಿಯರ್ ಎನ್.ಶಿವಲಿಂಗಪ್ಪ, ಖಜಾಂಚಿ ಕಾಳೇಗೌಡ, ಆಂತರಿಕ ಲೆಕ್ಕ ಪರಿಶೋಧಕ ಎ.ಎಲ್.ನಂಜಪ್ಪ, ಪದಾಧಿಕಾರಿಗಳಾದ ಎ.ಎನ್.ರಾಮಕೃಷ್ಣ, ಬಿ.ಡಿ.ಚಂದ್ರಶೇಖರ್, ಸಂಪತ್ತು, ಬಂಗಾರಯ್ಯ, ನಿವೃತ್ತ ದೈಹಿಕ ಶಿಕ್ಷಕ ನಾಗರಾಜು, ಕೆ.ಆರ್.ಬನ್ನಾರಿ ಸೇರಿದಂತೆ ನೂರಾರು ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ಸದಸ್ಯರು ಭಾಗವಹಿದ್ದರು.ಆ.3ರಂದು ಕಲಾವಿದರ, ಸಾಹಿತಿಗಳ ಸಮಾಗಮ
ಮಂಡ್ಯ: ಸಿಂಧುಶ್ರೀ ಕಲಾ ಸಂಸ್ಥೆ ಹೆಮ್ಮಿಗೆ, ಸಂಧ್ಯಾ ಸಾಂಸ್ಕೃತಿಕ ವೇದಿಕೆ ಸಾದೊಳಲು ಆ.3 ರಂದು ನಗರದ ಗಾಂಧಿಭವನದಲ್ಲಿ ಹಿರಿಯ- ಕಿರಿಯ ಕಲಾವಿದರ, ಸಾಹಿತಿಗಳ ಸಮಾಗಮ ಸಮಾರಂಭ ನಡೆಯಲಿದೆ ಎಂದು ಸಿಂಧುಶ್ರೀ ಕಲಾ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ಎಚ್.ಎಸ್.ಶಿವಣ್ಣ ಹೆಮ್ಮಿಗೆ ತಿಳಿಸಿದ್ದಾರೆ. ಸಮಾರಂಭವನ್ನು ಜಿಲ್ಲಾ ಬಿಜೆಪಿ ಮುಖಂಡ ಎಚ್.ಆರ್.ಅರವಿಂದ್ ಉದ್ಘಾಟಿಸುವರು. ಸಾಹಿತಿ ಸತೀಶ್ ಜವರೇಗೌಡ ಅಧ್ಯಕ್ಷತೆ ವಹಿಸುವರು. ಅತಿಥಿಗಳಾಗಿ ರಂಗಭೂಮಿ ಹಿರಿಯ ಕಲಾವಿದ ಬಸವರಾಜು ಸಂಪಳ್ಳಿ, ಜಾನಪದ ತಜ್ಞೆ ಡಾ.ಎಂ.ಕೆಂಪಮ್ಮ, ಹಿರಿಯ ಚಿಂತಕ ಹುಲ್ಕೆರೆ ಮಹದೇವು, ಗಾಯಕ ಗುರುಮೂರ್ತಿ ಭಾಗಿಯಾಗಲಿದ್ದಾರೆ.ಚಿತ್ರಕಲಾವಿದ ಡಾ.ಮಾರ್ಕಾಲು ದೇವರಾಜು, ಕಲಾವಿದ ಕೆಂಚೇಗೌಡ ಕಾಳೇನಹಳ್ಳಿ, ಕವಿ ಎಂ.ಸತ್ಯನಾರಾಯಣ ಸಾಗರ, ವಿಚಾರ ವಾಗ್ಮಿ ಎಲ್.ಸಂದೇಶ್ ಸೇರಿ ಹಲವರು ಪಾಲ್ಗೊಳ್ಳಲಿದ್ದಾರೆ. ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿನ ಸಾಧಕರಿಗೆ ಪ್ರಶಸ್ತಿ- ಪುರಸ್ಕಾರ ನೀಡಿ ಗೌರವಿಸಲಾಗುವುದು, ಹಲವು ಕವಿಗಳು ಕವನವಾಚನ ಮಾಡಲಿದ್ದಾರೆ.